ಕುಂದಾಪುರ(ಆ,24): ಇಲ್ಲಿನ ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನಲ್ಲಿ ಬ್ಯಾಂಕಿಂಗ್ ಮತ್ತು ಸೈಬರ್ ವಂಚನೆ ಕುರಿತು ಕಾರ್ಯಗಾರವನ್ನು ಆಗಸ್ಟ್ 24 ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ತರಬೇತುದಾರರಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕುಂದಾಪುರದ ಆಫೀಸರ್ ಶ್ರೀಯುತ ಉದಯ್ ಹೆಗಡ್ಡೆ ಯವರು ಆಗಮಿಸಿ ಬ್ಯಾಂಕಿಂಗ್ ನಲ್ಲಿ ಸಿಗುವ ಸೌಲಭ್ಯಗಳು, ಈಗಿನ ಹೊಸ ಹೊಸ ತಂತ್ರಾಂಶಗಳ ಕುರಿತು ತಿಳಿಸಿದರು. ಹಾಗೆ ಸೈಬರ್ ವಂಚನೆಯ ಮೂಲಕ ಜನ ಮೋಸ ಹೋಗುವ ಬಗೆಯನ್ನು ವಿವರಿಸಿ ಅದರಿಂದ ಯಾವ ರೀತಿ ನಮ್ಮ ಹಣವನ್ನು ಉಳಿಸಿಕೊಳ್ಳಬೇಕೆಂಬುದರ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ| ಶಬೀನಾ ಎಚ್, ಸಂಯೋಜಕರಾದ ಪ್ರೊI ಅಬ್ದುಲ್ ಖಲೀಲ್ ,ಸಹ ಸಂಯೋಜಕರಾದ ಆಯಿಷಾ ರಿಸ್ವ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.