ಕುಂದಾಪುರ (ಜುಲೈ 19): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜುಲೈ13 ರಂದು ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Pharmit ವತಿಯಿಂದ ಕಾಲೇಜಿನಲ್ಲಿ ಪ್ರಿ ಪ್ಲೇಸ್ಮೆಂಟ್ ತರಬೇತಿ ನೆರವೇರಿತು. Pharmit ಸಂಸ್ಥೆಯ ಡೈರೆಕ್ಟರ್ರಾದ ಶ್ರೀ ಸಂದೀಪ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, ಶ್ರೀ ರಜತ್ […]
Tag: bbhc
ಸಾಹಿತ್ಯದ ಅರಿವಿನಿಂದ ಬದುಕಿನ ದರ್ಶನ : ಡಾ| ರವಿರಾಜ್ ಶೆಟ್ಟಿ
ಕುಂದಾಪುರ (ಜುಲೈ 17): ಸಾಹಿತ್ಯದ ಓದು ಅರಿವಾಗಿ ಅದು ಬೆಳಕಾದಾಗ ಮಾತ್ರ ಓದಿಗೆ ಬೆಲೆ. ಅದರೊಂದಿಗೆ ಬದುಕಿನ ವಾಸ್ತವವನ್ನು ಅರ್ಥೈಸಿಕೊಂಡು ನಮ್ಮ ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡುವ ಅರಿವು ಸಾಹಿತ್ಯದಿಂದ ಮೂಡಿದಾಗ ಬದುಕಿನ ಚಿರಂತನ ದರ್ಶನ ಸಾಧ್ಯ ಎಂದು ಡಾ| ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಕನ್ನಡ ಪ್ರಾಧ್ಯಾಪಕ ಡಾ| ರವಿರಾಜ್ ಶೆಟ್ಟಿ ಹೇಳಿದರು. ಇವರು ಇಲ್ಲಿನ ಡಾ| […]
ಡಾI ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣೆ
ಕುಂದಾಪುರ (ಜು, 18) : ಡಾ|ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಸೌಕೂರು ಸೇರ್ವೆಗಾರ್ ಮನೆತನದ ವಿಶಾಲಾಕ್ಷಿ ಬಿ.ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಜುಲೈ .18 ರಂದು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಕೆ .ಉಮೇಶ್ ಶೆಟ್ಟಿ ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ರವೀನಾ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಜುಲೈ 17 ):ಡಾ| ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಜುಲೈ 17 ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಅಂಚೆ ಇಲಾಖೆ ಸಿಬ್ಬಂದಿ ಅಂಪಾರಿನ ರತ್ನಾಕರ ಕಿಣಿ (ಆರ್ ಕೆ.) ಯವರು ಕುಂದಗನ್ನಡ ಅಜ್ಜಿಕತೆ, ಭತ್ತಕುಟ್ಟುವ ಹಾಡು ಹಾಗೂ ಸ್ವರಚಿತ ಕುಂದಾಪ್ರ ಕನ್ನಡ ಹಾಡೊಂದನ್ನು ವಾಚಿಸಿದರು. ಇದೇ ಸಂದರ್ಭ ಕುಂದಾಪ್ರ ಭಾಷೆಯ ಅನನ್ಯತೆ ಮತ್ತು ಸಾಂಸ್ಕçತಿಕ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಬೀಳ್ಕೊಡುಗೆ ಸಮಾರಂಭ
ಕುಂದಾಪುರ (ಜುಲೈ 10): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಜು. 10ರಂದು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಶಿಸ್ತು ಮತ್ತು ಪ್ರಾಮಾಣಿಕತೆ ಭವಿಷ್ಯದ ಜೀವನಕ್ಕೆ ದಾರಿ ದೀಪವಾಗಲಿ, ಕಾಲೇಜಿನಲ್ಲಿ ಪಡೆದ ಸಂಸ್ಕಾರ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು. […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಸಿ.ಎ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ (ಜುಲೈ 10): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿ.ಎ. ಫೌಂಡೇಶನ್ ಹಾಗೂ ಇಂಟರ್ ಮೀಡಿಯೇಟ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಜುಲೈ 10ರಂದು ಸನ್ಮಾನಿಸಲಾಯಿತು.ಮೇ 2023ರಲ್ಲಿ ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯ ಗ್ರೂಪ್ ಎರಡರಲ್ಲಿ ತೇರ್ಗಡೆ ಹೊಂದಿದ ಶ್ರಾವ್ಯ, ರೋಹನ್, ಚೇತನಾ, ಮಂದಾರ ಮತ್ತು ಗ್ರೂಪ್ ಒಂದರಲ್ಲಿ ತೇರ್ಗಡೆ ಹೊಂದಿದ ನಾದಶ್ರೀ, ರಂಜನ್, ಶಾಂಭವಿ, ಅನುಷಾ ಹಾಗೂ ಡಿಸೆಂಬರ್ 2022ರಲ್ಲಿ ನಡೆದ ಸಿ.ಎ. […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಮೆಗಾ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವ್
ಕುಂದಾಪುರ (ಜುಲೈ 06): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರದಲ್ಲಿ ಆಯೋಜಿಸಿದ್ದ ಮೆಗಾ ಪ್ಲೇಸ್ಮೆಂಟ್ ಡೈವ್ ಯಶಸ್ವಿಯಾಗಿ ನಡೆಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಅಂತಿಮ ಪದವಿ ತರಗತಿಯ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಗುರಿ ನಮ್ಮ ಸಂಸ್ಥೆಯದ್ದಾಗಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಟೈಮ್ ಫಾರ್ ನೇಚರ್ – ರಸಪ್ರಶ್ನೆ ಸ್ಪರ್ಧೆ
ಕುಂದಾಪುರ (ಜುಲೈ 04): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ‘ಟೈಮ್ ಫಾರ್ ನೇಚರ್’ ಎನ್ನುವ ಶೀರ್ಷಿಕೆಯಡಿಯಲ್ಲಿ ಅಂತರ್ ತರಗತಿ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಜುಲೈ 04 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಬಗ್ಗೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಅಂತರ್ ತರಗತಿ ರಸಪ್ರಶ್ನೆ ಸ್ಪರ್ಧೆಯಲ್ಲಿ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಔಟ್ರೀಚ್ ಕಾರ್ಯಕ್ರಮ
ಕುಂದಾಪುರ( ಜು.09): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಹಾಗೂ ಯುವ ರೆಡ್ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಾನಸ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆ ಕೋಣಿಯಲ್ಲಿ ಔಟ್ರೀಚ್ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಎರಡು ಸಂಘದ ವಿದ್ಯಾರ್ಥಿಗಳು ಸೇರಿ ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತು, ಅವರಿಗೆ ಬೇಕಾದ ಉಪಯುಕ್ತ ವಸ್ತುವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕ್ಲಬ್ನ ಸಂಯೋಜಕರಾದ ಶ್ರೀ ಸತೀಶ್ ಕಾಂಚನ್ ಮತ್ತು ಶ್ರೀಮತಿ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ನಮ್ಮ ಭೂಮಿ ಸಂಸ್ಥೆಗೆ ಭೇಟಿ
ಕುಂದಾಪುರ (ಜುಲೈ 05): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಜುಲೈ 5 ರಂದು ತಲ್ಲೂರು ಸಮೀಪದ ನಮ್ಮ ಭೂಮಿ ಸಂಸ್ಥೆಗೆ ವಿಸ್ತರಣಾ ಚಟುವಟಿಕೆ ಹಿನ್ನೆಲೆಯಲ್ಲಿ ಭೇಟಿ ನೀಡಲಾಯಿತು. ನಮ್ಮ ಭೂಮಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀ ಶಿವಾನಂದ ಶೆಟ್ಟಿ ಯವರು ಸಂಸ್ಥೆಯ ಹಿನ್ನಲೆ ಮತ್ತು ಸಂಸ್ಥೆಯ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ದ್ವಿತೀಯ ಬಿಬಿಎ ವಿದ್ಯಾರ್ಥಿಗಳು ನಮ್ಮ ಭೂಮಿ ಸಂಸ್ಥೆಯ […]










