ಕುಂದಾಪುರ (ನ.23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಹಿಂದಿ ಸಂಘದ ವತಿಯಿಂದ ಕುಂದಾಪುರದ ಲಯನ್ಸ್ ಕ್ಲಬ್ ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರ ಇವರ ಸಹಯೋಗದೊಂದಿಗೆ ‘ಫಿಟ್ನೆಸ್ ಚಾಲೆಂಜ್–2024’ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾದ ಲಯನ್ ರಾಜೀವ್ ಕೋಟ್ಯಾನ್, II ವಿ.ಡಿ.ಜಿ. ಅವರು ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯದ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ ಕ್ಲಬ್ ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರದ ಅಧ್ಯಕ್ಷರಾದ ಶ್ರೀ ವಿಜಯ್ ಭಂಡಾರಿ, ವೆಯ್ಟ್ ಝೋನ್ ಜಿಮ್ ಫಿಟ್ನೆಸ್ ಕೇಂದ್ರದ ಮಾಲೀಕರಾದ ಶ್ರೀ ರಾಘು ವಿಠಲವಾಡಿ, ಕುಂದಾಪುರದ ಕಿಯೋನಿಕ್ಸ್ ಯುವ ಕಾಂ.ನ ಉಪ-ಪ್ರಾಂಶುಪಾಲರಾದ ಶ್ರೀಮತಿ ಅಂಬಿಕಾ ಧೀರಜ್, ಕಾಲೇಜಿನ ಲೆಫ್ಟಿನೆಂಟ್ ಹರೀಶ್ ಬಿ., ಎನ್.ಸಿ.ಸಿ. ಕೇರ್ ಟೇಕರ್ ಶ್ರೀ ಶರತ್ ಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಡಾ| ದೀಪಾ, ಶ್ರೀಮತಿ ರೇವತಿ ಡಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಸ್ತು ನಿಕಾಯಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯದ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ದ್ವಿತೀಯ ಬಿಬಿಎ ವಿದ್ಯಾರ್ಥಿಗಳಾದ ಸುಹಾಸ್ ವಿ. ಮಲ್ಯ ಪ್ರಾರ್ಥಿಸಿ, ಸಹನಾ ಸ್ವಾಗತಿಸಿ, ಸಿಂಚನಾ ವಂದಿಸಿ, ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು.