ಗಂಗೊಳ್ಳಿ(ಏ,07): ಇಲ್ಲಿನ ಬೈಲು ಮನೆಯಲ್ಲಿರುವ ಶಿರಸಿ ಶ್ರೀ ಅಮ್ಮನವರ ಮತ್ತು ಸಪರಿವಾರ ದೇವರುಗಳ ಸನ್ನಿಧಿಯಲ್ಲಿ ಇತ್ತೀಚೆಗೆ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ ಮತ್ತು ರಜತ ಪ್ರಭಾವಳಿ ಸಮರ್ಪಣಾ ಕಾರ್ಯಕ್ರಮವು ನೆರವೇರಿತು. ಶ್ರೀ ವೀರೇಶ್ವರ ದೇವಸ್ಥಾನದಿಂದ ಸನ್ನಿಧಾನದವರಿಗೆ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ರಜದ ಕಿರೀಟ ಮತ್ತು ರಜದ ಪ್ರಭಾವಳಿಯನ್ನು ತರಲಾಯಿತು. ಅರ್ಚಕರಾದ ರವೀಶ ಮತ್ತು ಬಳಗ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸನ್ನಿಧಾನದ ಅರ್ಚಕರಾದ ಆನಂದ ಬಿಲ್ಲವ ಅವರು […]
Day: April 9, 2025
ಪಿ ಯು ಫಲಿತಾಂಶ : ಜ್ಞಾನಸುಧಾದ ವಿದ್ಯಾರ್ಥಿಗಳಿಂದ ಉತ್ಕೃಷ್ಟ ಸಾಧನೆ
ಗಣಿತನಗರ( ಏ,9): : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್ 596 ಅಂಕಗಳೊoದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ […]
ಹೆಮ್ಮಾಡಿಯಲ್ಲಿ ಜನತಾ ಕ್ರಾಂತಿ-ಸತತ 3 ನೇ ವರ್ಷವೂ ಜನತಾ ಪಿಯು ಕಾಲೇಜಿಗೆ ದಾಖಲೆಯ 100 ಫಲಿತಾಂಶ,ರಾಜ್ಯ ಮಟ್ಟದ 7 ರ್ಯಾಂಕ್
ಕುoದಾಪುರ(ಏ,09) : 2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊoದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ . ವಿಜ್ಞಾನ ವಿಭಾಗದಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 113 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 113 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ .ವಾಣಿಜ್ಯ ವಿಭಾಗದಲ್ಲಿ 88 ವಿದ್ಯಾರ್ಥಿಗಳು […]
ಏಪ್ರಿಲ್ 12 ರಂದು ಬಗ್ವಾಡಿ ಉತ್ಸವ – ರಾಜ್ಯ ಮಟ್ಟದ ನ್ರತ್ಯ ಸ್ಪರ್ಧೆ
ಬಗ್ವಾಡಿ (ಏ. 09): ಕುಂದಾಪುರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವ ಇದೇ ಏಪ್ರಿಲ್ 12ರ ಶನಿವಾರದಂದು ನಡೆಯಲಿದ್ದು , ರಥೋತ್ಸವದ ಪ್ರಯುಕ್ತ ಸಂಜೆ 7 ರಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರಖ್ಯಾತ ನೃತ್ಯ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಎಂದು ಶ್ರೀ ಮಹಿಷಾಸುರ ಮರ್ದಿನಿ ಸಾಂಸ್ಕೃತಿಕ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.