ಭದ್ರಾವತಿ(ಡಿ,20): ”ಸ್ವರಾಜ್ಯ 75″ ಇವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅನಾವರಣ ಅಭಿಯಾನದ 21ನೇ ಮನೆಯ ಕಾಯ೯ಕ್ರಮ ಭದ್ರಾವತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಮ್ ನಾಗಪ್ಪ ರವರ ಮನೆಗೆ ನಾಮ ಫಲಕ ಅಳವಡಿಸುವ ಮೂಲಕ ಹಮ್ಮಿಕೊಳ್ಳಲಾಯಿತು . ವೈದ್ಯಾಧಿಕಾರಿ ಡಾ.ಮಂಜುನಾಥ್ ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು. ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಗೈದು ಭದ್ರಾವತಿ ಎಮ್ ನಾಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕರಾದ ನಾಗೇಶ್ ಭದ್ರಾವತಿ ಯವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ […]
Month: December 2022
ಡಾ. ಶಿವರಾಮ ಕಾರಂತ್ ಬಾಲ ಪುರಸ್ಕಾರಕ್ಕೆ ಸಂಜಿತ್ ಎಂ ದೇವಾಡಿಗ ಆಯ್ಕೆ
ಕೋಟ (ಡಿ.18): ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ( ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ 2022ನೇ ಸಾಲಿನ ಡಾ. ಶಿವರಾಮ ಕಾರಂತ್ ಬಾಲ ಪುರಸ್ಕಾರಕ್ಕೆ ಸಂಜಿತ್ ಎಂ ದೇವಾಡಿಗ ಆಯ್ಕೆಯಾಗಿದ್ದಾರೆ. ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೆ ತರಗತಿಯ ವಿಧ್ಯಾರ್ಥಿಯಾಗಿರುವ ಸಂಜಿತ್ ಆಯ್ಕೆಗೆ ಶಾಲೆಯ ಭೋಧಕ ವ್ರoದ ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂಧನೆ ಸಲ್ಲಿಸಿದ್ದಾರೆ.
ಹೆಮ್ಮಾಡಿ :ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2K22 ಸಂಭ್ರಮ
ಹೆಮ್ಮಾಡಿ(ಡಿ,18): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಡಿ.14ರಂದು ಜನತಾ ಆವಿಷ್ಕಾರ್ 2K22(Business day) ವಿನೂತನವಾದ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿ.ವಿ.ವಿ.ಮಂಡಳಿ (ರಿ) ಅಧ್ಯಕ್ಷರು ಹಾಗೂ ಕ.ರಾ.ರ.ಸಾ.ನಿಗಮದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ.ಕೆ.ಗೋಪಾಲ ಪೂಜಾರಿಯವರು ಮಾತನಾಡಿ ಜನತಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿದರು.ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಆವಿಷ್ಕಾರ್ ನಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜನತಾ ಫಿಶ್ […]
ಗಂಗೊಳ್ಳಿ:ಮರಣಿ ಮಾಂಟೆ ನಾಟಕ ಪ್ರದರ್ಶನ
ಗಂಗೊಳ್ಳಿ(ಡಿ.18): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಮರಣಿ ಮಾಂಟೆ ಎನ್ನುವ ಭಿನ್ನ ಶೈಲಿಯ ನಾಟಕ ಇತ್ತೀಚೆಗೆ ಪ್ರದರ್ಶನಗೊಂಡಿತು . ಸಾವಿನ ದೇವತೆಯೊಂದಿಗೆ ಹೋರಾಡುವ ಕುತೂಹಲಕಾರಿ ಕಥಾನಕವನ್ನು ಮರಣಿ ಮಾಂಟೆ ನಾಟಕವು ಒಳಗೊಂಡಿದ್ದು ಇದನ್ನು ಇಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ್ದಾರೆ. ಶ್ರಾವ್ಯ ಎನ್, ನಿಶಾ ಬಿ ಪೂಜಾರಿ ಹೃತಿಕ, ದಿಯಾ, ಅಮೀಕ್ಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಒಟ್ಟು […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. – ಮಹೋತ್ಸವ 2022
ಕುಂದಾಪುರ (ಡಿ,18): ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ “ಮಹೋತ್ಸವ 2022 ಇತ್ತೀಚೆಗೆ ನಡೆಯಿತು . ಶಾಲಾ ವಾರ್ಷಿಕೋತ್ಸವ ಸಮಾರಂಭವು ಬೈಂದೂರು ಶಾಸಕರು ಹಾಗೂ ಶಾಲಾ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಪನ್ನಗೊoಡಿತು. ಸಮಾರಂಭದಲ್ಲಿ ಎಸ್. ಎಸ್. ಎಲ್. ಸಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ […]
ಗಂಗೊಳ್ಳಿ: ನಾಯಿ ನಾನು ಪುಸ್ತಕ ಬಿಡುಗಡೆ
ಗಂಗೊಳ್ಳಿ(ಡಿ.18): ಸಾಹಿತ್ಯ ಸೇರಿದಂತೆ ಎಲ್ಲ ರಂಗಗಳಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆಯೂ ಅಪಾರ ಪರಿಶ್ರಮ ಅಡಗಿರುತ್ತದೆ. ಅದನ್ನು ಮೆಚ್ಚಿ ಅಭಿನಂದಿಸುವ ಪರಸ್ಪರ ಸಹಕರಿಸುವ ಮನಸ್ಸುಗಳು ಸಮಾಜದಲ್ಲಿ ಹೆಚ್ಚಬೇಕು ಎಂದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ ಯವರು ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಸಂಜೀವ ಪಾರ್ವತಿ ಪ್ರಕಾಶನದ ಆಶ್ರಯದಲ್ಲಿ ಗಂಗೊಳ್ಳಿಯ ಬಿಲ್ಲವರ ಹಿತ ರಕ್ಷಣಾ ವೇದಿಕೆ ಮತ್ತು ರೋಟರಿ […]
ಸುಧಾಕರ್ ಪಾರಂಪಳ್ಳಿಯವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಕುಂದಾಪುರ(ಡಿ,18): ಇಲ್ಲಿನ ಡಾ|ಬಿ.ಬಿ.ಹೆಗ್ಡೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾಕರ್ ಪಾರಂಪಳ್ಳಿಯವರಿಗೆ ಗ್ಲೋಬಲ್ ಮ್ಯಾನೆಜ್ಮೆಂಟ್ ಕೌನ್ಸಿಲ್ ಅಹಮದಾಬಾದ್ ಸಂಸ್ಥೆ ರಾಷ್ಟ್ರ ಮಟ್ಟದ ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ- ನ್ಯಾಷನಲ್ ಎಕ್ಸ್ ಲೆನ್ಸ್ ಅವಾರ್ಡ್-2022 ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿ.ವಿ.ಅರ್ಥಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಹ ಇವರು ಸೇವೆ ಸಲ್ಲಿಸಿದ್ದಾರೆ.
ಕುಂದಾಪುರದ ಕುವರಿ ದಿವ್ಯಾ ಶೆಟ್ಟಿಯಿಂದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆ
ಕುಂದಾಪುರ (ಡಿ,18); ಕುಂದಾಪುರದ ಕುವರಿ ಯೋಗ ಪಟು ದಿವ್ಯಾ ಶೆಟ್ಟಿ ಸತತ 20 ನಿಮಿಷಗಳ ಕಾಲ ಪದ್ಮಾ ಶಿರ್ಶಾಸನವನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆಗೈದಿದ್ದಾರೆ. ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆದ GWR-GLOBAL WORLD RECORD ಯೋಗ ಪ್ರದರ್ಶನದಲ್ಲಿ ಭಾಗಿಯಾಗಿ ಈ ಸಾಧನೆಗೈದಿದ್ದಾರೆ. ಇವರು ಕುಂದಾಪುರದ ಡಾIಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯಾಗಿದ್ದಾರೆ.
ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ಕಲ್ಯಾಣಪುರ(ಡಿ.15): ಮಿಲಾಗ್ರಿಸ್ ಕಾಲೇಜಿನ 2022-23ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಜಿ . ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ಇದರ ಚೇರ್ಮನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಹಣೆ ಬರಹಗಳನ್ನು ತಾವೇ ರೂಪಿಸಿಕೊಳ್ಳಬೇಕು. ಸರಳತೆಯೊಂದಿಗೆ ಜ್ಞಾನ, ಶಿಸ್ತು, ಹಾಗೂ ಜೀವನ ಪಾಠಗಳನ್ನು ಸಂಸ್ಥೆಯಿಂದ ಪಡೆದು […]
ಕುಂದಗನ್ನಡ ಅಧ್ಯಯನ ಆಸಕ್ತಿ ಬೆಳೆಸಿಕೊಳ್ಳಿ- ಡಾ. ಕಿಶೋರ್ ಕುಮಾರ್ ಶೆಟ್ಟಿ
ಕುಂದಾಪುರ (ಡಿ.15): ಕುಂದಗನ್ನಡ ಭಾಷೆ ಹಾಗೂ ಸಂಸ್ಕೃತಿ ಬಹಳ ವೈಶಿಷ್ಟ್ಯ ಪೂರ್ಣವಾಗಿದ್ದು, ತನ್ನದೇ ಆದ ಸ್ವಂತಿಕೆ ಮತ್ತು ಅಸ್ಮಿತೆಯನ್ನು ಹೊಂದಿರುವ ಕುಂದಾಪುರದ ಪ್ರಾದೇಶಿಕ ಭಾಷೆ ,ಸಂಸ್ಕೃತಿ ಸಂಪ್ರದಾಯ, ಆಚಾರ ,ವಿಚಾರಗಳು ಈ ಮಣ್ಣಿನಲ್ಲಿ ಅಡಗಿದ್ದು ಅದನ್ನು ಸಂಶೋಧನೆ ಮುಖಾಂತರ ಹೊರತೆಗೆಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಕನ್ನಡ ಶಿಕ್ಷಕರು ಹಾಗೂ ಸಂಶೋಧಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಡಾ| ಬಿ.ಬಿ ಹೆಗ್ಡೆ ಪ್ರಥಮ […]