ಮಲ್ಪೆ (ಸೆ,11): ಕೆಪಿಸಿಸಿ ವತಿಯಿಂದ ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರಾದ ಮಲ್ಪೆಯ ಮೀನುಗಾರರ ತುರ್ತು ಆರೋಗ್ಯ ಸೇವೆಗೆ ಆಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು .ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮಲ್ಪೆಗೆ ಹಿಂದೊಮ್ಮೆ ಆಗಮಿಸಿದಾಗ ಮೀನುಗಾರ ಸಮುದಾಯದವರು ಆಂಬ್ಯುಲೆನ್ಸ್ನ ಬೇಡಿಕೆ ಇಟ್ಟಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಭವನದ ಮುಂಭಾಗ ಆಂಬುಲೆನ್ಸ್ ನ ಕೀಯನ್ನು ಮಲ್ಪೆಯ ಸಮಾಜ ಸೇವಕ […]
Tag: eshwar malpe
ಆಪತ್ಭಾಂಧವ ಈಶ್ವರ್ ಮಲ್ಪೆ ಕುಟುಂಬಕ್ಕೆ ಸಹ್ರದಯಿ ಯುವಕರಿಂದ ಸಹಾಯ ಧನ ಹಸ್ತಾಂತರ
ಮಲ್ಪೆ (ಸೆ,12): ತನ್ನ ಕೌಟುಂಬಿಕ ಸವಾಲುಗಳ ನಡುವೆಯೂ ಇನ್ನೊಬ್ಬರ ಸಹಾಯಕ್ಕೆ ಸದಾ ಸಿದ್ದರಾಗುವ, ಜೊತೆಗೆ ಅದೆಷ್ಟೋ ಜನರಿಗೆ ಆಪತ್ ಕಾಲದಲ್ಲಿ ಸಹಾಯಹಸ್ತ ಚಾಚಿರುವ ಈಶ್ವರ ಮಲ್ಪೆಯವರ ಕೌಟುಂಬಿಕ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಉಡುಪಿಯ ಸಹೃದಯಿ ಯುವಕರಾದ ಸ್ಯಾನ್ಫೋರ್ಡ್ ಡಿ’ಸೋಜಾ,ಸತ್ಯ ಆಚಾರ್ಯ,ನವೀನ್ ಸಾಲಿಯಾನ್,ಮಿಥುನ್ ಪೂಜಾರಿಯವರ ತಂಡ ಈಶ್ವರ್ ಮಲ್ಪೆ ಯವರ ಮನೆಗೆ ಭೇಟಿ ನೀಡಿ ಇವರ 2 ವಿಕಲ ಚೇತನ ಮಕ್ಕಳ ಚಿಕಿತ್ಸೆಗಾಗಿ 25000 ರೂ, ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಯುವಕರ ತಂಡದ ಸಹಾಯಕ್ಕೆ […]
ಕುಂದವಾಹಿನಿಗೆ ಧನ್ಯವಾದ ಸಲ್ಲಿಸಿದ ಸಾಹಸಿ – ಆಪತ್ಭಾಂಧವ ಈಶ್ವರ್ ಮಲ್ಪೆ
ನನ್ನೆಲ್ಲಾ ಅಭಿಮಾನಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ನಾನಾಯ್ತು, ನನ್ನ ಸಮಾಜ ಸೇವೆ ಕಾರ್ಯ ಆಯ್ತು ಎಂದು ಎಲೆಮರೆಯ ಕಾಯಿಯಂತಿದ್ದ ನನ್ನನ್ನು ಇಂದು ನೀವು ಗುರುತಿಸಿ, ಸನ್ಮಾನಿಸಿ ಪ್ರೀತಿಯಿಂದ ಗೌರವಿಸುತ್ತಿರುವುದು ನನ್ನ ಸಮಾಜಸೇವಾ ಕಾರ್ಯದ ಜವಾಬ್ದಾರಿ ಇನ್ನೂ ಹೆಚ್ಚಿಸಿದಂತೆ ಭಾಸವಾಗುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ನನ್ನ ಸಮಾಜ ಸೇವಾ ಕಾರ್ಯದ ಕುರಿತು ಸಂದರ್ಶನ, ಲೇಖನಗಳು ಬಿತ್ತರಗೊಂಡಿದೆ. ಆದರೆ ನನ್ನ ಈ ಸಮಾಜ ಸೇವಾ ಕಾರ್ಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುತುವರ್ಜಿವಹಿಸಿದ ಪ್ರಮುಖ ವ್ಯಕ್ತಿ […]
ಮಗುವಿನ್ನು ಉಳಿಸಿಕೊಳ್ಳಲು ಆಗಲಿಲ್ಲ ,ಆದರೆ ಹೆತ್ತವರ ಈ ಮಾನವೀಯ ನೆಲೆಯ ಕಾರ್ಯ ನಿಜಕ್ಕೂ ಪ್ರಶಂಸನೀಯ
ಮಲ್ಪೆ (ಆ,19): ಉಡುಪಿ ಜಿಲ್ಲೆಯ ಬೆಳ್ಮಣ್ಣು ಗ್ರಾಮದ ಸಂದೀಪ ದೇವಾಡಿಗ ಹಾಗೂ ರಂಜಿತಾ ಸಂದೀಪ್ ದಂಪತಿಯ ಪುಟ್ಟ ಕಂದಮ್ಮ ಮಾಸ್ಟರ್ ಮಿಥಾಂಶ್ ನನ್ನು ಉಳಿಸಿಕೊಳ್ಳೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಈ ಮಗುವಿನ ಚಿಕಿತ್ಸಾ ವೆಚ್ಚ ಬರೊಬ್ಬರಿ 16 ಕೋಟಿ ರೂಪಾಯಿ ಅಗತ್ಯವಿತ್ತು. ಅಷ್ಟು ಹಣ ಹೊಂದಿಸಲು ಹೆತ್ತವರು ಸಾರ್ವಜನಿಕರಲ್ಲಿ ಸಹಾಯ ಕೋರಿದ್ದರು. ಆದರೆ 16 ಕೋಟಿ ಸಂಗ್ರಹ ಆಗಲಿಲ್ಲ. ಕೇವಲ 48 ಲಕ್ಷ ರೂಪಾಯಿ ಮಾತ್ರ ಸಾರ್ವಜನಿಕರಿಂದ […]
ಮಲ್ಪೆ : ಬೋಟ್ ದುರಂತ ತಪ್ಪಿಸಿದ ಈಶ್ವರ್ ಮಲ್ಪೆ ತಂಡ
ಮಲ್ಪೆ (ಆ, 14) : ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸೈಂಟ್ ಮೇರಿಸ್ ಐಲ್ಯಾಂಡ್ ಕಲ್ಲಿನ ಬಳಿ ಬೋಟ್ ಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿದ್ದುದ್ದನ್ನು ಗಮನಿಸಿದ ಗಾಳ ಹಾಕುವವರು ಫೋನ್ ಕರೆಯ ಮುಖಾಂತರ ಆಪತ್ಭಾಂಧವ ಈಶ್ವರ್ ಮಲ್ಪೆರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಈಶ್ವರ್ ಮಲ್ಪೆ ಮತ್ತು ಜಮೀರ್ ಕಲ್ಮಾಡಿ ಸಮುದ್ರದಲ್ಲಿನ ಕಲ್ಲಿನ ಬಳಿ ತೆರಳಿ ಸಮುದ್ರ ಪಾಲಾಗುತ್ತಿದ್ದ ಎರಡು ಬೋಟುಗಳನ್ನು […]
ಹೋಟೆಲ್ ಉದ್ಯಮಿ ಆತ್ಮಹತ್ಯೆಗೆ ಯತ್ನ : ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ಬಳಗದಿಂದ ರಕ್ಷಣೆ
ಉಡುಪಿ (ಆ, 6) : ಆರ್ಥಿಕ ನಷ್ಟದಿಂದ ಮನನೊಂದು ಗುರುವಾರ ತಡರಾತ್ರಿ ಕುರ್ಕಾಲುನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕೃಷ್ಣ ಭಟ್ ರವರನ್ನು ಆಪದ್ಬಾಂಧವ ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ಬಳಗದವರು ರಕ್ಷಿಸಿದ್ದಾರೆ. ಉಡುಪಿ ರಥಬೀದಿಯ ಹೋಟೆಲೊಂದರ ಮಾಲೀಕರಾಗಿದ್ದ ಕುಕ್ಕಿಕಟ್ಟೆಯ ಬಾಲಕೃಷ್ಣ ಭಟ್ ಕೋವಿಡ್ ಹಿನ್ನೆಲೆಯಲ್ಲಿ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಆರ್ಥಿಕ ನಷ್ಟದ ಕಾರಣದಿಂದ ಮನನೊಂದು ಕುರ್ಕಾಲು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸುದ್ದಿ “ಆಪದ್ಬಾಂಧವ” ಈಶ್ವರ್ ಮಲ್ಪೆ ತಂಡಕ್ಕೆ ತಿಳಿದ […]