ಕುಂದಾಪುರ: (ಡಿ,04) : ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಘಟಕ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಎಚ್.ಐ.ವಿ. ಮತ್ತು ಏಡ್ಸ್ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀ ಮಹಾಬಲೇಶ್ ಅವರು ಎಚ್.ಐ.ವಿ. ಮತ್ತು ಏಡ್ಸ್ ಹರಡುವ ಬಗೆ, ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸೆಯ […]
Tag: bbhc
ಕೌಶಲ್ಯಗಳೊಂದಿಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ : ಚೇತನ್ ಶೆಟ್ಟಿ ಕೋವಾಡಿ
ಕುಂದಾಪುರ (ನ,30): ವಿದ್ಯಾರ್ಥಿ ದೆಸೆಯಲ್ಲಿಯೇ ಮಾನವೀಯ ಮೌಲ್ಯ, ಆತ್ಮವಿಮರ್ಶೆ, ಆತ್ಮವಿಶ್ವಾಸ, ಸಮಯಪ್ರಜ್ಞೆ ,ಪುಸ್ತಕ ಪ್ರೀತಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಗತ ಬದುಕಿನೊಂದಿಗೆ ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯ. ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ, ಸಮಾಜದ ಕಡೆ ಗಮನಕೊಡಬೇಕು. ವಿದ್ಯಾರ್ಥಿಗಳು ಕೌಶಲ್ಯಗಳನ್ನು ವರ್ದಿಸಿಕೊಳ್ಳುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ ಎಂದು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಹೇಳಿದರು. ಅವರು […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ: ಡಿ.05 ರಂದು ಅoತರ್ ಕಾಲೇಜು ಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಕುಂದಾಪುರ (ನ,29): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಅಶ್ರಯದಲ್ಲಿ ಪುರುಷರ ಅಂತರ್ ಕಾಲೇಜು ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಡಿಸೆಂಬರ್ 05 ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಕೊಡಗು ವ್ಯಾಪ್ತಿಯ ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ನೆತ್ತರ ನೆರವು ಅಭಿಯಾನದ ಉದ್ಘಾಟನಾ ಸಮಾರಂಭ
ಕುಂದಾಪುರ(ನ,26) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ನೆತ್ತರ ನೆರವು ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 23 ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಇಂಡಿಯನ್ ರೆಡ್ಕ್ರಾಸ್ ಘಟಕದ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದ ವರ್ಗೀಕರಣ ಮಹತ್ವವನ್ನು ಮತ್ತು ರಕ್ತದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಯುವ ರೆಡ್ಕ್ರಾಸ್ […]
ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ: ಪ್ರೊ.ಕೆ.ಉಮೇಶ್ ಶೆಟ್ಟಿ
ಕುಂದಾಪುರ (ನ,26): ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ನಾವು ಸಿಕ್ಕ ಅವಕಾಶವನ್ನು ಎಂದಿಗೂ ಬಿಡದೆ ಸದುಪಯೋಗಪಡಿಸಿಕೊಳ್ಳ ಬೇಕು.ಇದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಯಶಸ್ಸನ್ನು ಸಾಧಿಸಬಹುವುದು ಎಂದು ಡಾ|ಬಿ.ಬಿ .ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಕೆ ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರವೀಣಾ ಪೂಜಾರಿ ವಂದಿಸಿ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಸಂವಿಧಾನ ದಿನಾಚರಣೆ ಹಾಗೂ ಯುವ ಮತದಾರರ ಸೇರ್ಪಡೆ ಅಭಿಯಾನ
ಕುಂದಾಪುರ (ನ,26): ದೇಶದ ಮೂಲಭೂತ ಕಾನೂನಾದ ಸಂವಿಧಾನವನ್ನು ಶಾಸನಬದ್ಧವಾಗಿ ಸಮರ್ಪಿಸಿಕೊಂಡ ನವಂಬರ್ 26ನೇ ದಿನವನ್ನು ದೇಶದಾದ್ಯಂತ ಸಂವಿಧಾನ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯು ತಿಳಿದುಕೊಳ್ಳಬೇಕು ಎಂದು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ್ ಮೊಗವೀರ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನಲ್ಲಿ ಎನ್ .ಎಸ್ . ಎಸ್ ಘಟಕ ಹಾಗೂ ಚುನಾವಣಾ ಸಾಕ್ಷಾರತ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ […]
ಡಾ | ಬಿ. ಬಿ. ಹೆಗ್ಡೆ ಕಾಲೇಜು: ಇoಗ್ಲೀಷ್ ಭಾಷಾ ಕಾರ್ಯಾಗಾರ
ಕುಂದಾಪುರ (ನ,24) : ಎಲ್ಲಾ ಭಾಷೆಗಳನ್ನು ಗೌರವಿಸುವುದರೊಂದಿಗೆ ಆ ಭಾಷೆಯ ಅನನ್ಯತೆಯನ್ನು ಅರ್ಥೈಸಿಕೊಳ್ಳಬೇಕು,. ಏಕೆಂದರೆ ಭಾಷೆಯ ಮೂಲಕ ಅಲ್ಲಿನ ಪ್ರಾದೇಶಿಕ ಭಿನ್ನತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ನಡೆದ ‘ಇಂಗ್ಲೀಷ್ ಆಸ್ ಎ ಸೆಕೆಂಡ್ ಲಾಂಗ್ವೇಜ್’ ಎಂಬ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ: ಕುಂದಗನ್ನಡ ಸಂಘ ಉದ್ಘಾಟನೆ
ಕುಂದಾಪುರ (ನ,24) : ಕುಂದಗನ್ನಡ ಭಾಷೆಯು ತನ್ನದೇ ಆದ ಸಂಸ್ಕೃತಿ ಯನ್ನು ಒಳಗೊಂಡಿದೆ. ನಮ್ಮ ತಾಯಿ ನುಡಿಯಾದ ಈ ಭಾಷೆಯು ತಾಯಿಯಷ್ಟೇ ಪ್ರಾಮುಖ್ಯವಾದುದು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಗನ್ನಡ ಅಧ್ಯಯನ ಪೀಠದ ಸ್ಥಾಪನೆಯ ಈ ಸುಸಂದರ್ಭದಲ್ಲಿ ಮೊಟ್ಟ ಮೊದಲಬಾರಿಗೆ ಪದವಿ ಕಾಲೇಜೊಂದರಲ್ಲಿ ‘ಕುಂದಗನ್ನಡ ಸಂಘ’ವನ್ನು ಹುಟ್ಟುಹಾಕಿರುವುದು ಶ್ಲಾಘನೀಯ ಎಂದು ಕಾರ್ಕಳದ ವಿದ್ಯಾವರ್ಧಕ ಸಂಘ ಪ್ರೌಢಶಾಲೆಯ ಶಿಕ್ಷಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ನ,18): ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವಗುಣ, ಸಮಯಪ್ರಜ್ಞೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಎನ್.ಎಸ್.ಎಸ್. ಉತ್ತಮ ವೇದಿಕೆ. ಈ ವೇದಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯುವುದರ ಜೊತೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ| ರಾಧಾಕೃಷ್ಣ ಶೆಟ್ಟಿ ಹೇಳಿದರು. ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕಗಳ ಉದ್ಘಾಟನೆ
ಕುಂದಾಪುರ ( ನ,18): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ವಾರ್ಷಿಕ ಚಟುಟಿಕೆಗಳ ಉದ್ಘಾಟನೆ ನವೆಂಬರ್ 17 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಇಂಡಿಯನ್ ರೆಡ್ಕ್ರಾಸ್ ಘಟಕದ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ರೆಡ್ಕ್ರಾಸ್ ಕಾರ್ಯವೈಖರಿಯಲ್ಲಿ ಸ್ವಯಂ ಸೇವಕರ ಪಾತ್ರ ಹಾಗೂ ಇಂದಿನ ಯುವ ಪೀಳಿಗೆ ಹೇಗೆ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. […]