ಕುಂದಾಪುರ( ಸೆ.24): ಕುಂದಾಪುರ ಮೂಲದ ಕುಮಾರಿ ನಿಶಾಲಿ ಉಮೇಶ್ ಕುಂದರ್ ರವರು ದೆಹಲಿಯಲ್ಲಿ ಇತ್ತೀಚೆಗೆ ನಡೆದ ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಒಟ್ಟು 43 ಸ್ಪರ್ಧಾಳುಗಳನ್ನು ಹಿಂದಿಕ್ಕಿ ,ಸ್ಪರ್ಧೆಯ ಭಾಗವಾಗಿ ಯಕ್ಷಗಾನ ಪಾತ್ರದ ಅಭಿನಯ ಮಾಡಿ ಜೂರಿ ಗಳ ಮನಸೆಳೆದದ್ದು ಸಂತೋಷದ ಸಂಗತಿ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಲಿ, […]
Day: September 24, 2025
ಬಾಸ್ಕೆಟ್ಬಾಲ್ : ಕಾರ್ಕಳ ಜ್ಞಾನಸುಧಾದ ಭುವನ್ ರಾಜ್ಯ ತಂಡಮಟ್ಟಕ್ಕೆ
ಕಾರ್ಕಳ( ಸೆ.23) : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಭುವನ್ ಎಸ್ ನಾಯಕ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಬಿ.ಬಿ. ಹೆಗ್ಡೆ ಕಾಲೇಜು: ತ್ರಾಸಿ ಬೀಚ್ ಕ್ಲೀನಿಂಗ್
ಕುಂದಾಪುರ (ಸೆ.20): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ತ್ರಾಸಿ ಗ್ರಾಮ ಪಂಚಾಯತ್, ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ಗಂಗೊಳ್ಳಿ ಹಾಗೂ ಸಿಬ್ಬಂದಿ ವರ್ಗ, ಸ್ವಚ್ಛ ಕರಾವಳಿ ಮಿಷನ್ ಸದಸ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಗಂಗೊಳ್ಳಿ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಖಾರ್ವಿ ಆನ್ಲೈನ್ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯ ಹಾಗೂ ಸ್ವಚ್ಛತಾ ಹೀ […]
ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮ : ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಹಿರಿಮೆಯ ಪಶ್ಚಿಮ ಬಂಗಾಳದ ಶ್ರೀ ಬಾಬರ್ ಅಲಿ ಭಾಗಿ
ಕಾರ್ಕಳ ( ಸೆ. 24): ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ಶಿಕ್ಷಣವೇ ಎಲ್ಲಾ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಶ್ರೀ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ, ತಾನು ಬೆಳೆದು ಬಂದ ಹಾದಿಯ ರೋಚಕತೆಯನ್ನು ವಿವರಿಸಿ ಇತರರಿಗೂ ಸ್ಫೂರ್ತಿಯಾದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಶ್ರದ್ದೆಯಿಂದ […]
ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಅಗತ್ಯ – ವಸಂತ್ ರಾಮ್ ಆಚಾರ್ಯ
ಕುಂದಾಪುರ (ಸೆ.20): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಪೊಲೀಸ್ ಠಾಣೆ, ಗಂಗೊಳ್ಳಿಗೆ ಭೇಟಿ ನೀಡಿ ಅಲ್ಲಿ ನಡೆದ ವಿವಿಧ ಆಯುಧಗಳ ಪ್ರಾಯೋಗಿಕ ಪ್ರದರ್ಶನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕರಾವಳಿ ಕಾವಲುಪಡೆಯ ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ರಾಮ್ ಆಚಾರ್ಯ ಅವರು ಪೋಕ್ಸೋ ಕಾಯಿದೆ, ಡ್ರಗ್ಸ್ ನಿಯಂತ್ರಣ ಹಾಗೂ ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳು […]
ಜಂಪ್ ರೋಪಿಂಗ್ ಸ್ಪರ್ಧೆ:ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರಿಯೇಟಿವ್ ನ ವಿದ್ಯಾರ್ಥಿಗಳು
ಕಾರ್ಕಳ( ಸೆ.24): ಜಿಲ್ಲಾಮಟ್ಟದ ಜಂಪ್ ಹಗ್ಗ ಪಂದ್ಯಾವಳಿಯು ಬಾರಕೂರಿನ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ನಡೆಯಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ ಜಯಗಳಿಸಿದ್ದಾರೆ. ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿ ಸಿ ಎಂ ಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ […]
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ -ಜನತಾ ಪಿಯು ಕಾಲೇಜಿನ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ( ಸೆ .24): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.










