ಕಿರಿಮಂಜೇಶ್ವರ( ಆ,30): ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲಾ ಕ್ರೀಡಾಂಗಣ ಮಾವಿನಕಟ್ಟೆಯಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ- 14ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಪ್ರವೀಶ್ (8ನೇ ತರಗತಿ) ಪ್ರಥಮ ಸ್ಥಾನ ಹಾಗೂ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ(7ನೆ ತರಗತಿ) ದ್ವಿತೀಯ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. […]
Day: October 30, 2024
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ : ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮಸ್ಥಾನ
ಕಿರಿಮಂಜೇಶ್ವರ(ಆ,30): ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ 7ರ ವಯೋಮಿತಿ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಪ್ರಮುಖ ಬಿ ಪೂಜಾರಿ (1ನೆ ತರಗತಿ) ಪ್ರಥಮ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಗಂಗೊಳ್ಳಿ: ಬಾಲ ಪ್ರತಿಭೆ ವೃಷಾoಕ್ ವಿ ಭೋಮ್ಕರ್ ರಿಂದ ಯಕ್ಷಗಾನ ನೃತ್ಯ ಸೇವೆ
ಗಂಗೊಳ್ಳಿ ( ಆ,30) :ಗಂಗೊಳ್ಳಿಯ ಸೇವಾ ಸಂಘ (ರಿ. ),ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ಬಾಲ ಪ್ರತಿಭೆ ವೃಷಾoಕ್ ವಿ ಭೋಮ್ಕರ್ ಅವರಿಂದ ಯಕ್ಷಗಾನ ನೃತ್ಯ ಸೇವೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಇವನು ವಿವೇಕ್ ಭೋಮ್ಕರ್ ಮತ್ತು ಶಿವಾನಿ ದಂಪತಿ ಪುತ್ರ.
ಕಾರ್ಕಳ ಜ್ಞಾನಸುಧಾ: ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸಂಪನ್ನ
ಕಾರ್ಕಳ( ಆ.30): ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಸುಧಾ […]
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ: ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದ ನಿರ್ದೇಶಕರ ಚುನಾವಣೆಯಲ್ಲಿ ಶೇಖರ ಪೂಜಾರಿಯವರಿಗೆ ಗೆಲುವು
ಕುಂದಾಪುರ ( ಆ,30): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ( ರಿ.), ಬೆಂಗಳೂರು, ತಾಲೂಕು ಶಾಖೆ ಕುಂದಾಪುರ ಇದರ ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದಿಂದ ನಿರ್ದೇಶಕರ ಚುನಾವಣೆ (2024 2029 ರ ಅವಧಿ) ಅಕ್ಟೋಬರ್ 28 ರಂದು ನಡೆಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಸರಕಾರಿ ಪ್ರೌಢ ಶಾಲೆ ಬಸ್ರೂರು ಇದರ ಸಹ ಶಿಕ್ಷಕರಾದ ಶ್ರೀ ಶೇಖರ ಪೂಜಾರಿಯವರು ಅತ್ಯಧಿಕ ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿರುತ್ತಾರೆ.
ರಕ್ತದಾನಿಗಳು ವೈದ್ಯರು ಹಾಗೂ ರೋಗಿಗಳ ನಡುವಿನ ಸೇತುವೆ: ಡಾ. ಜಿ .ಎಸ್ ಚಂದ್ರಶೇಖರ್
ಉಡುಪಿ ( ಆ,30): ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಉಡುಪಿ ಗ್ರೂಪ್ಸ್ ಆಫ್ ಇನ್ಸ್ ಟ್ಯೂಷನ್ ಮಣಿಪಾಲ, ಮಾಹೆ ಎನ್ ಎಸ್ ಎಸ್ ಯೂನಿಟ್ 1&2 ಎಂಐಟಿ ಮಣಿಪಾಲ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಅಕ್ಟೋಬರ್ 27 ರಂದು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆದರ್ಶ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ […]