ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ […]
Tag: eshwara navunda
ನಾ ನಿನಗೆ ಮತ್ತೆ ನೆನಪಾದರೆ….?
ನಾ ನಿನಗೆ ಮತ್ತೆ ನೆನಪಾದರೆ….? ನಿನ್ನೊಳಗೆ ನಾ ಕಳೆದು ಹೋದೆಕಾಣೆಯಾದವರ ಪಟ್ಟಿಯಲ್ಲಿಮರೆಯದೆ ಸೇರಿಸಿಕೋ ನನ್ನನ್ನು ಯಾರಾದರೂ ನಿನ್ನಲ್ಲಿ ವಿಳಾಸ ಹುಡುಕುವಳು ಬಂದರೆ ಕೊಟ್ಟುಬಿಡು ನನ್ನ ಕೇರಾಫ್ ಅಡ್ರೆಸ್ವಿರಸ ಮರೆತು ನನ್ನ ಹೃದಯಕೊಂದು ಸ್ವತಂತ್ರ ಕೊಟ್ಟುಬಿಡು ಪಾಪ ಬದುಕಲಿ ಬಿಡು, ಬಡ ಜೀವಮನಸು ಮಲ್ಲಿಗೆ ….ಗೊತ್ತಾಯಿತು ಬಿಡು!ನೀ ಯಾರದೋ ಸುಖದ ಅಮಲಿನಲ್ಲಿ ತೇಲಾಡುವ ಮಾದಕ ಪರಿಮಳದ ಕೆಂಡ ಸಂಪಿಗೆ ಮತ್ತೆ ನೆನಪಾದರೆ ಕೊಟ್ಟು ಬಿಡು ಒಂದು ತಪ್ಪಿದ ಕರೆಯಾದರು…ಬಂದು ಬಿಡುವೆ ನಿನ್ನ […]
ಕನಸುಗಳು ಮಾರಾಟವಾಗಿದೆ…!
ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
ಬದುಕು ಮತ್ತು ಕಲೆ ಎರಡನ್ನು ಸಮಾನವಾಗಿ ಪ್ರೀತಿಸುವ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ
ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು. ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ […]
ದಾನದಲ್ಲಿ ಕರ್ಣ, ಆದರ್ಶದಲ್ಲಿ ರಾಮ, ಕಾರ್ಮಿಕರ ಅನ್ನದಾತ ಶ್ರೀ ಗೋವಿಂದ ಬಾಬು ಪೂಜಾರಿ
ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ. ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು […]
ಎಲ್ಲಿರುವೆ ಮನವ ಕಾಡುವ ರೂಪಸಿಯೇ
ದೂರ ಇದ್ದರೂ, ಹತ್ತಿರವೇ ಇದ್ದಂತೆಅನಿಸುತಿದೆ ಮನದೊಳಗೆ…ನೀ ಮನದೊಳಗೆ…. ನೀ ಮರೆಯಲಿ…ಎಲ್ಲೋ ನಿಂತು ನೋಡುತ್ತಿರುವಂತೆಎಲ್ಲಿರುವೆ ನೀನು …..? ಮನದ ಮೂಲೆಯಲಿಎಲ್ಲೋ ಸುಪ್ತವಾಗಿ ಕುಳಿತ ಸವಿ ನೆನಪುಗಳುಗೂಡು ಕಟ್ಟಿ ಹಾರಲು ಕಾಯುತಿದೆಎಲ್ಲಿರುವೆ ನೀನು …..? ಬಯಕೆಗಳ ಭಾಗ್ಯವಿಧಾತೆಬಾಳಿನ ಪ್ರೇಮದೇವತೆಯೇನನ್ನ ಕನಸುಗಳ ಕನಸುಗಾರ್ತಿಯೇಎಲ್ಲಿರುವೆ ನೀನು……..? ನೆನಪಾಗಿ ಕಾಡುವ ಭಾವನಾಮನಸಿನ ಕದ ತಟ್ಟುವ ಕವನಮನದೊಳಗೆ ನೆನಪುಗಳ ಕದನಎಲ್ಲಿರುವೆ ನೀನು, ….? ರೂಪಸಿಯೇ …ಕನಸುಗಾರ್ತಿಯೇಕವನದ ಒಡತಿಯೇಕಾಮನೆಯು ಹೆಪ್ಪುಗಟ್ಟಿಲು ಕಾಯುತಿದೆ ನಿನಗಾಗಿಎಲ್ಲಿರುವೆ ನೀನು….? ಮನವ ಕಾಡುವ ರೂಪಸಿಯೇ……ಎಲ್ಲಿರುವೆ ನೀನು….? […]
ಪ್ರಾಸ – ತ್ರಾಸಗಳ ಮಧ್ಯೆ
ಎಳೆಯೊಂದು ಸಿಕ್ಕಿತುಬರೆಯುವ ತವಕದಲಿದ್ದೆಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ ಎಳೆ ಕಳೆದು ಹೋಗುವುದರಲ್ಲಿತ್ತುಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು ! ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತುನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು . ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ […]
ಗೌರವ – ಧನ
ಮೌನ ಮನೆ ಮಾಡಿದೆ. ಹೊರಗೆ ಮೊದಲ ಮುಂಗಾರು ಮಳೆ. ಸಿಡಿಲು, ಗುಡುಗಿನ ಜೊತೆಗೆ ಅ ನಿಮಿತ್ತ ಕೆ.ಇ.ಬಿ. ಯವ ಕರೆಂಟ್ ಬೇರೆ ತೆಗೆದಿದ್ದ. ಮಾತಿಲ್ಲ ಕತೆಯಿಲ್ಲ, ಮಳೆ ಆರ್ಭಟ ಬಿಟ್ಟು ಮಳೆಯನ್ನೇ ನೋಡುತ್ತಾ ಕುಳಿತ ನನಗೆ ಮಧ್ಯಾಹ್ನ ವಿಕಾಸ್ ಹೇಳಿದ ಮಾತು ತಲೆಯಲ್ಲಿ ಕೊರೆಯುತ್ತಾ ಇತ್ತು. ವಿಕಾಸ್ ಯಾರು ಅಂತ ನಿಮಗೆ ಹೇಳಲಿಲ್ಲ! ವಿಕಾಸ್ ಬೆಂಗಳೂರನಲ್ಲಿ ಪರಿಚಯವಾದ ನಟನೆಯಲ್ಲಿ ಆಸಕ್ತಿ ಇರುವ ಹುಡುಗ. ಸಮಾನ ಅಭಿರುಚಿ ಇರುವುದರಿಂದ ಬೇಗನೆ ಗೆಳೆತನವಾಯಿತು. […]
ಬಾ ಮಳೆಯೇ…, ಬಾ…
ಬಾ ಮಳೆಯೇ…, ಬಾಭಾನು ಅಳುತಿದೆಕತ್ತಲಗೂಡಿನೊಳಗೆಕರಿಮೋಡಗಳ ತಿಕ್ಕಾಟಕೆ ಸಿಕ್ಕಿಕಣ್ಣೀರ ಧಾರೆಗಳು ಮಳೆಯಾಗಿ ಭೂಮಿಗೆ ಸೇರುವ ತವಕದಲಿಗಗನದಲಿ ಮಳೆ ಮೋಡಗಳ ಕದನಭೂಮಿಗೆ ಮಳೆಯ ತಂಪಾದ ನರ್ತನಯಾರಿಗೋ ನೋವಿನ ಅನುಭವ ಇನ್ನೂ ಯಾರಿಗೋ ಸುಖದ ತಾಂಡವಹಾಗಂತ ನೀ ಸುರಿಯದಿರ ಬೇಡನೀ ಚೆಲ್ಲಿದ ಹನಿಯ ಅಮೃತಧಾರೆಗಳುಕಾದ ಭೂಮಿಗೆ ಅದು ಪ್ರೀತಿ ಸಿಂಚನ ನಿರಂತರ ನಿನ್ನ ಪ್ರೇಮ ಹನಿ ಸುರಿಸುತ್ತಿರುಭೂಮಿಯ ಒಡಲು ಒಣಗಿದೆ ನಿನ್ನ ನಿರೀಕ್ಷೆಯಲಿ ಸಾಕು ಪರೀಕ್ಷೆ ಸುರಿಸಿ ಬೀಡು ಇಳೆಗೆ ಮಳೆಯಾಗಿನಿನಗೆ ನೋವು ಆದರೂ […]
ಕರಿನೆರಳು
ಇಂದು-ನಾಳೆ ಹೇಗೋಹಾಗೆ ದಿನ, ವಾರ, ತಿಂಗಳುಗಳುವರ್ಷಗಳು ಉರುಳುತ್ತಿವೆ ಗೊತ್ತೇ ಆಗದೆಬದುಕು ಸಹಜ ಅ ಸಹಜಗಳ ಇಂದು, ನಾಳೆಗಳ ಮಧ್ಯೆಈಗ ಎಲ್ಲಾ ಭರವಸೆಗಳ ಮೇಲೆ ಕಟ್ಟಿದ ಬದುಕುಗಾಜಿನ ಮನೆಯಂತಾಗಿದೆಕಾಯುತ್ತಿದ್ದೇವೆ ನಾವುಗಳು ಸರತಿಸಾಲಿನಲ್ಲಿ ಇಂದು, ನಾಳೆಯೂ ಮುಂದೆ ಏನೇನೊ ಎಂದುಮುಂದೆ ಹೋಗುವವರಿಗೆ ದಾರಿ ಮಾಡಿ ಕೊಡುತ್ತಾ ಕಂಡು ಕಾಣದ ಎಂದೂ ಮರೆಯದ ಈ ಹೆಮ್ಮಾರಿ ಕಾಯಿಲೆಗೆ ಶರಣಾಗಿಕೆಲವರ ಜೀವ ಪಂಚ ಭೂತಗಳಲ್ಲಿ ಲೀನವಾಗಿದೆಹೇಳದೆ ಕೇಳದೆ ಕನಸು ಮಾರಿ ಹೊರಟು ಬಿಟ್ಟಿದ್ದಾರೆ ಹೊಸ ಲೋಕ […]










