ಕುಂದಾಪುರ (ಫೆ ,24): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಆಶ್ರಯದಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಸಂಯೋಜನೆಯ ” ಉದ್ಯೋಗ ಮೇಳ -2025 ” ಯಶಸ್ವಿಯಾಗಿ ನಡೆಯಿತು. ಉದ್ಯೋಗ ಮೇಳವನ್ನು ಉದ್ಘಾಟಿಸಿದ ಮಾಜಿ ಸಂಸದರಾದ ಶ್ರೀ ಜಯಪ್ರಕಾಶ್ ಹೆಗ್ಡೆ -” ಇದು ಸ್ಪರ್ಧಾತ್ಮಕ ಜಗತ್ತು, ಇಂದಿನ ನವ ಪೀಳಿಗೆ ಶೈಕ್ಷಣಿಕ ಸಾಧನೆಯಲ್ಲಿ ಮುಂದಿದ್ದು ಅವರ ಅರ್ಹತೆಗೆ ತಕ್ಕ ಉದ್ಯೋಗದ ಅನಿವಾರ್ಯತೆಯಿದೆ. ಆ ನೆಲೆಯಲ್ಲಿ 119 ವರ್ಷಗಳ ಭವ್ಯ ಇತಿಹಾಸವುಳ್ಳ […]
Month: February 2025
ಕೋಟಿ-ಚೆನ್ನಯ್ಯರ ನಡೆ-ನುಡಿ ಎಂದೆಂದಿಗೂ ಶಾಶ್ವತ : ಸಂಗೀತಾ ಕುಲಾಲ್
ಗಣಿತ ನಗರ(ಫೆ,22): ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಶ್ರೀಮತಿ ಸಂಗೀತಾ ಕುಲಾಲ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ […]
ಬಿ .ಬಿ ಹೆಗ್ಡೆ ಕಾಲೇಜಿನ ಬ್ರಾಹ್ಮಿ ಗೆ ರಾಜ್ಯ ಯುವಜನೋತ್ಸವದಲ್ಲಿ ಪ್ರಶಸ್ತಿ
ಕುಂದಾಪುರ (ಫೆ.22): ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ ಗದಗ ಇಲ್ಲಿ ಫೆಬ್ರವರಿ 18 ರಿಂದ 22 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಕುಂದಾಪುರದ ಡಾ Iಬಿ ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್ .ಎಸ್ ಸ್ವಯಂ ಸೇವಕಿ ಬ್ರಾಹ್ಮಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ […]
ವಡ್ಡರ್ಸೆಯಲ್ಲಿ ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಂಪನ್ನ
ಬ್ರಹ್ಮಾವರ, (ಫೆ,12): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸಮಾರೋಪ ನುಡಿಗಳನ್ನಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ, ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಇಂತಹ ಕ್ಯಾಂಪುಗಳು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಶಿಬಿರದ ಯಶಸ್ಸಿಗೆ ಸಹಕರಿಸಿದ ಊರಿನ […]
ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ–ಉಪನ್ಯಾಸ
ಕುಂದಾಪುರ (ಫೆ.20): ಜೀವನ ಮೌಲ್ಯಗಳು ಕಲಿಯುವುದಲ್ಲ, ಪಾಲಿಸುವಂತದದ್ದು. ಹೀಗಾಗಿ ತಂದೆ, ತಾಯಿ, ಗುರುಗಳು ಜೀವನದ ಅತ್ಯಮೂಲ್ಯ ಮೌಲ್ಯ. ಅವರ ಆದರ್ಶ ಬದುಕು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕು. ಅದರೊಂದಿಗೆ ವ್ಯಕ್ತಿತ್ವಪೂರ್ಣ ಜೀವನವನ್ನು ಪ್ರಾಮಾಣಿಕವಾಗಿ ರೂಢಿಸಿಕೊಂಡಾಗ ವ್ಯಕ್ತಿಯ ಬದುಕಿಗೆ ಬೆಲೆ ಬರುತ್ತದೆ ಎಂದು ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ್ ಭಟ್ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ […]
ಬಿ.ಬಿ. ಹೆಗ್ಡೆ ಕಾಲೇಜು: ದೇಸಿ ಗೋ ಉತ್ಪನ್ನಗಳ ಕುರಿತು ಉಪನ್ಯಾಸ
ಕುಂದಾಪುರ(ಫೆ.20): ಭಾರತೀಯ ಪರಂಪರೆಯಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಭಾರತೀಯ ದೇಸಿಯ ಗೋ ತಳಿಗಳಲ್ಲಿ ಪಂಚಗವ್ಯ ಔಷಧೀಯ ಗುಣಗಳಿದೆ. ವಿದ್ಯಾರ್ಥಿಗಳು ದಿನನಿತ್ಯದ ಬಳಕೆಯಲ್ಲಿ ದೇಸಿ ಗೋ ಉತ್ಪನ್ನಗಳನ್ನು ಹೆಚ್ಚು ಬಳಸಬೇಕಾಗಿರುವುದು ವರ್ತಮಾನದ ತುರ್ತು ಎಂದು ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇದರ ಪ್ರವರ್ತಕರಾದ ಕುಮಾರ್ ಎಸ್. ಕಾಂಚನ್ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ “ದೇಸಿ ಗೋ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಮೂರುಕೈ: ಕಲಿಕಾ ಹಬ್ಬ
ಕುಂದಾಪುರ(ಫೆ.21): ಅಂಪಾರು ಮೂರುಕೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನವೀನ್ ಶೆಟ್ಟಿ ಹೊಸಿಮನೆ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸದಾನಂದ ಕಿಣಿ, ಶ್ರೀತಿಮ್ಮಪ್ಪ ಶೆಟ್ಟಿ, ಅಂಪಾರು […]
ವಡ್ಡರ್ಸೆ ಎನ್.ಎಸ್.ಎಸ್. ಶಿಬಿರ: “ಪರಿಸರ ನಮಗೊಂದಿಷ್ಟುಉಳಿಸಿ” – ಬೀದಿನಾಟಕ ಪ್ರದರ್ಶನ
ಬ್ರಹ್ಮಾವರ(ಫೆ, 10): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಪರಿಸರ ನಮಗೊಂದಿಷ್ಟು ಉಳಿಸಿ” ಎಂಬ ಬೀದಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಪವಿತ್ರಾ ಪೈ ನಿರ್ದೇಶಿಸಿ, ಪ್ರಾಧ್ಯಾಪಕ ಪ್ರವೀಣ್ ಮೊಗವೀರ್ ಗಂಗೊಳ್ಳಿ ಸಂಯೋಜಿಸಿದರು.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]
ಎಲ್ಲರನ್ನು ಆಕರ್ಷಿಸುವ ಕಲೆ ಯಕ್ಷಗಾನ-ಗಣೇಶ್ ಕಾಮತ್
ಗಂಗೊಳ್ಳಿ (ಫೆ.18): “ ಬಾಲ್ಯದಿಂದಲೂ ನಮ್ಮನ್ನೆಲ್ಲ ಆಕರ್ಷಿಸಿದ ಕಲೆ ಯಕ್ಷಗಾನ. ಅಲ್ಲಿಯ ವೈವಿಧ್ಯಮಯವಾದ ವೇಷಭೂಷಣ ಮನಸ್ಸಿಗೆ ಬೆರಗು ಮತ್ತು ಅಚ್ಚರಿ ಹುಟ್ಟಿಸಿದ ಅಂಶ. ಯಾವುದೇ ಆಧುನಿಕ ಸೌಲಭ್ಯವಿಲ್ಲದ ಆ ಕಾಲದಲ್ಲಿ ಗ್ಯಾಸ್ ಲೈಟ್ ಗಳ ನೆರಳು ಬೆಳಕಿನಲ್ಲಿ ಕಲಾವಿದರು ಧರಿಸುತ್ತಿದ್ದ ಉಡುಗೆತೊಡುಗೆಗಳು, ಮುಖವರ್ಣಿಕೆ, ಕಿರೀಟ ಮೊದಲಾದವು ಪೌರಾಣಿಕ ಲೋಕವನ್ನೇ ಸೃಷ್ಟಿಸುತ್ತಿದ್ದವು. ಇಂದು ಕಾಲ ಬದಲಾಗಿದೆ. ಆದರೂ ಅಂದಿನ ಅದೇ ಆಕರ್ಷಣೆ ಯಕ್ಷಗಾನಕ್ಕಿದೆ. ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳವು […]
ಇಂದಿನ ಸಮಾಜದಲ್ಲಿ ಹಣಕ್ಕೆ ಕೊರತೆಯಿಲ್ಲ, ಅಂತಃಕರಣದ ಕೊರತೆ ಇದೆ- ಪ್ರೋ.ಜಯದೇವ ಜಿ.ಎಸ್.
ಕುಂದಾಪುರ (ಫೆ.16): ಇಂದಿನ ಸಮಾಜದಲ್ಲಿ ಹಣಕ್ಕೆ ಕೊರತೆಯಿಲ್ಲ, ಅಂತಃಕರಣಕದ ಕೊರತೆ ಇದೆ. ಶಿಕ್ಷಕರಾದವರು ಮುಖ್ಯವಾಗಿ ಮಕ್ಕಳ ನಂಬಿಕೆಯನ್ನುಳಿಸಿಕೊಂಡು ಅವರನ್ನು ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಆರೈಕೆ, ಕಾಳಜಿ ಮತ್ತು ಸ್ಥಿರತೆ ಈ ಅಂಶಗಳನ್ನು ಶಿಕ್ಷಕರು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಜಿ.ಎಸ್ ಶಿವರುದ್ರಪ್ಪನವರ ಮಗ, ಚಾಮರಾಜನಗರದ ದೀನಬಂಧು ಟ್ರಸ್ಟ್ ನ ಸ್ಥಾಪಕರು, ಶಿಕ್ಷಣ ಚಿಂತಕರು, ಕವಿ, ಬರೆಹಗಾರರೂ ಆಗಿರುವ ಪ್ರೋ.ಜಯದೇವ ಜಿ.ಎಸ್ ರವರು ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ […]










