ಕುಂದಾಪುರ( ನ.26): ಉಡುಪಿ ಜಿಲ್ಲೆ ವ್ಯಾಪ್ತಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಜರುಗಿದ ರಾಜ್ಯಮಟ್ಟದ ಫೆಸ್ಟ್ ನವೊನ್ಮೇಶ್ ಅದ್ದೂರಿಯಾಗಿ ಸಂಪನ್ನಗೊಂಡಿತು. ಮದರ್ ತೆರೇಸಾ ಪಿಯು ಕಾಲೇಜ್ ಶಂಕರನಾರಾಯಣ ಚಾಂಪಿಯನ್ ಹಾಗೂ ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ ದ್ವಿತೀಯ ಸ್ಥಾನ ಪಡೆಯಿತು. ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳಿಗೆ ವಿನೂತನ ಮತ್ತು ವಿಭಿನ್ನ ಪ್ರಯತ್ನದೊಂದಿಗೆ ವೇದಿಕೆಯನ್ನು ಒದಗಿಸಿಕೊಟ್ಟ ಐಎಂಜೆ ವಾಣಿಜ್ಯ ಮತ್ತು ವಿಜ್ಞಾನ ಸಂಸ್ಥೆ ಮೂಡ್ಲಕಟ್ಟೆ, ಸ್ಪರ್ಧೆಯನ್ನು ಐಟಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಎಂಬ […]
Month: November 2024
ಹಕ್ಕುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ. ಪ್ರೊ. ಕೆ. ಉಮೇಶ್ ಶೆಟ್ಟಿ
ಕುಂದಾಪುರ (ನ. 26): ಸಂವಿಧಾನ ದೇಶದ ಸರ್ವಶ್ರೇಷ್ಟ ಕಾನೂನಾಗಿದ್ದು ಇಡೀ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುವ ಸಮುದಾಯ ಸಂವಿಧಾನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಕ್ಕುಗಳನ್ನು ಋಣಾತ್ಮಕವಾಗಿ ಬಳಸಿಕೊಳ್ಳದೆ ಧನಾತ್ಮಕವಾಗಿ ಬಳಸಿಕೊಂಡು ಸತ್ಪ್ರಜೆಗಳಾಗಬೇಕು ಒಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ರೋವರ್ಸ & ರೇಂಜರ್ಸ್ ಘಟಕಗಳ ಆಶ್ರಯದಲ್ಲಿ ನವೆಂಬರ್ 26 ರಂದು ನಡೆದ ಸಂವಿಧಾನ […]
ಎಚ್.ಎಮ್.ಎಮ್ ವಿದ್ಯಾರ್ಥಿನಿ ಅವನಿ ಜಿಲ್ಲಾಮಟ್ಟದ ಚಿತ್ರಕಲೆಯಲ್ಲಿ ಪ್ರಥಮ
ಕುಂದಾಪುರ(ನ.25) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್, ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಅವನಿ.ಎ. ಶೆಟ್ಟಿಗಾರ್, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ “ಜ್ಞಾನ ವರ್ಷಿಣಿ”/ “ಜ್ಞಾನ ದರ್ಶಿನಿ” ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರ ಜರುಗಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ ಪ್ರಾಂಶುಪಾಲರು […]
ಡಿಸೆಂಬರ್ 5 ರಂದು ಇಡೂರು ಕುಂಜ್ಞಾಡಿಯ ಸಾಂಪ್ರದಾಯಿಕ ಕಂಬಳೋತ್ಸವ
ಹೆಮ್ಮಾಡಿ ( ನ.22): ಕುಂದಾಪುರ ತಾಲ್ಲೂಕಿನ ಇಡೂರು ಕುಂಜ್ಞಾಡಿ ಹಾಯ್ಗೂಳಿ ಕಂಬಳೋತ್ಸವವು ಡಿಸೆಂಬರ್ 05 ರಂದು ಕುಂಜ್ಞಾಡಿ ಹಾಯ್ಗೂಳಿ ಕಂಬಳಗದ್ದೆಯಲ್ಲಿ ಮಧ್ಯಾಹ್ನ.12 ಗಂಟೆಗೆ ನೆಡೆಯಲಿದೆ. ಕರ್ನಾಟಕದ ಕರಾವಳಿಯಲ್ಲಿ ಕಂಬಳವು ದೈವಿಕ ಮತ್ತು ಐತಿಹಾಸಿಕ ಕ್ರೀಡೆ.ರೈತಾಪಿ ಜನರು ತಮ್ಮ ತಮ್ಮ ಗೆದ್ದೆಯ ಬತ್ತದ ಕಟಾವು ನಂತರ ತಮ್ಮ ಕೊಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ಶತಮಾನಗಳಿಂದ ಊರಿನ ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಇಂತಹ ಒಂದು ಸಾಂಪ್ರದಾಯಿಕ […]
CSEET ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜು ಉತ್ಕೃಷ್ಟ ಸಾಧನೆ
ಕುಂದಾಪುರ (ನ.20): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ 2024ರ ನವೆಂಬರ್ನಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ ಕೌಶಿಕ್, ಅಕ್ಷೋಭ್ಯ, ಶಾಶ್ವತ್, ಸಿದ್ದಾರ್ಥ, ಸುಷ್ಮಾ, ವರ್ಷಾ, ದರ್ಶನ್, ಮೈತ್ರೆಯಿ ಹಾಗೂ ಕೀರ್ತನಾ ಇವರು ಸಿ.ಎಸ್. ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ […]
ಎಂ. ಎನ್. ಮಧ್ಯಸ್ಥರಿಗೆ ಸುವರ್ಣ ಪರ್ವ ಪುರಸ್ಕಾರ
ಕೋಟ (ನ,21): ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮಾಚರಣೆಯ ಸುವರ್ಣ ಪರ್ವದ ಮೂರನೆಯ ಕಾರ್ಯಕ್ರಮವನ್ನು ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ (ರಿ) ಪಾರಂಪಳ್ಳಿ, ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಾರ್ಕಡ ಗೆಳೆಯರ ಬಳಗದ ಜಂಟಿ ನೆರವಿನೊಂದಿಗೆ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಾಂಗಣದಲ್ಲಿ ನವಂಬರ್ 23, ಶನಿವಾರದಂದು ಆಯೋಜಿಸಿದೆ. ಮಕ್ಕಳ ಕ್ಷೇತ್ರದಲ್ಲಿ ಅನುಪಮವಾದ ಕೃಷಿ ಮಾಡಿದ ನಿವೃತ್ತ ಅಧ್ಯಾಪಕ, ಯಕ್ಷ ಗುರು, ಲೇಖಕ, ಹವ್ಯಾಸಿ ಯಕ್ಷಗಾನ […]
ಕೋಟ ಸುಜಯೀಂದ್ರ ಹಂದೆಯವರಿಗೆ ಯಕ್ಷಗಾನ ಅಕಾಡೆಮಿ ಪುರಸ್ಕಾರ
ಮಂಗಳೂರು ( ನ .22): 2023 ರ ಸಾಲಿನ ಯಕ್ಷಗಾನ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಉಪನ್ಯಾಸಕ, ಲೇಖಕ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಕೋಟದ ಎಚ್. ಸುಜಯೀಂದ್ರ ಹಂದೆಯವರಿಗೆ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಹಂದೆಯವರ ‘ಯಕ್ಷ ದೀವಟಿಕೆ’ ಕೃತಿ ಬಹುಮಾನಕ್ಕೆ ಆಯ್ಕೆಯಾಗಿತ್ತು. ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜು : CSEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವಿಚ್ಛಿನ್ನ ಸಾಧನೆ
ಹೆಮ್ಮಾಡಿ( ನ,22): CSEET-ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಸಾಧನೆ ಮೆರೆದಿದ್ದಾರೆ.ಕ್ರಮವಾಗಿ,ಧೀರಜ್ ಶೇಟ್,ಸುಜನ್ ಎಸ್.ಪಿ,ಅರ್ಚನ್ ಕುಮಾರ್, ಮೈತ್ರಿ,ಅಕ್ಷೋಭ್ಯ,ವಿಶ್ಮಿತಾ,ಸ್ಪಂದನ,ಶಾಶ್ವತ್ ಶೆಟ್ಟಿ, ಕೌಶಿಕ್ ಶೆಟ್ಟಿ ಈ ವಿದ್ಯಾರ್ಥಿಗಳು CS ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ […]
ಕಾರ್ಕಳ ಜ್ಞಾನಸುಧಾ ಪ.ಪೂ : ವಾರ್ಷಿಕ ಕ್ರೀಡಾಕೂಟ-ಅಡತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಳ್ಳಿ : ರಮೇಶ್ ಎಚ್.
ಕಾರ್ಕಳ( ನ .19) : ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಮಹತ್ವದ್ದು. ಅಂತಹ ಗುರುಗಳನ್ನು ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗುವವರು ಆರಿಸಿಕೊಳ್ಳ ಬೇಕು. ಅಡೆತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಂಡವರು ಸಾಧಕರಾಗಿ ಹೊರಬರುತ್ತಾರೆ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಶ್ರೀ ರಮೇಶ್ ಎಚ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟ-2024 ರ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಸಿ […]
ಸಂಜಿತ್ ಎಮ್ ದೇವಾಡಿಗ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕೋಟೇಶ್ವರ ( ನ .19): ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ ಕುಂದಾಪುರ ಇಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇಲ್ಲಿನ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಮ್ ದೇವಾಡಿಗ ಇವನು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಸ್ಯಾಕ್ಸೋಫೋನ್ ವಾದಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿಯ […]










