ಕುಂದಾಪುರ (ಜೂನ್ 18): ಸಂಸ್ಥೆಯಿಂದ ತೆರಳಿದ ನಂತರದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಅಧಿಕವಾಗಿದ್ದು, ನಿಮ್ಮ ಸಂಸ್ಥೆಯನ್ನು ಪ್ರೀತಿಸುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿದಾಗಲೂ ಸಂಸ್ಥೆಯನ್ನು ಮರೆಯದಿರಿ. ಕಲಿತ ವಿದ್ಯೆ, ಪಡೆದ ಜ್ಞಾನ ವಿದ್ಯಾರ್ಥಿಗಳ ಭವಿಷ್ಯವನ್ನು ಸುಂದರವಾಗಿಸಲಿ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ. ಚಂದ್ರಶೇಖರ್ ಶೆಟ್ಟಿ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ […]
Day: June 26, 2024
ಆರ್.ಎನ್.ಶೆಟ್ಟಿ ಪಿ ಯು ಕಾಲೇಜು ಕುಂದಾಪುರ:ಸಿ.ಎ/ ಸಿ.ಪಿ.ಟಿ ಮತ್ತು ಸಿ.ಎಸ್ ಕೋರ್ಸ್ ಗಳ ಬಗ್ಗೆ ಓರಿಯಂಟೇಶನ್ ಕಾರ್ಯಕ್ರಮ
ಕುಂದಾಪುರ(ಜು.26): ಕಾಲೇಜು ಜೀವನದ ಆರಂಭದ ವರ್ಷಗಳಿಂದಲೇ ಪಡೆಯುವ ಸಿ.ಎ/ ಸಿ.ಎಸ್ ಕೋಚಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿವಿಧ ಹಂತಗಳಲ್ಲಿ ಉತ್ತೀರ್ಣಗೊಳ್ಳಲು ಸಹಕಾರಿಯಾಗುವುದು ಮಾತ್ರವಲ್ಲದೇ ಇನ್ನಿತರ ಉನ್ನತ ಅಧ್ಯಯನಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಕೂಡ ಅನುಕೂಲವಾಗುವುದು ” ಎಂದು ಉಡುಪಿಯ ತ್ರಿಶಾ ಸಮೂಹ ಸಂಸ್ಥೆಗಳ ಸ್ಥಾಪಕರಾದ C.A ಗೋಪಾಲಕೃಷ್ಣ ಭಟ್ ರವರು ತಿಳಿಸಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ/ ಸಿ.ಪಿ.ಟಿ ಮತ್ತು ಸಿ.ಎಸ್ […]
ಎಕ್ಸಲೆಂಟ್ ಕಾಲೇಜು ಕುಂದಾಪುರ: ವಿಶ್ವ ಯೋಗ ದಿನಾಚರಣೆ
ಕುಂದಾಪುರ(ಜು,26): ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಸುಣ್ಣಾರಿಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಪ್ರಸಿದ್ಧ ಯೋಗ ತರಬೇತುದಾರರ ಸಮ್ಮುಖದೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ರಾಜ್ಯ ಕಂಡ ಶ್ರೇಷ್ಠ ಯೋಗ ತರಬೇತುದಾರರಾದ ಅಟಕೆರೆ ಬಾಬು ಪೈ ಹಾಗೂ ಮಹಿಳಾ ಯೋಗ ತರಬೇತುದಾರರಾದ ರೂಪಾ ಬಾಬು ಪೈ ಯವರು ವಿಶೇಷ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ಹಾಗೂ ಯೋಗದ ಹಲವಾರು ಭಂಗಿಗಳ ಪ್ರಯೋಜನದ ಸಾರವನ್ನು […]
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೂಡ್ಲಕಟ್ಟೆ (ಜು,26): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ವೈ ಆರ್ ಸಿ ಘಟಕದ ವತಿಯಿಂದ ಯೋಗ ತರಭೇತಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಬಿಜೂರು ಆಗಮಿಸಿದ್ದರು. ಯೋಗ ಎಂದರೆ ಕೇವಲ ಆಸನಗಳಲ್ಲ, ಅದಕ್ಕೂ ಹೊರತಾಗಿ ನಾವು ಪಾಲಿಸಬೇಕಾದ ನಿಯಮಗಳನ್ನು ವಿವರವಾಗಿ ತಿಳಿಸಿಕೊಟ್ಟಿದ್ದಲ್ಲದೆ ದಿನನಿತ್ಯ ಮಾಡಬಹುದಾದ ಕೆಲವು ಸರಳ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ: ವಾರ್ಷಿಕ ಸಂಚಿಕೆ ‘ದೃಷ್ಟಿ’ ಅನಾವರಣ
ಗಂಗೊಳ್ಳಿ (ಜು,26): ಯಾವುದೇ ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾರಣವಾಗುತ್ತದೆ ಹಾಗೂ ಸುಪ್ತ ಮನಸ್ಸಿನ ಭಾವನೆಗಳಿಗೆ ವೇದಿಕೆಯಾಗುತ್ತದೆ. ಶಿಕ್ಷಣವು ಉದ್ಯಮವಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಶೂನ್ಯವಾಗುತ್ತಿದೆ ಇಂತಹ ಸಮಯದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಿಯು ಕಾಲೇಜಿನ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರಹೊಮ್ಮಿಸುವಲ್ಲಿ ಗಮನಾರ್ಹ ಕಾರ್ಯವಾಗಿದೆ ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಹೇಳಿದರು. ಇತ್ತೀಚಿಗೆ ಗಂಗೊಳ್ಳಿಯ […]
ಓಂ ಶ್ರೀ ಯೋಗ ಕೇಂದ್ರ ಬಸ್ರೂರು:ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ
ಬಸ್ರೂರು(ಜು,23): ಇಲ್ಲಿನ ಓಂ ಶ್ರೀ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ .ರಾಧಾಕೃಷ್ಣಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು.2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿಗಳಾದ […]