ಕುಂದಾಪುರ (ಅ.02): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ & ರೇಂಜರ್ಸ್ , ಯುವ ರೆಡ್ಕ್ರಾಸ್ ಘಟಕ ಹಾಗೂ ರೋರ್ಯಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅಕ್ಟೋಬರ್ 02ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕಾಲೇಜಿನ ರೋರ್ಯಾಕ್ಟ್ ಕ್ಲಬ್ನ ಸಂಯೋಜಕರಾದ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಲಕ್ಷ್ಮೀಕಾಂತ್ ತೃತೀಯ ಬಿ.ಎಸ್ಸಿ., ಪ್ರಿಯಾಂಕ ತೃತೀಯ ಬಿ.ಕಾಂ. (ಬಿ), ಕೀರ್ತನಾ ತೃತೀಯ ಬಿಸಿಎ, ಶೃದ್ಧಾ ದ್ವಿತೀಯ ಬಿಬಿಎ, ಪವಿತ್ರಾ ಪೈ ದ್ವಿತೀಯ ಬಿ.ಕಾಂ. (ಬಿ), ಸಮೃದ್ಧಿ ಕಿಣಿ ದ್ವಿತೀಯ ಬಿ.ಕಾಂ. (ಬಿ), ಆಕಾಶ್ ದ್ವಿತೀಯ ಬಿಸಿಎ (ಎ), ಪ್ರೀತಮ್ ದ್ವಿತೀಯ ಬಿ.ಕಾಂ. (ಎ), ನಾಗರತ್ನ ಪ್ರಥಮ ಬಿ.ಕಾಂ. (ಎ), ಸುಪ್ರಜ್ ಪ್ರಥಮ ಬಿ.ಕಾಂ. (ಬಿ) ಗಾಂಧೀಜಿ ಮತ್ತು ಶಾಸ್ತ್ರೀಜಿಯ ಕುರಿತಾದ ಉಪನ್ಯಾಸ ನೀಡಿದರು.