ಕೋಟೇಶ್ವರ (ಆ, 24): ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಡಿಪ್ ಹಾಗೂ ಕ್ರಿಕೆಟ್ ಪಂದ್ಯಾಟದಿಂದ ಸಂಗ್ರಹಿಸಿದ 1 ಲಕ್ಷ 12 ಸಾವಿರ ಮೊತ್ತವನ್ನು ಬೀಜಾಡಿ ಗ್ರಾಮದ ಬಡ ಕುಟುಂಬದ ಹುಡುಗಿಯ ವೈದ್ಯಕೀಯ ಚಿಕಿತ್ಸೆಗಾಗಿ ಹುಡುಗಿಯ ಪೋಷಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ,ಗೋಪಾಡಿ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷರಾದ […]
Day: August 25, 2024
ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ: ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಕುಂದಾಪುರ(ಆ,25): ಮೊಗವೀರ ಯುವ ಸಂಘಟನೆ (ರಿ ),ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2024 -26 ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏಪ್ರಿಲ್ 25ರ ಆದಿತ್ಯವಾರದಂದು ಕುಂದಾಪುರದ ಚಿಕ್ಕಮ್ಮನಸಾಲು ರಸ್ತೆಯ ಮೊಗವೀರ ಭವನದಲ್ಲಿ ಜರಗಿತು. ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮೊಗವೀರ ಸಮುದಾಯವನ್ನು ಸಂಘಟಿಸುವುದರ ಜೊತೆಗೆ ಯುವಶಕ್ತಿಯನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಮೊಗವೀರ ಯುವ […]
ರೋಟರಿ ಕ್ಲಬ್ ಕೋಟೇಶ್ವರ : ವಲಯ ಮಟ್ಟದ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ವಿಚಾರ ಸಂಕಿರಣ
ಕೋಟೇಶ್ವರ( ಆ,25): ರೋಟರಿ ಸಂಸ್ಥೆಗೆ ಸಮಾಜದ ವಿವಿಧ ಸ್ತರಗಳ ವಿವಿಧ ವೃತ್ತಿಗಳ ಸಮರ್ಥವಾದ ಸದಸ್ಯರನ್ನು ಸೇರಿಸುವುದರ ಜೊತೆಗೆ ಅವರು ರೋಟರಿಯಲ್ಲಿಯೇ ಉಳಿಯುವಂತೆ ಪ್ರೋತ್ಸಾಹಿಸಿದಾಗ ರೋಟರಿ ಪಬ್ಲಿಕ್ ಇಮೇಜ್ ನಿಜವಾದ ಅರ್ಥದಲ್ಲಿ ಬೆಳೆಯುತ್ತದೆ ಎಂದು ರೋಟರಿ ಜಿಲ್ಲೆ 31 82ರ ಸದಸ್ಯತ್ವ ಅಭಿವೃದ್ಧಿಯ ಜಿಲ್ಲಾ ಚೇರ್ಮೆನ್ ರೋ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅವರು ವಲಯ ಎರಡರ ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್ ವಿಚಾರ ಸಂಕಿರಣ “ಅಭಿವರ್ಧನೆ 2024” ವಿಚಾರ […]
ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು, ಕೋಡಿ: ಬ್ಯಾಂಕಿಂಗ್ ಮತ್ತು ಸೈಬರ್ ವಂಚನೆ ಕುರಿತು ಕಾರ್ಯಗಾರ
ಕುಂದಾಪುರ(ಆ,24): ಇಲ್ಲಿನ ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನಲ್ಲಿ ಬ್ಯಾಂಕಿಂಗ್ ಮತ್ತು ಸೈಬರ್ ವಂಚನೆ ಕುರಿತು ಕಾರ್ಯಗಾರವನ್ನು ಆಗಸ್ಟ್ 24 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ತರಬೇತುದಾರರಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕುಂದಾಪುರದ ಆಫೀಸರ್ ಶ್ರೀಯುತ ಉದಯ್ ಹೆಗಡ್ಡೆ ಯವರು ಆಗಮಿಸಿ ಬ್ಯಾಂಕಿಂಗ್ ನಲ್ಲಿ ಸಿಗುವ ಸೌಲಭ್ಯಗಳು, ಈಗಿನ ಹೊಸ ಹೊಸ ತಂತ್ರಾಂಶಗಳ ಕುರಿತು ತಿಳಿಸಿದರು. ಹಾಗೆ ಸೈಬರ್ […]
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮ
ಕಾರ್ಕಳ( ಆ,25): ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ ಶೆಟ್ಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. […]