ಕುಂದಾಪುರ (ದಿ.30): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 6ನೇ ತರಗತಿಯ ವಿಧ್ಯಾರ್ಥಿ ಅಥರ್ವ ಖಾರ್ವಿ ನವದೆಹಲಿಯಲ್ಲಿ ಜರುಗಿದ ಆಲ್ ಇಂಡಿಯಾ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, ಕಂಚಿನ ಪದಕವನ್ನು ಗಳಿಸಿರುತ್ತಾನೆ. ಕಂಚಿನ ಪದಕ ವಿಜೇತ ಕರಾಟೆ ಪಟುವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
Day: December 31, 2024
ಬಿ. ಬಿ. ಹೆಗ್ಡೆ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಡಿ.30): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ಗೀತೆ (ಗುಂಪು ವಿಭಾಗ) ಸ್ಪರ್ಧೆಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಗಂಗೊಳ್ಳಿ : ಸರಸ್ವತಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
ಗಂಗೊಳ್ಳಿ(ಡಿ.31): ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದೂ ಇಲ್ಲ. ನಾವು ಬೆಳೆದು ಉಳಿದವರನ್ನು ಕೂಡ ಬೆಳೆಸುತ್ತಾ ಸಾಗುವಲ್ಲಿ ಜೀವನದ ನಿಜವಾದ ಸಾರ್ಥಕತೆ ಅಡಗಿದೆ ಎಂದು ಉದ್ಯಮಿ ಮೌಲಾನ ಇಬ್ರಾಹಿಂ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿ.ಎಸ್.ವಿ.ಎಸ್ ಅಸೋಸಿಯೇಷನ್ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಬದುಕಿನಲ್ಲಿ ಏರಿಳಿತಗಳು ಸಾಮಾನ್ಯ.. ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಧೃತಿ ಗೆಡದೆ ನಮ್ಮ […]
ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಶೃದ್ಧಾ ಆರ್ .ಸಾಧನೆ
ಕುಂದಾಪುರ ಡಿ.30: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ‘ಘೋಷಣೆ’ ಸ್ಪರ್ಧೆಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಕಾಲೇಜಿನ ವಿದ್ಯಾರ್ಥಿನಿ ಶೃದ್ಧಾ ಆರ್., ಅಂತಿಮ ಬಿಬಿಎ ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಚೆಸ್ನಲ್ಲಿ ಎಚ್. ಎಮ್. ಎಮ್ ನ ಶ್ರೀನಿತ್ಗೆ ದ್ವಿತೀಯ ಸ್ಥಾನ
ಕುಂದಾಪುರ (ಡಿ.31): ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ(ರಿ.) ಉಪ್ಪುಂದ ಇದರ ವತಿಯಿಂದ ಬ್ರಹ್ಮಾವರದಲ್ಲಿ ಡಿ.22 ರಂದು ನಡೆದ ಶ್ರೀ ಸಿದ್ಧಿವಿನಾಯಕ ಟ್ರೋಫಿ 2024 ರ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ಎರಡನೇ ತರಗತಿ ವಿದ್ಯಾರ್ಥಿ ಶ್ರೀನಿತ್ ಶೇಟ್ 7ರ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿ 6 ರೌಂಡ್ಸ್ ಗಳಲ್ಲಿ 5 ಪಾಯಿಂಟ್ಸ್ ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ […]
ಕಲ್ ತೋಡ್ಮಿ ಮನೆ ಕುಟುಂಬದವರ ಮೂಲ ನಾಗಬನದ ಚತುಃಪವಿತ್ರ ನಾಗಮಂಡಲೋತ್ಸವ ಸಂಪನ್ನ
ಕುಂದಾಪುರ(ಡಿ.31): ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಡಿಸೆಂಬರ್ 26 ರಂದು ವಿಜೃಂಭಣೆಯಿಂದ ನಡೆಯಿತು. ಶ್ರೀ ದೇವರಿಗೆ ಬೆಳಿಗ್ಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಸಮಾರಾಧನೆ, ಕೃಚ್ಚಾಚರಣೆ, ಮಹಾಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ್ತ ಅಯುತ ಸಂಖ್ಯಾತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ತತ್ವ ಕಲಶ ಸ್ಥಾಪನೆ, ತತ್ವಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, […]