ಕುಂದಾಪುರ (ಏ.09): ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಹೊಸಂಗಡಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಏಪ್ರಿಲ್ ,08 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಗುರುಪ್ರಸಾದ್ ಹೆಚ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ ಇದರ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ಚುನಾವಣಾ ಸಾಕ್ಷರತಾ ಸಂಘದ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಾಘವೇಂದ್ರ […]
Year: 2024
ಬಗ್ವಾಡಿ : ಗುರಿಕಾರರ ಸಭೆ
ಹೆಮ್ಮಾಡಿ (ಏ,07): ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಇದರ ಆಶ್ರಯದಲ್ಲಿ ಮೊಗವೀರ ಸಮುದಾಯದ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆ ಎಪ್ರಿಲ್, 07 ರಂದು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ಸಭಾಭವನದಲ್ಲಿ ಜರುಗಿತು.ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಮಹಾಜನ ಸೇವಾ ಸಂಘ( ಬಗ್ವಾಡಿ ಹೋಬಳಿ 1941) ಇದರ […]
ಗುಣಮಟ್ಟದ ವಾಣಿಜ್ಯ ಶಿಕ್ಷಣಕ್ಕೆ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಆಯ್ಕೆ :ವಾಣಿಜ್ಯ ಶಿಕ್ಷಣದೊಂದಿಗೆ CA ಫೌಂಡೇಶನ್ ಮತ್ತು CSEET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ
ಉಡುಪಿ ಜಿಲ್ಲೆಯಲ್ಲಿಯೇ ಅಮೋಘ ಫಲಿತಾಂಶವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆ, ವಿಜ್ಞಾನ ವಿಭಾಗ ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ರ್ಯಾಂಕ್ ಗಳನ್ನು ಪಡೆದುಕೊಂಡಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ದಿನದಿಂದಲೇ ತರಬೇತಿ ನೀಡಲಾಗುತ್ತಿದೆ. ಏಳು ಉಪನ್ಯಾಸಕರು ಸೇರಿಕೊಂಡು ಸ್ಥಾಪಿಸಿದ ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜ್ ಎಂದು ಗುರುತಿಸಿ ಕೊಂಡಿದೆ. ಶೈಕ್ಷಣಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆಗೈದಿದೆ. ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರ್ಯಾಂಕ್ ಗಳಲ್ಲಿ […]
ಎಚ್.ಎಮ್.ಎಮ್. ಮತ್ತು ವಿ. ಕೆ. ಆರ್. ಶಾಲೆ,ಕುಂದಾಪುರ: ಬೇಸಿಗೆ ಶಿಬಿರ ಉದ್ಘಾಟನೆ
ಕುಂದಾಪುರ (ಎ.4) : ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ – ತಿರ್ಗ್ತ ಕಲುದ್ ಎನ್ನುವುದು ಒಂದು ವಿಶೇಷ, ವಿಭಿನ್ನ ಕಾರ್ಯಕ್ರಮ. ನಾವು ಎಲ್ಲಿಯೇ ಹೋದರೂ ನಮ್ಮ ಮಣ್ಣಿನ ಸೊಗಡನ್ನು ಮತ್ತು ಸಂಸ್ಕೃತಿಯನ್ನು ಬಿಡದೇ ಬೆಳೆಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ, ಸಾಹಿತಿ ಡಾ. ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳು ಹಮ್ಮಿಕೊಂಡ ಪ್ಯಾಟಿ ಮಕ್ಕಳ್ ಹಳ್ಳಿ […]
ಬಿ. ಬಿ. ಹೆಗ್ಡೆ ಕಾಲೇಜು: ಪ್ರಾಕ್ತನ ವಿದ್ಯಾರ್ಥಿಗಳಿಂದ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮಷೀನ್ ಕೊಡುಗೆ
ಕುಂದಾಪುರ (ಏಪ್ರಿಲ್ 01): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘ ಕಾಲೇಜಿಗೆ ಕೊಡಮಾಡಿದ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮಷೀನ್ನನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಶ್ರೀಮತಿ ವೀಣಾ ಭಟ್ ಹಾಗೂ ಡಾ| ದೀಪಾ, ಪ್ರಾಕ್ತನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾವತಿ […]
ಡಾI ಬಿ. ಬಿ ಹೆಗ್ಡೆ ಕಾಲೇಜು : ಮತದಾನ ಜಾಗೃತಿ ಅಭಿಯಾನ
ಕುಂದಾಪುರ(ಏ.04):ಇಲ್ಲಿನ ಡಾI ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ಚುನಾವಣಾ ಸಾಕ್ಷರತಾ ಸಂಘದ ಆಶ್ರಯದಲ್ಲಿ ನಮ್ಮ ಭೂಮಿ ಸಂಸ್ಥೆಯ ಸಹಯೋಗದೊಂದಿಗೆ ಮತದಾನ ಜಾಗೃತಿ ಅಭಿಯಾನ ಏಪ್ರಿಲ್ 04 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಮ್ಮ ಭೂಮಿ ಸಂಸ್ಥೆಯ ಗ್ರಾಮ ಮಟ್ಟದ ಸಂಯೋಜಕ ಗಣೇಶ್ ಶೆಟ್ಟಿ ಮಾತನಾಡಿ ಮತ ಚಲಾವಣೆ ನಮ್ಮ ಸಂವಿಧಾನಾತ್ಮಕ ಹಕ್ಕು, ನಾವು ಜವಾಬ್ದಾರಿಯುತವಾಗಿ […]
ಗುರುದತ್ತ ಕುಲಕರ್ಣಿಯವರಿಗೆ ಮಾಧ್ಯಮ ವಾಹಕ ಪ್ರಶಸ್ತಿ
ಬೆಂಗಳೂರು ( ಮಾ.30): ಮಂತ್ರಾಲಯದಂತಹ ಪುಣ್ಯ ಕ್ಷೇತ್ರದಲ್ಲಿ ಪರಿಮಳ ಪ್ರಶಸ್ತಿ, ಕರುನಾಡ ಮರಳಿ ಸಂಸ್ಕೃತಿಗೆ,ಗಾಂಧೀಜಿಯವರ ಕನಸಿನ ಗಾಂಧಿ ಹೆಜ್ಜೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸ್ಪೇಸ್ ಮೀಡಿಯಾ ನಿರ್ದೇಶಕರಾದ ಶ್ರೀ ಗುರುದತ್ತ ಕುಲಕರ್ಣಿ ಅವರಿಗೆ ಚಿರಂತನ ಅಭಿವೃದ್ಧಿ ಪ್ರತಿಷ್ಠಾನ ಪ್ರತಿ ವರ್ಷ ಕೊಡಮಾಡುವ SPB ಮತ್ತು LNS ನೆನಪು ಕಾರ್ಯಕ್ರಮದಲ್ಲಿ ದೃಶ್ಯ ಮಾಧ್ಯಮದ ವಿಭಾಗದ ಸಾಧನೆ ಗುರುತಿಸಿ ಕೊಡಮಾಡುವ ಮಾಧ್ಯಮ ವಾಹಕ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ […]
ಎಚ್ ಎಂ ಎಂ ಪೂರ್ವ ಪ್ರಾಥಮಿಕ ಶಾಲೆ ಕುಂದಾಪುರ : ಗ್ರಾಜುಯೇಷನ್ ಡೇ
ಕುಂದಾಪುರ(ಮಾ.30): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಂದಾಪುರ ಎಜುಕೇಶನ್ ಸೊಸೈಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಗ್ರಾಜುಯೇಷನ್ ಡೇ ಸಮಾರಂಭ ಮಾರ್ಚ್ 24 ರoದು ನಡೆಯಿತು. ಡಾ.ಬಿ. ಬಿ. ಹೆ ಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಶ್ರೀಮತಿ ವೀಣಾ ಭಟ್ ಉದ್ಘಾಟಿಸಿದರು. ಪೋಷಕರು ಮಕ್ಕಳ ಮನಸ್ಸು ಮತ್ತು ಭಾವನೆಗಳನ್ನು ಅರಿತು ಅದಕ್ಕೆ ಪೂರಕವಾದ ಪ್ರತಿಕ್ರಿಯೆಗಳನ್ನು ನೀಡುವುದರ ಮೂಲಕ ಮಕ್ಕಳನ್ನು ಮೊಬೈಲ್ […]
ಬಿ. ಬಿ. ಹೆಗ್ಡೆ ಕಾಲೇಜು: “ಜಲ ಜಾಗೃತಿ ತೇರು”
ಕುಂದಾಪುರ (ಮಾರ್ಚ್ 28) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಯುವ ರೆಡ್ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಜಲ ಜಾಗೃತಿ ಅಭಿಯಾನದ ಅಂಗವಾಗಿ “ಜಲ ಜಾಗೃತಿ ತೇರು” ಎನ್ನುವ ವಿನೂತನ ಕಾರ್ಯಕ್ರಮ ಜರಗಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಜಲ ಜಾಗೃತಿ ರಥವನ್ನು ಸಾಂಕೇತಿಕವಾಗಿ ಎಳೆಯುವ ಮೂಲಕ ಉದ್ಘಾಟಿಸಿ, ಸಮಸ್ತ ಜೀವ ಜಗತ್ತಿನ ಜೀವಾಮೃತ ನೀರು, […]
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಕ್ರಿಯೇಟಿವ್ ಆರ್ಟ್ಸ್ ವಿಷಯದ ಬಗ್ಗೆ ಕಾರ್ಯಾಗಾರ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೇಸಿಕ್ ಸೈನ್ಸ್ ವಿಭಾಗದ ಇಂಡಕ್ಷನ್ ಪ್ರೋಗ್ರಾಂ ವತಿಯಿಂದ ಕ್ರಿಯೇಟಿವ್ ಆರ್ಟ್ಸ್ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ತಾರ ಹಳ್ಳಿಹೊಳೆ ತಂಡದ ರಾಜೇಂದ್ರ ಹಳ್ಳಿಹೊಳೆ, ಗಿರೀಶ್ ವಕ್ವಾಡಿ ಹಾಗೂ ರಾಘವೇಂದ್ರ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಭಾವಚಿತ್ರ ರಚನೆ, ವರ್ಲಿ ಆರ್ಟ್ ಹಾಗೂ ಮುಖವಾಡ ತಯಾರಿಕೆ ಎಂಬ ಮೂರು ವಿಭಾಗಗಳಲ್ಲಿ ಪ್ರತ್ಯೇಕ ತರಬೇತಿಯನ್ನು ನೀಡಲಾಯಿತು. ಶ್ರೀ ರಾಜೇಂದ್ರ ಅವರು ವರ್ಲಿ ಆರ್ಟ್ ಕಲೆಯನ್ನು ಪರಿಚಯಿಸಿ […]










