ಕುಂದಾಪುರ(ಸೆ,10(: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕುಂದಾಪುರ, ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಸಹಯೋಗದೊಂದಿಗೆ ವಲಯ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಇತ್ತೀಚೆಗೆ ನಡೆಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೋಭಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ 2023 ಸಿರಿಧಾನ್ಯಗಳ ವರ್ಷವಾದ್ದರಿಂದ ಸಿರಿಧಾನ್ಯಗಳ ಮಹತ್ವವನ್ನು ತಿಳಿಸುತ್ತಾ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು […]
Day: September 10, 2023
ಡಾ|ಬಿ.ಬಿ.ಹೆಗ್ಡೆ ಕಾಲೇಜು: ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಸೆ.06): ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನಮ್ಮ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಪೂರಕವಾಗಿದೆ. ಜೀವನ ಕೌಶಲ್ಯದ ಜೊತೆಗೆ ಕ್ರೀಯಾಶೀಲತೆ, ಸೃಜನಶೀಲತೆ, ಸಂವಹನ ಕಲೆ, ನಾಯಕತ್ವಗುಣ ಬೆಳೆಸಿಕೊಳ್ಳಲು ಕಾಲೇಜಿನಲ್ಲಿರುವ ವಿವಿಧ ವೇದಿಕೆಗಳು ಅತ್ಯವಶ್ಯಕವಾದುದು. ಆ ನೆಲೆಯಲ್ಲಿ ವಿದ್ಯಾರ್ಥಿಗಳು ಗಂಭೀರವಾಗಿ ಚಿಂತಿಸಬೇಕು ಮತ್ತು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೆಸ್ಕತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲೀಷ್ ಶಿಕ್ಷಕರು ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅಶೋಕ್ ತೆಕ್ಕಟ್ಟೆ […]
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ ಪಂದ್ಯಾಟ
ಕುಂದಾಪುರ(ಸೆ,10): ಕ್ರೀಡಾ ಪಂದ್ಯಾಟ ಯುವ ವಿದ್ಯಾರ್ಥಿಗಳಲ್ಲಿ ಮನೋ-ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಕಬ್ಬಡ್ಡಿಯಂಥ ಕ್ರೀಡೆ ವಿದ್ಯಾರ್ಥಿಗಳ ಸಾಹಸ ಬುದ್ಧಿಯನ್ನು ಹೆಚ್ಚಿಸಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ಯವರು ಕುಂದಾಪುರದ ಆರ್.ಎನ್. ಶೆಟ್ಟಿ ಪಿ.ಯು ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ […]
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ನಿವೃತ್ತ ಮುಖ್ಯಶಿಕ್ಷಕ ಎಚ್. ಬಿ . ಬಾಬಯ್ಯ ಶೆಟ್ಟಿಯವರಿಗೆ ಸನ್ಮಾನ
ಕುಂದಾಪುರ(ಸೆ.10) : ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಪಾರು ಗ್ರಾಮದ ನಿವೃತ್ತಮುಖ್ಯ ಶಿಕ್ಷಕರಾದ ಶ್ರೀ ಎಚ್. ಬಿ . ಬಾಬಯ್ಯ ಶೆಟ್ಟಿಯವರನ್ನು ಕುಂದಾಪುರದ ಜೆ .ಕೆ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷದಾದ ಲ. ವಸಂತರಾಜ್ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಡಾ. […]
ತ್ರಿಶ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿ :ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಆಚರಣೆ
ಉಡುಪಿ(ಸೆ,09): ತ್ರಿಶ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಆಚರಣೆ ಇತ್ತೀಚೆಗೆ ನಡೆಯಿತು . ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ *ಕ್ರಿಯೇಟಿವ್ ಗುರು ದೇವೋಭವ* ಕಾರ್ಯಕ್ರಮವು ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ” ಶಿಕ್ಷಕ ವೃತ್ತಿ ಪವಿತ್ರವಾದದ್ದು ನವ ಸಮಾಜ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ
ಕುಂದಾಪುರ (ಸೆ.08): ವಿದ್ಯಾರ್ಥಿ ಬದುಕಿನಲ್ಲಿ ಕನಸು ಕಾಣುವುದರ ಜೊತೆಗೆ ಅವಿರತ ಪ್ರಯತ್ನ ಇದ್ದಲ್ಲಿ ಮಾತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯ. ಈ ಹಂತದಲ್ಲಿ ಕಾಣುವ ಕನಸೇ ನಿಮ್ಮಲ್ಲಿನ ಪ್ರತಿಭೆ ಹಾಗೂ ಸೃಜನಶೀಲತೆಗೆ ಉತ್ತೇಜನ ನೀಡುವುದು ಹೀಗಾಗಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಕ್ರಿಯಾಶೀಲ ವಿದ್ಯಾರ್ಥಿಗಳ ಬೆಳವಣಿಗೆಗೆ ಸೇತುವೆಯಾಗಲಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ| ಅಸೋಡು ಅನಂತರಾಮ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಡಾ| ಬಿ. […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಎನ್.ಎಸ್.ಎಸ್. ಘಟಕದ ವತಿಯಿಂದ ನಿರ್ಮಲ ನಗರ ಅಭಿಯಾನ
ಕುಂದಾಪುರ (ಸೆ.09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಪುರಸಭೆಯ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮದಡಿಯಲ್ಲಿ ನಿರ್ಮಲ ನಗರ ಅಭಿಯಾನ ನಡೆಯಿತು. ಕುಂದಾಪುರ ಸಿಟಿ ಜೆಸಿಐನ ಸ್ಥಾಪಕಾಧ್ಯಕ್ಷ ಶ್ರೀ ಹುಸೇನ್ ಹೈಕಾಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪನ್ಯಾಸಕರಾದ ಶ್ರೀ ರಂಜಿತ್ ಟಿ.ಎನ್., ಪ್ರವೀಣ್ ಮೊಗವೀರ ಗಂಗೊಳ್ಳಿ, […]
ಡಾ|ಬಿ.ಬಿ.ಹೆಗ್ಡೆ ಕಾಲೇಜು : ಪರಿಸರ -‘ನಮಗೊಂದಿಷ್ಟು ಉಳಿಸಿ’ – ಬೀದಿ ನಾಟಕ ಪ್ರದರ್ಶನ
ಕುಂದಾಪುರ (ಸೆ.09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಪುರಸಭೆಯ ಜಂಟಿ ಆಶ್ರಯದಲ್ಲಿ ನಗರದ ತಾಲೂಕ್ ಪಂಚಾಯತ್ ಮುಂಭಾಗ ಮತ್ತು ಕುಂದಾಪುರದ ಸಂತೆ ಮಾರುಕಟ್ಟೆಯಲ್ಲಿ ಪರಿಸರ – ‘ನಮಗೊಂದಿಷ್ಟು ಉಳಿಸಿ’ ಬೀದಿ ನಾಟಕ ಪ್ರದರ್ಶನ ನಡೆಯಿತು. ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಕುರಿತ ಈ ಬೀದಿ ನಾಟಕವನ್ನು ಅಂತಿಮ ಬಿ.ಸಿ.ಎ. ವಿದ್ಯಾರ್ಥಿ ದೇವಿಪ್ರಸಾದ್ ಶೆಟ್ಟಿ ರಚಿಸಿ, ಅಂತಿಮ ಬಿ.ಎಸ್ಸಿ. […]