ಕುಂದಾಪುರ (ಜನವರಿ 3): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನ ಸಂಘದ ಆಶ್ರಯದಲ್ಲಿ ವಯೋನಿವೃತ್ತಿ ಹೊಂದಿದ ಕಾಲೇಜಿನ ಕಚೇರಿ ಅಧೀಕ್ಷಕರಾದ ಕೆ. ಗಾಯತ್ರಿ ಶೇಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ಕೆ. ಗಾಯತ್ರಿ ಶೇಟ್ ಅವರು ನಮ್ಮ ಸಂಸ್ಥೆ ಆರಂಭಗೊಂಡ ದಿನದಿಂದಲೇ ಕಚೇರಿ ಸಿಬ್ಬಂದಿಯಾಗಿ ಸೇರ್ಪಡೆಗೊಂಡು ಬೇರೆ-ಬೇರೆ ಹುದ್ದೆಗಳನ್ನು ನಿಭಾಯಿಸಿ, ಕಚೇರಿ […]
Tag: bbhc
ಬಿ. ಬಿ. ಹೆಗ್ಡೆ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಡಿ.30): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ಗೀತೆ (ಗುಂಪು ವಿಭಾಗ) ಸ್ಪರ್ಧೆಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಶೃದ್ಧಾ ಆರ್ .ಸಾಧನೆ
ಕುಂದಾಪುರ ಡಿ.30: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ‘ಘೋಷಣೆ’ ಸ್ಪರ್ಧೆಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಕಾಲೇಜಿನ ವಿದ್ಯಾರ್ಥಿನಿ ಶೃದ್ಧಾ ಆರ್., ಅಂತಿಮ ಬಿಬಿಎ ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಶ್ರೀ ಬಿ.ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನದ ಸಂಭ್ರಮಾಚರಣೆ
ಕುಂದಾಪುರ (ಡಿ.24) : ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮದಿನದ ಸಲುವಾಗಿ ಡಾ| ಬಸ್ರೂರು ಭುಜಂಗ ಹೆಗ್ಡೆ (ಬಿ.ಬಿ.ಹೆಗ್ಡೆ) ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಿ. ಬಿ. ಹೆಗ್ಡೆ ಕಾಲೇಜು : ಅಕ್ಷರ-ಅಕ್ಕರೆಯ ಹೊನಲು–ವಿಶೇಷ ಉಪನ್ಯಾಸ
ಕುಂದಾಪುರ (ಡಿ.03): ನಮ್ಮ ದೇಶಕ್ಕೆ ಇಂದು ಅಗತ್ಯವಿರುವುದು ಬರಿಯ ವಿದ್ಯಾವಂತರಲ್ಲ, ಪ್ರಾಮಾಣಿಕರು, ಸತ್ಯವಂತರು, ಸಚ್ಚಾರಿತ್ರ್ಯವುಳ್ಳವರ ಅಗತ್ಯವಿದೆ. ಇದು ಶಿಕ್ಷಣದಿಂದ ಸಾಧ್ಯವಾದಾಗ ಮಾತ್ರ ಶಿಕ್ಷಣ ನಿಜವಾದ ಅರ್ಥವಂತಿಕೆಯಿಂದ ಇರಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಬಸವ ಕುಮಾರ ಪಾಟೀಲ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಹಾಗೂ ಕುಂದಗನ್ನಡ ಸಂಘ ಆಯೋಜಿಸಿದ ‘ಅಕ್ಷರ-ಅಕ್ಕರೆಯ ಹೊನಲು’ ವಿಶೇಷ ಉಪನ್ಯಾಸ […]
ಬಿ. ಬಿ. ಹೆಗ್ಡೆ ಕಾಲೇಜು: ಸಿಬ್ಬಂದಿಗಳ ವಾರ್ಷಿಕ ಸಭೆ
ಕುಂದಾಪುರ (ಡಿ.09): ಸಂಸ್ಥೆಯ ಬೆಳವಣಿಗೆಗೆ ವಿದ್ಯಾರ್ಥಿಗಳಷ್ಟೇ ಸಿಬ್ಬಂದಿ ವರ್ಗದವರೂ ಮುಖ್ಯ. ಸಿಬ್ಬಂದಿ ಸಂಘದ ಮುಖೇನ ನಾವೆಲ್ಲರೂ ಸಮಾನ ಮನಸ್ಕರಾಗಿ ದುಡಿದಾಗ ಸಂಸ್ಥೆಯ ಯಶಸ್ಸು ಸಾಧ್ಯ ಎಂದು ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ವಾರ್ಷಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸಿಬ್ಬಂದಿ ಸಂಘದ ಕಾರ್ಯದರ್ಶಿ, ಕಾರ್ಯಕ್ರಮದ ಸಂಯೋಜಕ ಶ್ರೀ ಮಹೇಶ್ […]
ಬಿ.ಬಿ. ಹೆಗ್ಡೆ ಕಾಲೇಜು : ರಕ್ಷಕ – ಶಿಕ್ಷಕರ ಸಭೆ
ಕುಂದಾಪುರ (ನ.30): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ರಕ್ಷಕ-ಶಿಕ್ಷಕ ಸಭೆ ನಡೆಯಿತು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ ಮತ್ತು ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಉಲ್ಲೇಖನೀಯ. ಇದರಲ್ಲಿ ತಮ್ಮೆಲ್ಲರ ಸಹಕಾರ ಮಹತ್ವದ್ದು, ಕಾಲೇಜಿನ ಶೈಕ್ಷಣಿಕ ವಾತಾವರಣದಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಬೆಳೆಯುವುದರ ಜೊತೆU,ೆ ಮನೆಯಲ್ಲಿ ಹೆತ್ತವರ-ಪೋಷಕರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ […]
ಬಿ. ಬಿ. ಹೆಗ್ಡೆ ಕಾಲೇಜು : ‘ಫಿಟ್ನೆಸ್ ಚಾಲೆಂಜ್–2024’
ಕುಂದಾಪುರ (ನ.23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಹಿಂದಿ ಸಂಘದ ವತಿಯಿಂದ ಕುಂದಾಪುರದ ಲಯನ್ಸ್ ಕ್ಲಬ್ ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರ ಇವರ ಸಹಯೋಗದೊಂದಿಗೆ ‘ಫಿಟ್ನೆಸ್ ಚಾಲೆಂಜ್–2024’ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾದ ಲಯನ್ ರಾಜೀವ್ ಕೋಟ್ಯಾನ್, II ವಿ.ಡಿ.ಜಿ. ಅವರು ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯದ ಮಹತ್ವದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ […]
ಹಕ್ಕುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ. ಪ್ರೊ. ಕೆ. ಉಮೇಶ್ ಶೆಟ್ಟಿ
ಕುಂದಾಪುರ (ನ. 26): ಸಂವಿಧಾನ ದೇಶದ ಸರ್ವಶ್ರೇಷ್ಟ ಕಾನೂನಾಗಿದ್ದು ಇಡೀ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುವ ಸಮುದಾಯ ಸಂವಿಧಾನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಕ್ಕುಗಳನ್ನು ಋಣಾತ್ಮಕವಾಗಿ ಬಳಸಿಕೊಳ್ಳದೆ ಧನಾತ್ಮಕವಾಗಿ ಬಳಸಿಕೊಂಡು ಸತ್ಪ್ರಜೆಗಳಾಗಬೇಕು ಒಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ರೋವರ್ಸ & ರೇಂಜರ್ಸ್ ಘಟಕಗಳ ಆಶ್ರಯದಲ್ಲಿ ನವೆಂಬರ್ 26 ರಂದು ನಡೆದ ಸಂವಿಧಾನ […]
CSEET ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜು ಉತ್ಕೃಷ್ಟ ಸಾಧನೆ
ಕುಂದಾಪುರ (ನ.20): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ 2024ರ ನವೆಂಬರ್ನಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ ಕೌಶಿಕ್, ಅಕ್ಷೋಭ್ಯ, ಶಾಶ್ವತ್, ಸಿದ್ದಾರ್ಥ, ಸುಷ್ಮಾ, ವರ್ಷಾ, ದರ್ಶನ್, ಮೈತ್ರೆಯಿ ಹಾಗೂ ಕೀರ್ತನಾ ಇವರು ಸಿ.ಎಸ್. ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ […]










