ಕುಂದಾಪುರ(ಜು.26): ಕಾಲೇಜು ಜೀವನದ ಆರಂಭದ ವರ್ಷಗಳಿಂದಲೇ ಪಡೆಯುವ ಸಿ.ಎ/ ಸಿ.ಎಸ್ ಕೋಚಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿವಿಧ ಹಂತಗಳಲ್ಲಿ ಉತ್ತೀರ್ಣಗೊಳ್ಳಲು ಸಹಕಾರಿಯಾಗುವುದು ಮಾತ್ರವಲ್ಲದೇ ಇನ್ನಿತರ ಉನ್ನತ ಅಧ್ಯಯನಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಕೂಡ ಅನುಕೂಲವಾಗುವುದು ” ಎಂದು ಉಡುಪಿಯ ತ್ರಿಶಾ ಸಮೂಹ ಸಂಸ್ಥೆಗಳ ಸ್ಥಾಪಕರಾದ C.A ಗೋಪಾಲಕೃಷ್ಣ ಭಟ್ ರವರು ತಿಳಿಸಿದರು.
ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ/ ಸಿ.ಪಿ.ಟಿ ಮತ್ತು ಸಿ.ಎಸ್ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿ.ಎ ಕೋರ್ಸ್ ನ ವಿವಿಧ ಹಂತಗಳು ಮತ್ತು ಆಯಾ ಹಂತಗಳ ವಿಷಯವಾರು ಸಂಗತಿಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಸಭೆಗೆ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಶ್ವಿನಿ ನಾಯಕ್ ರವರು ಧನ್ಯವಾದ ಸಲ್ಲಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ ಯವರು ಕಾರ್ಯಕ್ರಮ ನಿರೂಪಿಸಿದರು.