ಕುoದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾಗಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು (ಬಿಬಿಎಚ್ಸಿ) ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ವಾಣಿಜ್ಯ (ಬಿ.ಕಾಂ.), ವ್ಯವಹಾರ ಆಡಳಿತ (ಬಿಬಿಎ) ಮತ್ತು ಗಣಕ ವಿಜ್ಞಾನ (ಬಿಸಿಎ) ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಕೇಂದ್ರವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಈ ವಿದ್ಯಾಸಂಸ್ಥೆ ಕಳೆದ 14 ವರ್ಷಗಳಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಗಳ ವ್ಯಕ್ತಿತ್ವ […]
Year: 2024
ಬಿ. ಬಿ. ಹೆಗ್ಡೆ ಕಾಲೇಜು: ವಿಸ್ತರಣಾ ಚಟುವಟಿಕೆ
ಕುಂದಾಪುರ (ಮಾರ್ಚ್ 20): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಮತ್ತು ರೋವರ್ಸ್-ರೇಂಜರ್ಸ್ ಘಟಕದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯನ್ನು ಮಾರ್ಚ್ 20 ರಂದು ಆನಗಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಸ್ವಯಂಸೇವಕರು ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ, ರೇಂಜರ್ಸ್ […]
ಬಿ. ಬಿ. ಹೆಗ್ಡೆ ಕಾಲೇಜು : ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ರಿಂದ ಸ್ಟಾರ್ಟ್ ಆಪ್ಗಳಿಗೆ ಚಾಲನೆ
ಕುಂದಾಪುರ (ಮಾ.21): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಮಣಿಪಾಲದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ನಡುವಿನ ಶೈಕ್ಷಣಿಕ ಒಡಂಬಡಿಕೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಮುಖ್ಯಸ್ಥರಾದ ಬ್ರಿಗೇಡಿಯರ್ ಡಾ| ಸುರ್ಜಿತ್ ಸಿಂಗ್ ಪಾಬ್ಲಾ ಅವರು ಕಾಲೇಜಿನ ವಿದ್ಯಾರ್ಥಿಗಳು ಪ್ರಾರಂಭಿಸಿದ 4 ಸ್ಟಾರ್ಟ್ ಅಪ್ ಗಳಿಗೆ ವಿಧ್ಯುಕ್ತ ಚಾಲನೆ ನೀಡಿದರು. ಕಾಲೇಜಿನ […]
ಬಿ . ಬಿ. ಹೆಗ್ಡೆ ಕಾಲೇಜು: ಆವಿಷ್ಕಾರ ಆಧಾರಿತ ಉದ್ಯಮಶೀಲತೆ ಇಂದಿನ ತುರ್ತು-ಶ್ರೀ ಸಂಪತ್ ಶೆಟ್ಟಿ
ಕುಂದಾಪುರ (ಮಾ.20): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆ ಘಟಕ (Innovation & Entrepreneurship Development Cell) ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕೃಷ್ಣ ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್, ವಂಡಾರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಂಪತ್ ಶೆಟ್ಟಿ, ಆವಿಷ್ಕಾರ ಆಧಾರಿತ ಉದ್ಯಮಶೀಲತೆ ದೇಶದ ಇಂದಿನ ತುರ್ತು, […]
“ಸುವರ್ಣ ಕರ್ನಾಟಕ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ
ಗಂಗೊಳ್ಳಿ ( ಮಾ.21): ಖ್ಯಾತ ಗಾಯಕ ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿಯವರ 31 ವರ್ಷದ ಕಲಾ ಸೇವೆಯನ್ನು ಪರಿಗಣಿಸಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಜಿಲ್ಲೆ ಇವರು ಕೊಡಮಾಡುವ “ಸುವರ್ಣ ಕರ್ನಾಟಕ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ ತಿಂಗಳಲ್ಲಿ ನಡೆಯುವ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸಾಲಿಗ್ರಾಮ […]
ಬಿ . ಬಿ. ಹೆಗ್ಡೆ ಕಾಲೇಜು:“ನೋವೆಷನ್” ಮ್ಯಾನೇಜ್ಮೆಂಟ್ ಫೆಸ್ಟ್ ಸಮಾರೋಪ
ಕುಂದಾಪುರ (ಮಾ.16): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ನಡೆದ “ನೋವೆಷನ್” – ಮ್ಯಾನೇಜ್ಮೆಂಟ್ ಫೆಸ್ಟ್ ಅಂತರ್-ತರಗತಿ ಸ್ಪರ್ಧೆಯು ಮಾರ್ಚ್ 16ರಂದು ಕಾಲೇಜಿನ ಸಭಾಂಗಣದಲ್ಲಿ ಸಂಪನ್ನಗೊoಡಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ […]
ಕುಂದಾಪುರ : ಶಿಕ್ಷಕ ದಂಪತಿಯ ಈಜು ಸಾಧನೆ
ಕುಂದಾಪುರ ( ಮಾ.21): ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಸ್ಪರ್ಧೆಯಲ್ಲಿ, ಮುಲ್ಲಕಾಡು ಸರ್ಕಾರಿ ಶಾಲೆಯ ಶಿಕ್ಷಕ ದಂಪತಿ ವಿಶೇಷ ಸಾಧನೆ ಮಾಡಿದ್ದಾರೆ. ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ, ದಾಖಲೆಯ ಈಜುಪಟು, ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ […]
ಹೆಮ್ಮಾಡಿ: ಜಿ.ಶಂಕರ್ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ
ಹೆಮ್ಮಾಡಿ( ಮಾ.20): ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯ ಕಾರ್ಡುಗಳನ್ನು ಮೊಗವೀರ ಯುವ ಸಂಘಟನೆ( ರಿ )ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕ ವ್ಯಾಪ್ತಿಯಲ್ಲಿ ನೊಂದಣಿ ಮಾಡಿಕೊಂಡವರಿಗೆ ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಇದರ ಕಟ್ಟಡದಲ್ಲಿ ಇರುವ ಬ್ಲೂ ಸ್ಕೈ ಸ್ಟುಡಿಯೋ ದಲ್ಲಿ […]
ಉದ್ಯಮಿ ಅಂಪಾರು ದಿನೇಶ್ ವೈದ್ಯ ರಿಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ಪ್ರದಾನ
ಕುಂದಾಪುರ ( ಮಾ.18): ಕುಂದಾಪುರ ಮೂಲದ ಉದ್ಯಮಿ ಅಂಪಾರು ದಿನೇಶ್ ವೈದ್ಯ ಅವರಿಗೆ ಪ್ರತಿಷ್ಠಿತ ಜಗತ್ ಪ್ರಸಿದ್ಧ ಮಂತ್ರಾಲಯ ಪರಿಮಳ ಪ್ರಶಸ್ತಿಯನ್ನು ಮಂತ್ರಾಲಯ ಮಠದ ರಂಗಮಂದಿರದಲ್ಲಿ ಶ್ರೀ ಸುಭುಧೇಂದ್ರ ತೀರ್ಥರು ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು ಚಿತ್ರರಂಗದಲ್ಲಿ ಸಾಧನೆ ಮಾಡಿದ ರಮೇಶ್ ಅರವಿಂದ್, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಜುಳಾ ಗುರುರಾಜ್, ಸೇರಿದಂತೆ ಅನೇಕ ಕ್ಷೇತ್ರದ ಸಾಧಕರಿಗೂ ನೀಡಲಾಗಿದೆ. ಈ ಸಂದರ್ಭದಲ್ಲಿ ಮಂತ್ರಾಲಯ ಶ್ರೀಗಳಾದ ಶ್ರೀ ಸುಭುಧೇಂದ್ರ ತೀರ್ಥರು, ಚಿತ್ರನಟ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ: ನೂತನ ಕಚೇರಿ ಉದ್ಘಾಟನೆ, ಸಹಾಧನ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮ
ಕುಂದಾಪುರ(ಮಾ.18): `ಸಮಾಜ ಸೇವೆ ನಾಡಿನ ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಬೇಕು. ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಈ ನೆಲೆಯಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ ಮಾಡುತ್ತಿರುವ ಸಮಾಜಸೇವೆ ಪ್ರತಿಯೊಬ್ಬರಿಗೂ ಮಾದರಿ’ ಎಂದು ಪತ್ರಕರ್ತೆ ಹಾಗೂ ನಿರೂಪಕರಾದ ಜೇಸಿ ಅಕ್ಷತಾ ಗಿರೀಶ್ ಅಬಿಪ್ರಾಯ ಪಟ್ಟರು. ಅವರು ಜೈ ಕುಂದಾ ಸೇವಾ ಟ್ರಸ್ಟ್ (ರಿ) ಕುಂದಾಪುರ ಇದರ ಆಶ್ರಯದಲ್ಲಿ ಕೊಟೇಶ್ವರ ಸನ್ ವಿಜಯ ಕಾಂಪ್ಲೆಕ್ಸ್ ಆರಂಭಗೊoಡ ನೂತನ ಕಚೇರಿ […]










