ಗಂಗೊಳ್ಳಿ(ಏ,07): ಇಲ್ಲಿನ ಬೈಲು ಮನೆಯಲ್ಲಿರುವ ಶಿರಸಿ ಶ್ರೀ ಅಮ್ಮನವರ ಮತ್ತು ಸಪರಿವಾರ ದೇವರುಗಳ ಸನ್ನಿಧಿಯಲ್ಲಿ ಇತ್ತೀಚೆಗೆ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ ಮತ್ತು ರಜತ ಪ್ರಭಾವಳಿ ಸಮರ್ಪಣಾ ಕಾರ್ಯಕ್ರಮವು ನೆರವೇರಿತು.
ಶ್ರೀ ವೀರೇಶ್ವರ ದೇವಸ್ಥಾನದಿಂದ ಸನ್ನಿಧಾನದವರಿಗೆ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ರಜದ ಕಿರೀಟ ಮತ್ತು ರಜದ ಪ್ರಭಾವಳಿಯನ್ನು ತರಲಾಯಿತು. ಅರ್ಚಕರಾದ ರವೀಶ ಮತ್ತು ಬಳಗ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಸನ್ನಿಧಾನದ ಅರ್ಚಕರಾದ ಆನಂದ ಬಿಲ್ಲವ ಅವರು ರಜತ ಕಿರೀಟವನ್ನು ಕೊಡ ಮಾಡಿದ ದಾನಿಗಳಾದ ಮನೋಜ್ ಖಾರ್ವಿ ಮತ್ತು ಅರುಣ ಖಾರ್ವಿ ಇವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗುಡ್ಡೆ ಕೇರಿಯ ಮತ್ತು ಊರ ಹತ್ತು ಸಮಸ್ತರು, ಬೈಲುಮನೆ ಕುಟುಂಬಸ್ಥರು, ಜಿ ಗೋಪಾಲ ಪೂಜಾರಿ, ನಾಗರಾಜ ಖಾರ್ವಿ, ಶಿವರಾಮ ಪೂಜಾರಿ, ಹರೀಶ ಪೂಜಾರಿ, ಭರತ ಪೂಜಾರಿ, ನಾಗರಾಜ ಪೂಜಾರಿ, ಗಣೇಶ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಿತು.