ಕುಂದಾಪುರ(ಮಾ.18): `ಸಮಾಜ ಸೇವೆ ನಾಡಿನ ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಬೇಕು. ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಈ ನೆಲೆಯಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ ಮಾಡುತ್ತಿರುವ ಸಮಾಜಸೇವೆ ಪ್ರತಿಯೊಬ್ಬರಿಗೂ ಮಾದರಿ’ ಎಂದು ಪತ್ರಕರ್ತೆ ಹಾಗೂ ನಿರೂಪಕರಾದ ಜೇಸಿ ಅಕ್ಷತಾ ಗಿರೀಶ್ ಅಬಿಪ್ರಾಯ ಪಟ್ಟರು. ಅವರು ಜೈ ಕುಂದಾ ಸೇವಾ ಟ್ರಸ್ಟ್ (ರಿ) ಕುಂದಾಪುರ ಇದರ ಆಶ್ರಯದಲ್ಲಿ ಕೊಟೇಶ್ವರ ಸನ್ ವಿಜಯ ಕಾಂಪ್ಲೆಕ್ಸ್ ಆರಂಭಗೊoಡ ನೂತನ ಕಚೇರಿ […]
Day: March 18, 2024
ಎಚ್. ಎಮ್.ಎಮ್ , ವಿ.ಕೆ.ಆರ್ ಶಾಲೆಗಳಲ್ಲಿ ನೇತ್ರ ತಪಾಸಣಾ ಶಿಬಿರ
ಕುಂದಾಪುರ ( ಮಾ 1) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ , ವಿ.ಕೆ.ಆರ್ ಶಾಲೆಗಳಲ್ಲಿ ನೇತ್ರಶಾಸ್ತ್ರ ವಿಭಾಗ ಕೆ ಎಂ ಸಿ, ಮಣಿಪಾಲ ವತಿಯಿಂದ ಮಾರ್ಚ್ 1 ರಂದು ಶಾಲಾ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗಾಗಿ ಒಂದು ದಿನದ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಣ್ಣಿನ ರಕ್ಷಣೆಯ ಕುರಿತಾಗಿ ಮಾತನಾಡಿದರು. ಕೆ ಎಂ ಸಿ ಮಣಿಪಾಲ […]
ಎಚ್.ಎಮ್.ಎಮ್ , ವಿ.ಕೆ. ಆರ್ ಆಂಗ್ಲ ಮಾಧ್ಯಮ ಶಾಲೆ: ಚಿತ್ರಕಲೆಯಲ್ಲಿ ಪ್ರಥಮ
ಕುಂದಾಪುರ ( ಮಾ.13 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ , ವಿ.ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಗಳ 6ನೇ ತರಗತಿ ವಿದ್ಯಾರ್ಥಿನಿ ಅವನಿ ಶೆಟ್ಟಿಗಾರ್ ಫೆ.27 ರಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಲಾದ 2023-24 ನೇ ಸಾಲಿನ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ […]
ಬಿ. ಬಿ. ಹೆಗ್ಡೆ ಕಾಲೇಜು : “ನೋವೆಷನ್” ಮ್ಯಾನೇಜ್ಮೆಂಟ್ ಫೆಸ್ಟ್ ಉದ್ಘಾಟನೆ
ಕುಂದಾಪುರ (ಮಾ.15): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ಮಾರ್ಚ್ 15ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ “ನೋವೆಷನ್” – ಮ್ಯಾನೇಜ್ಮೆಂಟ್ ಫೆಸ್ಟ್ ಅಂತರ್-ತರಗತಿ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ನೆರವೇರಿಸಿ, ನೋವೆಷನ್ ಪರ್ಯಾಯ ಪಾರಿತೋಷಕವನ್ನು ಅನಾವರಣಗೈದರು. ಮಾರ್ಚ್ 15 ಮತ್ತು 16ರಂದು ನಡೆಯಲಿರುವ ಈ ಅಂತರ್-ತರಗತಿ ಸ್ಪರ್ಧೆ ಯಶಸ್ವಿಯಾಗಲಿ, ವಿದ್ಯಾರ್ಥಿಗಳು […]
ಬಿ. ಬಿ. ಹೆಗ್ಡೆ ಕಾಲೇಜು: ಕಡಲಾಮೆಗಳ ಸಂರಕ್ಷಣೆಯ ಕುರಿತು ಬೀದಿ ನಾಟಕ ಪ್ರದರ್ಶನ
ಕುಂದಾಪುರ (ಮಾ.15): ಇಲ್ಲಿನ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇಚರ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2, ಹೆಚ್.ಸಿ.ಎಲ್. ಫೌಂಡೇಶನ್, ರೀಫ್ ವಾಚ್ ಮರಿನ್ ಕರ್ನ್ಸ್ವೇಶನ್ ಹಾಗೂ ಅರಣ್ಯ ಇಲಾಖೆ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಡಲಾಮೆಗಳ ಸಂರಕ್ಷಣೆಯ ಕುರಿತು ಬೀದಿನಾಟಕ ಪ್ರದರ್ಶನ ನಡೆಯಿತು. ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ, ಬೈಕಾಡಿ ಇವರು ಅಳಿವಿನಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಯಿoದ ಪರಿಸರಕ್ಕಾಗುವ […]
ಯುವ ರೆಡ್ ಕ್ರಾಸ್ ಘಟಕ : ರಕ್ತ ನಿಧಿ ಕೇಂದ್ರಕ್ಕೆ ಭೇಟಿ
ಕುಂದಾಪುರ (ಮಾ,14): ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಕಾರದೊಂದಿಗೆ ಕುಂದಾಪುರದ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕರಾದ ಸುಜಯ ಮತ್ತು ವೀರೇಂದ್ರ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ, ರಕ್ತ ಸಂಗ್ರಹಣೆ, ಪರಿಷ್ಕರಣೆ, ಸಂಗ್ರಹಿಸಿದ ರಕ್ತದ ವಿವಿಧ ಪ್ರಕ್ರಿಯೆಯ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಭಾರತೀಯ […]