ಕುಂದಾಪುರ (ಅಕ್ಟೋಬರ್ 11): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ವಿಧಿಕ್ತ 2025’ ಕಾನೂನಿನ ಅರಿವು ಮೂಡಿಸುವ ಮೂಟ್ಕೋರ್ಟ್ ಅಂತರ್-ತರಗತಿ ಸ್ಪರ್ಧೆಯು ಸಂಪನ್ನಗೊಂಡಿತು. ನಾವು ಎಲ್ಲರೂ ಭಾರತ ದೇಶದ ನಾಗರಿಕರು. ನಮ್ಮ ದೇಶದಲ್ಲಿ ಪ್ರತಿ ನಾಗರಿಕನಿಗೂ ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳು ಇವೆ. ಈ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳುವುದೇ ಕಾನೂನಿನ ಅರಿವು ಎಂದು ಸಾರ್ವಜನಿಕ ಅಭಿಯೋಜಕರಾದ ಶ್ರೀ ರಾಜು […]
Day: October 15, 2025
ಬಿ. ಬಿ. ಹೆಗ್ಡೆ ಕಾಲೇಜು : ವಾಣಿಜ್ಯ ವಿಭಾಗದ ವತಿಯಿಂದ ಪ್ರಾಂಶುಪಾಲರಿಗೆ ಸನ್ಮಾನ
ಕುಂದಾಪುರ (ಅಕ್ಟೋಬರ್ 11): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅವರಿಗೆ ‘ವಿಧಿಕ್ತ-2025’ ಅಂತರ್-ತರಗತಿ ಮೂಟ್ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ನೈತಿಕತೆ ಮತ್ತು ಶ್ರಮದ ಮೂಲಕ ಯಶಸ್ಸು ಸಾಧಿಸಬೇಕು ಎಂದು ಪ್ರೇರಣದಾಯಕ ಮಾತುಗಳನ್ನಾಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀ […]
ಡಾ. ಬಿ. ಬಿ . ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕುಂದಾಪುರ( ಆ ,15): ಇಲ್ಲಿನ ಸುವರ್ಣ ಸಂಭ್ರಮದಲ್ಲಿರುವ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯೋಗೀಶ್ ಶ್ಯಾನುಭೋಗ್ ಕಾವ್ರಾಡಿ, ಕಾರ್ಯದರ್ಶಿಯಾಗಿ ದೀಪಾ ಪೂಜಾರಿ, ಕೋಶಾಧಿಕಾರಿಯಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಜೋಸ್ಲಿನ್ ಆರ್. ಅಲ್ಮೇಡಾ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾವತಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಗೀತಾ, ಕ್ರೀಡಾ ಕಾರ್ಯದರ್ಶಿಯಾಗಿ ದರ್ಶನ್ ಹಾಗೂ ಕಾರ್ಯಕಾರಿ […]
ಅಕ್ಟೋಬರ್ 19 ರಂದು ದೇವಲ್ಕುಂದ ಯಕ್ಷ ಹಬ್ಬ
ಹೆಮ್ಮಾಡಿ ( ಆ ,15): ಕಲೆ ಶ್ರೀಮಂತವಾದುದ್ದು ಆದರೆ ಬಹುತೇಕ ಕಲಾವಿದರ ಜೀವನ ಶ್ರೀಮಂತವಾಗಿರುವುದಿಲ್ಲ. ಹಲವಾರು ಕಷ್ಟ ಕಾರ್ಪಣ್ಯಗಳಿಂದ ತುಂಬಿದರು ರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುವುದನ್ನು ಕಡಿಮೆ ಮಾಡುವುದಿಲ್ಲ. ಇಂತಹ ಒಬ್ಬ ಯುವ ಯಕ್ಷಗಾನ ಕಲಾವಿದ ನಾಗರಾಜ ಪೂಜಾರಿ ದೇವಲ್ಕುಂದ. ಇವರು ಕಳೆದ ಹತ್ತು ವರ್ಷಗಳಿಂದ ಹಟ್ಟಿಯಂಗಡಿ,ಪೇರ್ಡೂರು,ಕಳೆದ ನಾಲ್ಕು ವರ್ಷಗಳಿಂದ ಶ್ರೀ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಾಜ ಪೂಜಾರಿಯವರು ತಮ್ಮ ವಾಸದ ಮನೆಯು ಶಿಥಿಲವಾಗಿರುವುದರಿಂದ ಹೊಸ ಗೃಹ ನಿರ್ಮಾಣ ಸಹಾಯಾರ್ಥ […]










