ಕುಂದಾಪುರ (ಜು,4): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿ ಗಳಿಂದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮವನ್ನು ಜೂನ್ 26ರಂದು ಕೊಳ್ಕೆಬೈಲ್ ಸೂರಪ್ಪ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಹಕ್ಲಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಹಕ್ಲಾಡಿ ಪ್ರೌಢಶಾಲೆಯ ವಿದ್ಯರ್ಥಿಗಳ ಸಹಯೋಗದೊಂದಿಗೆ ಅನೇಕ ಪಠ್ಯೇತರ ಕರ್ಯ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ […]
Tag: bbhc
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ: ಲಲಿತ ಕಲಾ ಸಂಘದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಜು,3): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಲಲಿತ ಕಲಾಸಂಘದ ವತಿಯಿಂದ ವಿಸ್ತರಣಾ ಚಟುವಟಿಕೆಯನ್ನು ಅಂಪಾರು ಮೂಡುಬಗೆ ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಕಲೆಯ ಮಹತ್ವವನ್ನು ತಿಳಿಸುವ ಸಲುವಾಗಿ ಲಲಿತಾ ಕಲಾಸಂಘದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಜಾನಪದ ನೃತ್ಯ ಹಾಗೂ ಅರೆ ಶಾಸ್ತ್ರೀಯ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಬಿ ಸಿ ಎ ವಿಭಾಗದಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಜು ,02): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗಳಿಂದ ವಿಸ್ತರಣಾ ಚಟುವಟಿಕೆಯನ್ನು ನಿವೇದಿತಾ ಪ್ರೌಢಶಾಲೆ ಬಸ್ರೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣಕಯಂತ್ರ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪ್ಯೂಟರ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಮತ್ತು ಕಂಪ್ಯೂರ ನ ಅಗತ್ಯತೆ ಮತ್ತು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಪ್ರಿ ಪ್ಲೇಸ್ಮೆಂಟ್ ಟಾಕ್
ಕುಂದಾಪುರ (ಜೂನ್ 17): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Smart Sight Innovations ವತಿಯಿಂದ ಕಾಲೇಜಿನಲ್ಲಿ ಪ್ರಿ ಪ್ಲೇಸ್ಮೆಂಟ್ ಟಾಕ್ ನೆರವೇರಿತು. Smart Sight Innovations ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಆಚಾರ್ಯ, ಶ್ರೀ ಶ್ರೀವತ್ಸ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ […]
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ವಿಶೇಷ ಉಪನ್ಯಾಸ
ಕುಂದಾಪುರ(ಜೂ,29): ದೇಶದಾದ್ಯಂತ ಡ್ರಗ್ಸ್, ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ ನಿರ್ಣಾಯಕವಾದುದು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳಿನಲ್ಲಿ ಬದಲಾವಣೆ ತಂದು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಧಾಕರ್ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಕ್ಯಾಂಪಸ್ ನೇಮಕಾತಿ ಡ್ರೈವ್
ಕುಂದಾಪುರ (ಜೂನ್ 26): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜೂ.26 ರಂದು ಅಂತಿಮ ವರ್ಷದ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Cognitive Solutions ಕಂಪೆನಿ ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನಡೆಯಿತು. Cognitive Solutions ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಸಾಗರ್ ಆಳ್ವ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ […]
ಡಾIಬಿ.ಬಿ ಹೆಗ್ಡೆ ಕಾಲೇಜ್ ನಲ್ಲಿ ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ವತಿಯಿಂದ ಫಿಟ್ನೆಸ್ ಚಾಲೆಂಜ್ ಕಾರ್ಯಕ್ರಮ
ಕುಂದಾಪುರ(ಜೂ,26): ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ಕುಂದಾಪುರ ಇವರ ವತಿಯಿಂದ ಕುಂದಾಪುರದ ಪ್ರತಿಷ್ಟಿತ ಡಾ.ಬಿ. ಬಿ ಹೆಗ್ಡೆ ಕಾಲೇಜ್ ನಲ್ಲಿ ಫಿಟ್ನೆಸ್ ಟಾಸ್ಕ್ ಚಾಲೆಂಜ್ ಕಾರ್ಯಕ್ರಮ ನಡೆಯಿತು.ವೆಯಿಟ್ ಝೋನ್ ಇದರ ಮಾಲಕರಾದ ರಾಘವೇಂದ್ರ ವಿಠಲವಾಡಿಯವರು ವಿದ್ಯಾರ್ಥಿಗಳಿಗೆ ಫಿಟ್ನೆಸ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಮಾಹಿತಿಯ ಜೊತೆಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು . ವೆಯಿಟ್ ಝೋನ್ ನ ಗೌರವ ಅಧ್ಯಕ್ಷ ರಾದ ಡಾIಉಮೇಶ್ ಪುತ್ರನ್, ಕಾಲೇಜಿನ ಉಪ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಸಿ.ಎಮ್.ಎ. – ಯು.ಎಸ್. ಪ್ರೋಗ್ರಾಂ ಮತ್ತು ಸ್ಕಾಲರ್ಶಿಪ್ ಕಾರ್ಯಾಗಾರ
ಕುಂದಾಪುರ,(ಜೂನ್ 20): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವತಿಯಿಂದ ನಡೆದ ಸಿ.ಎಮ್.ಎ. – ಯು.ಎಸ್. ಪ್ರೋಗ್ರಾಂ ಮತ್ತು ಸ್ಕಾಲರ್ಶಿಪ್ನ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಫ್ಟ್ ಸ್ಕಿಲ್ ತರಬೇತುದಾರರು ಮತ್ತು ‘ಕೋಕೋ ಕಾರ್ಟ್’ನ ಕೋ-ಫೌಂಡರ್ ಆಗಿರುವ ಶ್ರೀ ಸಚಿನ್ ಕುಮಾರ್ ಮತ್ತು ‘ಸಾಯಿ ವಿಶಿಷ್ಠ’ ಅಕಾಡೆಮಿಯ ಸಂಸ್ಥಾಪಕರು ಮತ್ತು ನಿರ್ದೇಶಕರು ಆಗಿರುವ ಶ್ರೀ […]
ಡಾ| ಬಿ.ಬಿ. ಹೆಗ್ಡೆ ಕಾಲೇಜು: ಡಿಮ್ಯಾಟ್ ಅಕೌಂಟ್ ಓಪನಿಂಗ್ ಡ್ರೈವ್
ಕುಂದಾಪುರ,(ಜೂನ್ 17): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಸ್ಟಾಕ್ ಮಾರ್ಕೆಟ್ ಆಪರೇಷನ್ಸ್ ಸರ್ಟಿಫಿಕೇಟ್ ಕೋರ್ಸ್ ಸಂಯುಕ್ತ ಆಶ್ರಯದಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಕಾರ್ಯಗಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿ ಗಳಿಗೆ ಶಿಕ್ಷಣದ ಜೊತೆಗೆ ಹೂಡಿಕೆಯ ಅರಿವು ಮತ್ತು ಅದರ ಮಹತ್ವ ಅತ್ಯವಶ್ಯಕ ಎಂದು ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ […]
ಕುಂದಾಪುರದ ಮೂಲದ ವೈದ್ಯ ಡಾ| ಅಸೋಡು ಅನಂತರಾಮ ಶೆಟ್ಟಿ ಕೆಂಟ್ ನ ಲಾರ್ಡ್ ಲೆಫ್ಟಿನೆಂಟ್ ಆಗಿ ಆಯ್ಕೆ
ಕುಂದಾಪುರ (ಜೂ,15): ಕುಂದಾಪುರ ಮೂಲದ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ| ಅಸೋಡು ಅನಂತರಾಮ ಶೆಟ್ಟಿಯವರನ್ನು ಇಂಗ್ಲೆಂಡಿನ 3 ನೇ ಕಿಂಗ್ ಚಾರ್ಲ್ಸ್ ರವರು ಕೆಂಟ್ನ ಲಾರ್ಡ್ ಲೆಫ್ಟಿನೆಂಟ್ (ಗವರ್ನರ್) ಆಗಿ ನೇಮಕ ಮಾಡಿರುತ್ತಾರೆ. ಇದು ಗೌರವಾನ್ವಿತ ಮತ್ತು ಸಾಂವಿಧಾನಿಕ ಹುದ್ದೆಯಾಗಿದ್ದು, 3 ಸ್ಟಾರ್ ಜನರಲ್ ಶ್ರೇಣಿಯಾಗಿದೆ ಮತ್ತು ಭಾರತದಿಂದ ಆಯ್ಕೆಯಾದ ಎಕೈಕ ವ್ಯಕ್ತಿ ಇವರಾಗಿದ್ದಾರೆ.ಈ ಹಿಂದೆ ಡಾ ಎ.ಎ ಶೆಟ್ಟಿಯವರು ವೈದ್ಯಕೀಯ ಕ್ಷೇತ್ರದ ಉತ್ಕೃಷ್ಟ ಮನ್ನಣೆಯಾದ ಸರ್ಜಿಕಲ್ ನೋಬೆಲ್ ಪ್ರಶಸ್ತಿಯನ್ನು […]










