ಕೋಡಿ,(ಸೆ, 21): ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ IQACನ ಆಶ್ರಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರ ಬೀಹೈವ್ ಕನ್ವೆನ್ಷನ್ ಹಾಲ್ನಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬ್ಯಾರಿಸ್ ಗ್ರೂಪ್ ನ ಡಿಜಿಟಲ್ ಮೀಡಿಯಾ ಎಕ್ಸಲೆನ್ಸ್ ಮ್ಯಾನೇಜರ್ ಸಾನಿಯಾ ಅನ್ವರ್ ಆಗಮಿಸಿದ್ದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸಿಫ್ ಬ್ಯಾರಿಯವರು “ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ನ ಪ್ರಾಮುಖ್ಯತೆಯನ್ನು ವಿವರಿಸಿದರು. ವಿವಿಧ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ ಆದರೆ ಆ ಕಾರ್ಯಕ್ರಮಗಳು ಜನರನ್ನ ಹೆಚ್ಚಾಗಿ ತಲುಪುತ್ತಿಲ್ಲ, ಏಕೆಂದರೆ ಡಿಜಿಟಲ್ ಮಾರ್ಕೆಟಿಂಗ್ ಮಾಧ್ಯಮದ ಸದ್ಬಳಕೆ ಬಗ್ಗೆ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಆದುದರಿಂದ ಪ್ರತಿಯೊಬ್ಬರೂ ಡಿಜಿಟಲ್ ಮಾರ್ಕೆಟಿಂಗ್ ನ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಸಾನಿಯಾ ಅನ್ವರ್ ರವರು “ಡಿಜಿಟಲ್ ಮಾರ್ಕೆಟ್ ನ ಬಗ್ಗೆ, ಎಸ್ಇಒ ಇದರ ಬಗ್ಗೆ, ಪೋಸ್ಟರ್, ವಿಡಿಯೋ, ಲೋಗೋಗಳನ್ನು ರಚಿಸುವ ಕುರಿತು ಮಾಹಿತಿ ನೀಡಿದರು, ಹಾಗೆಯೇ ಹೊಸ ಹೊಸ ಅಪ್ಲಿಕೇಶನನ್ನು ನಾವಾಗಿಯೇ ಹುಟ್ಟು ಹಾಕಬೇಕು. ಪ್ರತಿಯೊಬ್ಬರಲ್ಲೂ ಪ್ರಾಯೋಗಿಕ ಜ್ಞಾನ ಇರಬೇಕು, ನಮಗೆ ಯಾರಾದರೂ ಪೋಸ್ಟರ್ ಮಾಡಿ ಕೊಡಿ ಎಂದರೆ ಯಾವತ್ತೂ ಆಗೋದಿಲ್ಲ ಎನ್ನಬಾರದು, ಅದರ ಬದಲು ಅದನ್ನು ನಾವು ಧನಾತ್ಮಕವಾಗಿ ಪರಿಗಣಿಸಿ ಬೇರೆಯವರಿಂದ ಕಲಿತಾದರೂ ನಾವು ಮಾಡಬೇಕು, ಆಗ ನಮ್ಮ ಜೀವನದಲ್ಲಿ ಮುನ್ನಡೆಯನ್ನು ಪಡೆಯಲು ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳಿಗೆ ಪೋಸ್ಟರ್ ಒಂದನ್ನು ರಚನೆ ಮಾಡಲು ಕೊಟ್ಟು ಅದರಲ್ಲಿ ಅತ್ಯುತ್ತಮವಾಗಿ ಮಾಡಿದವರಿಗೆ ಮೆಚ್ಚುಗೆಯನ್ನು ಸಲ್ಲಿಸಿದರು”.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ “ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಈಗ ಕುಳಿತಲ್ಲಿಯೇ ನಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ನಾವು ಕೊಂಡುಕೊಳ್ಳಬಹುದು. ಹಾಗೆಯೇ ಡಿಜಿಟಲ್ ಮಾರ್ಕೆಟಿಂಗ್ ನಿಂದ ಒಳ್ಳೆಯದು ಇದೆ, ಕೆಟ್ಟದು ಇದೆ. ಆದರೆ ನಾವು ಒಳ್ಳೆಯದನ್ನ ಸ್ವೀಕರಿಸಿ, ಒಳ್ಳೆಯದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶಬೀನಾ. ಹೆಚ್, ಪದವಿ ಪೂರ್ವ ಹಾಗೂ ಬ್ಯಾರೀಸ್ ಸೀಸೈಡ್ ಸ್ಕೂಲ್ ನ ಪ್ರಾಂಶುಪಾಲೆ ಶ್ರೀಮತಿ ಅಶ್ವಿನಿ ಶೆಟ್ಟಿ, ಬ್ಯಾರಿಸ್ ಗ್ರೂಪ್ ಚೇರ್ಮೆನ್ ಅವರ ವೈಯಕ್ತಿಕ ಕಾರ್ಯದರ್ಶಿಯವರಾದ ಶ್ರೀ ಸಲಾಂ ತೋಡಾರ್, ಐಟಿ ಅಸೋಸಿಯೇಷನ್ ನ ಕೊ-ಆರ್ಡಿನೇಟರ್ ರವರಾದ ಅಹಮದ್ ಖಲೀಲ್ ಮತ್ತು ಆಯೀಶ ರಿಸ್ವಾ ಹಾಗೂ ಕಾಮರ್ಸ್ ಅಸೋಸಿಯೇಷನ್ ನ ಕೊ-ಆರ್ಡಿನೇಟರ್ ರವರಾದ ಕರುಣಾಕರ್ ಶೆಟ್ಟಿ ಮತ್ತು ಜಯಂತ ಕುಮಾರ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿ .ಕಾಂ ವಿದ್ಯಾರ್ಥಿನಿ ಅನಿಷಾ ಕೌಸರ್ ಸ್ವಾಗತಿಸಿದರು, ತೃತೀಯ ಬಿಸಿಎ ವಿದ್ಯಾರ್ಥಿನಿ ಬುಶ್ರಾ ಗಣ್ಯರ ಕಿರುಪರಿಚಯವನ್ನು ಮಾಡಿದರು. ತೃತೀಯ ಬಿಕಾಂನ ವಿದ್ಯಾರ್ಥಿನಿ ಆಯಿಷಾ ಅಸೀಲ್ ವಂದಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಅಫ್ರಾ ಕಾರ್ಯಕ್ರಮ ನಿರೂಪಿಸಿದರು.