ಕುಂದಾಪುರ (ಸೆ.20): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕ ಕ್ಯೂ ಸ್ಪೈಡರ್ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಯೂ ಸ್ಪೈಡರ್ ಸಂಸ್ಥೆಯ ಹೆಚ್.ಆರ್. ಲೀಡ್ ಆಗಿರುವ ಚಂದನಾ ರವರು ಉದ್ಯೋಗ ಶಿಬಿರದ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವೃತ್ತಿ […]
Month: September 2024
ತಾಲೂಕು ದಸರಾ ಚಾಂಪಿಯನ್ಶಿಪ್: ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ
ಕುಂದಾಪುರ (ಸೆ,22): ಕುಂದಾಪುರ ತಾಲೂಕು ದಸರಾ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾ ಸಂಸ್ಥೆಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದಿದ್ದಾರೆ. 1500 ಮೀಟರ್ ಓಟದಲ್ಲಿ ನವ್ಯಾ ಆಚಾರ್ ದ್ವಿತೀಯ ಸ್ಥಾನ ಹಾಗೂ 3000 ಮೀಟರ್ ಓಟದಲ್ಲಿ ದ್ವಿತೀಯಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ . ಹಾಗೆಯೇ ರೆನಸ್ಲಿ 200 ಮೀಟರ್ ಓಟದಲ್ಲಿ 3 ನೇ ಸ್ಥಾನ ಪಡೆದಿದ್ದಾರೆ. ಈ ಸಂಸ್ಥೆಯ ಮಹಿಳೆಯರ ತಂಡ 4×100ಮೀಟರ್ ರಿಲೇ […]
ಬಿ. ಬಿ. ಹೆಗ್ಡೆ ಕಾಲೇಜು: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಸೆ. 20): ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಮಹತ್ವದ ಸಂಸ್ಥೆ ಎನ್.ಎಸ್.ಎಸ್. ಈ ಘಟಕಗಳ ಮೂಲಕ ನಡೆಯುವ ವಿವಿಧ ಕ್ರಿಯಾ ಚಟುವಟಿಕೆಗಳಲ್ಲಿ ಸ್ವಯಂ ಸೇವಕರು ಸಕ್ರಿಯವಾಗಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸತ್ಪçಜೆಗಳಾಗಲು ಸಾಧ್ಯ. ನಾಯಕತ್ವ ಗುಣಗಳೊಂದಿಗೆ ಬದುಕಿನ ಶಿಕ್ಷಣವನ್ನು ವಿದ್ಯಾರ್ಥಿಗಳು ಈ ಮೂಲಕ ಪಡೆದುಕೊಳ್ಳಬೇಕೆಂದು ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶ್ರೀಮತಿ ಸುಗುಣಾ ಆರ್. ಕೆ. ಹೇಳಿದರು. ಅವರು ಕುಂದಾಪುರದ ಡಾ| ಬಿ. […]
ಕಾರ್ಕಳ ಜ್ಞಾನಸುಧಾದದಲ್ಲಿ ಜಿಲ್ಲಾಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ಸಂಪನ್ನ
ಕಾರ್ಕಳ( ಸೆ,22) : ಇತ್ತೀಚೆಗೆ ಬಾಸ್ಕೆಟ್ಬಾಲ್ ಕ್ರೀಡೆಯು ಯುವಮನಸ್ಸುಗಳನ್ನು ಸೆಳೆಯುತ್ತಿದೆ. ಬಾಸ್ಕೆಟ್ಬಾಲ್ ಬಾಕ್ಸ್ನಂತೆ ಕ್ರೀಡಾಳುಗಳ ಪ್ರತಿಭೆಯು ಎತ್ತರಕ್ಕೆ ಏರಬೇಕು. ಸೋತವರು ಬೇಸರ ಪಡದೆ ಗೆದ್ದವರು ಬೀಗದೆ ಬಾಗಿ ನಡೆದು ತೋರುವ ಆದರ್ಶ ವ್ಯಕ್ತಿಗಳಾಗ ಬೇಕು ಎಂದು ಕಾರ್ಕಳದ ಎಸ್.ಎನ್.ವಿ. ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರದೀಪ್ ಎನ್. ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ […]
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 4 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಕುಂದಾಪುರ(ಸೆ,22): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಬಾಲಕ- ಬಾಲಕಿಯರ ಕಂಬದಕೋಣೆ ಹೋಬಳಿ ಮಟ್ಟದ ಕ್ರೀಡಾಕೂಟ 2024-25, ಇದರಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳಾದ ಅಬ್ದುಲ್ ಶಯಾನ್(7ನೇ ತರಗತಿ) ಉದ್ದ ಜಿಗಿತದಲ್ಲಿ ಪ್ರಥಮ, ಅಪೇಕ್ಷಾ (7ನೇ […]
ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ : ರಕ್ತದಾನ ಶಿಬಿರ
ಕುಂದಾಪುರ ( ಸೆ.22): ಮೊಗವೀರ ಯುವ ಸಂಘಟನೆ ( ರಿ. ), ಉಡುಪಿ ಜಿಲ್ಲೆ, ಕುಂದಾಪುರ ಘಟಕ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ. ) ಅಂಬಲಪಾಡಿ ಉಡುಪಿ, ಇವರ ನೇತೃತ್ವದಲ್ಲಿ ವಿಠ್ಠಲವಾಡಿ ಫ್ರೆಂಡ್ಸ್ (ರಿ.), ಕುಂದಾಪುರ, ಕಿಂಗಫಿಷರ್ ಸ್ಪೋರ್ಟ್ಸ್ ಕ್ಲಬ್ ಖಾರ್ವಿಕೇರಿ ಕುಂದಾಪುರ, ಕೆ. ಎಂ. ಸಿ. ರಕ್ತನಿಧಿ ವಿಭಾಗ ಮಣಿಪಾಲ, ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 22 ರಂದು ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ರಕ್ತದಾನ […]
ಬ್ಯಾರೀಸ್ ಪ್ರಥಮ ದರ್ಜೆಕಾಲೇಜು : ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ
ಕೋಡಿ,(ಸೆ, 21): ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ IQACನ ಆಶ್ರಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ ಬೀಹೈವ್ ಕನ್ವೆನ್ಷನ್ ಹಾಲ್ನಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬ್ಯಾರಿಸ್ ಗ್ರೂಪ್ ನ ಡಿಜಿಟಲ್ ಮೀಡಿಯಾ ಎಕ್ಸಲೆನ್ಸ್ ಮ್ಯಾನೇಜರ್ ಸಾನಿಯಾ ಅನ್ವರ್ ಆಗಮಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸಿಫ್ ಬ್ಯಾರಿಯವರು “ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಪ್ರಾಮುಖ್ಯತೆಯನ್ನು ವಿವರಿಸಿದರು. ವಿವಿಧ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ ಆದರೆ […]
ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜಲಜಾಗ್ರತಿ ಕಾರ್ಯಕ್ರಮ
ಹೆಮ್ಮಾಡಿ(ಸೆ.21): ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜಲಜಾಗ್ರತಿ ಕಾರ್ಯಕ್ರಮ ರೋಟರಿ ಕ್ಲಬ್ ಗಂಗೊಳ್ಳಿ ಆಯೋಜನೆಯಲ್ಲಿ ಹಮ್ಮಿಕೊಳ್ಳಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ್ ವಹಿಸಿದ್ದರು.ರೋಟರಿ ಜಿಲ್ಲಾ ಗವರ್ನರ್ ಶ್ರೀ ಸಿ.ಎ.ದೇವಾನಂದ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನೆಲ-ಜಲ-ಪರಿಸರ ಜಿಲ್ಲಾ ಸಂಯೋಜಕರಾದ ಶಿವಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀ ರತ್ನ ಶ್ರೀ […]
ಕರಾಟೆ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ (ಸೆ,21): ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿ ಪೂರ್ವ ವಿಭಾಗ )ಹಾಗೂ ಎಸ್. ಎನ್. ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರಮವಾಗಿ ಸಾಯಿ ವಿಘ್ನೇಶ್(82+kg) […]
ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ
ಹೆಮ್ಮಾಡಿ(ಸೆ.21): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿಪೂರ್ವ ಶಿಕಯ ಉಲಾಖೆ ಉಡುಪಿ)ಹಾಗೂ ವೆಂಕಟರಮಣ ಪದವಿಪೂರ್ವ ಕಾಲೇಜು ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಸೂರಜ್ ಪೂಜಾರಿ,ಅಕ್ರಮ್ ,ಯತೀಶ್,ರೋನಿತ್ ಪೂಜಾರಿ ,ನವನೀತ್, ಆಕಾಶ್,ಸುಮೀತ್.ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.










