ಕುಂದಾಪುರ(ಏ.04):ಇಲ್ಲಿನ ಡಾI ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ಚುನಾವಣಾ ಸಾಕ್ಷರತಾ ಸಂಘದ ಆಶ್ರಯದಲ್ಲಿ ನಮ್ಮ ಭೂಮಿ ಸಂಸ್ಥೆಯ ಸಹಯೋಗದೊಂದಿಗೆ ಮತದಾನ ಜಾಗೃತಿ ಅಭಿಯಾನ ಏಪ್ರಿಲ್ 04 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಮ್ಮ ಭೂಮಿ ಸಂಸ್ಥೆಯ ಗ್ರಾಮ ಮಟ್ಟದ ಸಂಯೋಜಕ ಗಣೇಶ್ ಶೆಟ್ಟಿ ಮಾತನಾಡಿ ಮತ ಚಲಾವಣೆ ನಮ್ಮ ಸಂವಿಧಾನಾತ್ಮಕ ಹಕ್ಕು, ನಾವು ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು.ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರದ ಪ್ರೊ .ಕೆ ಉಮೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದರು. ನಮ್ಮ ಭೂಮಿ ಸಂಸ್ಥೆಯ ಗ್ರಾಮ ಮಟ್ಟದ ಸಂಯೋಜಕರಾದ ಶ್ರೇಯಸ್, ಅನಿತಾ ಹಾಗೂ ಆಶಾ ಉಪಸ್ಥಿತರಿದ್ದರು.ಏನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಡಾI ಚೇತನ್ ಶೆಟ್ಟಿ ಕೊವಾಡಿ ಸ್ವಾಗತಿಸಿದರು. ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು. ಇನ್ನೊರ್ವ ಏನ್. ಎಸ್ ಎಸ್ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.