ಕೊಲ್ಲೂರು ( ನ .04): ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ) ಉಡುಪಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟ ಸ್ಫರ್ಧೆಯಲ್ಲಿ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ನಾಗಮಣಿ ವೈ ಎಂ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ಅಶ್ವಿನಿ ಪ್ರಶಸ್ತಿಯನ್ನು ಪಡೆದು ತುಮಕೂರಿನಲ್ಲಿ ನೆಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಕೋರಿದ್ದಾರೆ.
Month: November 2024
ಅಬಾಕಸ್ : ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಆದ್ಯಾ ಕಾಂಚನ್
ಕಿರಿಮಂಜೇಶ್ವರ( ನ .04): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ 19ನೆಯ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತಮೇಟಿಕ್ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಆದ್ಯಾ ಕಾಂಚನ್(4ನೇ ತರಗತಿ) ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಹೆಮ್ಮಾಡಿ :ಜನತಾ ಪಿ ಯು ಕಾಲೇಜು ಹಾಗೂ ಜನತಾ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
ಹೆಮ್ಮಾಡಿ( ನ .04):ಜನತಾ ಪದವಿಪೂರ್ವ ಕಾಲೇಜು ಹಾಗೂ ಜನತಾ ಪ್ರೌಢಶಾಲೆ ಹೆಮ್ಮಾಡಿ ಸಂಯುಕ್ತ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜು ಕಾಳಾವರರವರು ಅಧ್ಯಕ್ಷತೆ ವಹಿಸಿ ಕನ್ನಡದ ಮನಸ್ಸುಗಳೆಲ್ಲವೂ ಒಂದಾಗಿ ಕನ್ನಡದ ಹಿರಿಮೆಯನ್ನು ಜಗದಗಲ ಪಸರಿಸಬೇಕೆಂದರು.ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀ ರಮೇಶ ಪೂಜಾರಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಉದಯ ನಾಯ್ಕರವರು ನಾಡು-ನುಡಿ-ಸಂಸ್ಕ್ರತಿಯ ಅನಾವರಣದ ಕುರಿತಾಗಿ ಮಾತನಾಡಿ […]
ರಾಜ್ಯ ಮಟ್ಟದ ಅಬಾಕಸ್ ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ: ಲಕ್ಷ್ ರಾಜೇಶ್ ಪ್ರಥಮ
ಕುಂದಾಪುರ ( ನ .04): ಕಳೆದ ವರ್ಷ ಹಾಸನದಲ್ಲಿ ಜರುಗಿದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ,ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್’ ಹಾಗೂ ಮಹಾಬಲಿಪುರಂನಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ‘‘Gold prize winner in World City Cup-2023’ ’ ಬಹುಮಾನ ಪಡೆದ ಲಕ್ಷ್ ರಾಜೇಶ್ ಆಕ್ಟೋಬರ್ 27 ರಂದು ಚಿತ್ರದುರ್ಗದಲ್ಲಿ ನಡೆದ 19ನೇ ರಾಜ್ಯಮಟ್ಟದ […]
ಪ್ರದೀಪ ಕುಮಾರ್ ಬಸ್ರೂರು ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ ( ನ.01): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಸಮಾಜ ಸೇವಾ ವಿಭಾಗದಲ್ಲಿ ಪ್ರದೀಪ್ ಕುಮಾರ್ ಬಸ್ರೂರು ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮನೆ ಹುಡುಕಿ, ಅವರ ಫೋಟೋ, ಮಾಹಿತಿ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಿ ಅವರ ಮನೆಯವರಿಗೆ ರಾಷ್ಟ್ರಧ್ವಜ ನೀಡಿ, ಮನೆಗೆ ” ಸ್ವಾತಂತ್ರ್ಯ ಹೋರಾಟಗಾರ ರ ಮನೆ ಎನ್ನುವ ನಾಮಫಲಕ ಅಳವಡಿಸುವ ಮಹತ್ವದ ಕಾರ್ಯಕ್ರಮವನ್ನು ಇವರು ನಡೆಸಿದ್ದರು.
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ : 69ನೇ ಕನ್ನಡ ರಾಜ್ಯೋತ್ಸವದ ಆಚರಣೆ
ಕಿರಿಮಂಜೇಶ್ವರ (ನ,1) : ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಯಿತು. ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕರಾದ ಸುಬ್ರಹ್ಮಣ್ಯ ಮರಾಠಿ ಇವರು ಕನ್ನಡದ ಐತಿಹಾಸಿಕ ಹಿನ್ನೆಲೆ ಮತ್ತು ಕನ್ನಡದ ನಾಡು ನುಡಿಯ ಬಗ್ಗೆ ,ಉಳಿವು ಅಳಿವಿನ ಬಗ್ಗೆ ಮಾತನಾಡಿದರು.ಈ ಸಭೆಯ ಅಧ್ಯಕ್ಷತೆಯನ್ನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಅವರು ಕನ್ನಡದ […]
ಕಾರ್ಕಳ ಜ್ಞಾನ ಸುಧಾ: ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸಂಪನ್ನ
ಕಾರ್ಕಳ ( ನ.01): ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]
ಎಚ್.ಎಮ್.ಎಮ್ & ವಿ.ಕೆ.ಆರ್ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಕುಂದಾಪುರ (ನ,01) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಗೈದರು. ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಶಿಕ್ಷಕರಾಗಿರುವ ನಾವೆಲ್ಲರೂ ಕನ್ನಡ ಭಾಷೆಯ ಮೇಲೆ ಎಷ್ಟರ ಮಟ್ಟಿಗೆ ಹಿಡಿತವನ್ನು ಹೊಂದಿದ್ದೇವೆ ಎಂಬುದನ್ನು ಅವಲೋಕನ […]
ಬಿ.ಬಿ. ಹೆಗ್ಡೆ ಕಾಲೇಜು : ಆರೋಗ್ಯವಿಮೆ -ಅರಿವು ಕಾರ್ಯಕ್ರಮ
ಕುಂದಾಪುರ (ಅ. 29): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಸ್ಟಾರ್ ಹೆಲ್ತ್ ಸಂಸ್ಥೆಯ ವತಿಯಿಂದ ಆರೋಗ್ಯ ವಿಮೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸ್ಟಾರ್ ಹೆಲ್ತ್ನ ಟ್ರೈನಿಂಗ್ ಮ್ಯಾನೇಜರ್ ಆಗಿರುವ ಶ್ರೀ ಸಂತೋಷ್ರವರು ಆರೋಗ್ಯ ವಿಮೆ ಹಾಗೂ ಲಭ್ಯವಿರುವ ವಿವಿಧ ಪಾಲಿಸಿಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆಯನ್ನು […]
ಬ್ಯಾರೀಸ್ ಪದವಿ ಕಾಲೇಜಿನಲ್ಲಿ “ರಾಷ್ಟ್ರೀಯ ಏಕತಾ ದಿನಾಚರಣೆ”
ಕೋಡಿ ( ನ.01): ಬ್ಯಾರಿಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ರಾಷ್ಟ್ರೀಯ ಏಕತಾ ದಿನಾಚರಣೆ” ಆಚರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಬೀನಾ.ಹೆಚ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ. ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನುದ್ದೇಶಿಸಿ “ವಲ್ಲಭಭಾಯಿ ಪಟೇಲರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ಗಾಂಧೀಜಿಯ ಆದರ್ಶಗಳಿಂದ ಪ್ರಭಾವಿತರಾದದ್ದು ಮಾತ್ರವಲ್ಲದೆ ಏಕತೆಯ ಸಂಘಟನೆ […]










