ಕುಂದಾಪುರ( ಜ .15): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೇಷನ್ ಹಾಲ್ ನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆಯ 4ನೇ ವಿಭಾಗದಲ್ಲಿ ಕುಂದಾಪುರದ ಛಾಯಾ ವಿ . ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಂದಾಪುರದ ಎಚ್ಎ.ಮ್ .ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇವರು ಕುಂದಾಪುರದ ಪ್ರಸಿದ್ದ ಛಾಯಾ ಚಿತ್ರ ಗ್ರಾಹಕ ವಿಶ್ವನಾಥ ಮುನ್ನಾ ಹಾಗೂ ರಜನಿ ದಂಪತಿಯ ಪುತ್ರಿ.
Tag: general news
ಶ್ರೀ ದುರ್ಗಾಂಬಿಕೆ ದೇವಸ್ಥಾನ ಕೆಳಾ ಹೇರೂರು: ಜ .16 ರಂದು ವರ್ಷಾವಧಿ ಜಾತ್ರಾ ಮಹೋತ್ಸವ
ಬೈಂದೂರು(ಜ.14): ಬೈಂದೂರು ತಾಲೂಕಿನ ಹೇರೂರು ಗ್ರಾಮದ ಕೆಳಾಹೇರೂರಿನ ಶ್ರೀ ದುರ್ಗಾಂಬಿಕೆ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜನವರಿ 16 ನೇ ಗುರುವಾರದಂದು ಜರುಗಲಿದೆ. ಭಕ್ತಾದಿಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀದೇವರ ಸನ್ನಿಧಾನದಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ, ಮಧ್ಯಾಹ್ನದ ಮಹಾ ಅನ್ನಸಂತರ್ಪಣೆಯ ಮಹಾಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇಗುಲದ ಮೊಕ್ತೇಸರರಾದ ಶ್ರೀ ಮಹಾಬಲ ಶೆಟ್ಟಿ ಗರಡಿ ಮನೆ ಹಾಗೂ ಗರಡಿಮನೆ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆ: ಶಾಶ್ವತ್ ಉತ್ತಮ ಸಾಧನೆ
ಕುಂದಾಪುರ( ಜ .13): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವಿಟ್ ಲಿಮಿಟೆಡ್ ಕಂಪನಿ ಜನವರಿ 12 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ 20 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಶಾಶ್ವತ್ ತೃತೀಯ ಸ್ಥಾನ ಪಡೆದಿದ್ದಾನೆ. ಬೈಂದೂರು ಸಮೀಪದ ನಾಗೂರಿನ ಸಂದೀಪನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾದ ಈತ ಶ್ರೀಮತಿ ವನಿತಾ ಮತ್ತು ಶ್ರೀ ಚಂದ್ರ ಪೂಜಾರಿ ದಂಪತಿಯ ಪುತ್ರ. ಇತನ ಸಾಧನೆಗೆ ಕಂಬದಕೋಣೆಯ ವಿದ್ಯಾಲಕ್ಷ್ಮೀ ಟ್ಯೂಷನ್ […]
ಗುಜ್ಜಾಡಿ : ನಾಗಮಂಡಲೋತ್ಸವದ ಸುವರ್ಣ ಮಹೋತ್ಸವ- ಮುಹೂರ್ತ, ದರ್ಶನ ಸೇವೆ
ಕುಂದಾಪುರ( ಜ.10): ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಮಾರ್ಚ್ 30 ಹಾಗೂ 31 ರಂದು ನಾಗ ಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ನಡೆಯಲಿರುವ ಜೀರ್ಣಾಷ್ಟಬಂಧ ಪುರಸ್ಸರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗ ಮಂಡಲೋತ್ಸವ ಪೂರ್ವಭಾವಿಯಾಗಿ ಮುಹೂರ್ತ, ದರ್ಶನ ಸೇವೆ ಜನವರಿ 08 ರಂದು ಜರುಗಿತು. ಮಾರ್ಚ್ 30 ಹಾಗೂ 31 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ಈ […]
ಬೈಂದೂರು : ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೈರಾ ಸಾಧನೆ
ಬೈಂದೂರು(ಜ. 07): ಬೈಂದೂರಿನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2025 ನಲ್ಲಿ ಅಮೈರಾ ರವರು ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಈಕೆ ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಹಾಗೂ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ […]
ಬೈಂದೂರು ಚಂದ್ರಶೇಖರ ನಾವಡರ ‘ ಕಂಟೋನ್ಮೆಂಟ್ ಕಥೆಗಳು’ ಲೋಕಾರ್ಪಣೆ
ನಾಗೂರು( ಜ.6): ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರಿಂದಾಗಿ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಭಾರತೀಯ ಸೇನೆ ಯುವಕರಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸುವ ಭರಪೂರ ಪ್ರಯತ್ನ ಮಾಡುತ್ತದೆ.ಅಂತಹ ಅತ್ಯುತ್ತಮ ತರಬೇತಿ ವ್ಯವಸ್ಥೆ ನಮ್ಮ ಸೇನೆಯಲ್ಲಿದೆ. ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆದ ಲೇಖಕ, ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕರ ನಿತ್ಯ ಬದುಕಿನ […]
ಬ್ರಹ್ಮಾವರ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ : ಸಂಭ್ರಮದ ಹೊಸ ವರ್ಷ ಆಚರಣೆ
ಬ್ರಹ್ಮಾವರ(ಜ,06): ಸಂಸ್ಕೃತಿ, ಆಚರಣೆಯ ಕುರಿತು ಅಭಿಮಾನವನ್ನು ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಲಾಯಿತು. ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಆಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಆರಂಭಿಸಿ ಎಲ್ಲರ ಜೀವನದಲ್ಲೂ ಹೊಸತನ, ಹೊಸ ಹುಮ್ಮಸ್ಸು ತುಂಬಲಿ ಎಂದು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದರು ,ಹಾಗೂ ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಡಾ ಸೀಮಾ.ಜಿ ಭಟ್, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ , ಸಾಂಸ್ಕೃತಿಕ […]
ಬೈಂದೂರು : ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅರ್ನೋನ್ ಡಿ.ಅಲ್ಮೆಡ ಸಾಧನೆ
ಬೈಂದೂರು(ಜ. 07): ಬೈಂದೂರಿನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ -2025 ನಲ್ಲಿ ಅರ್ನೋನ್ ಡಿ ಅಲ್ಮೆಡ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಈತ ಎಚ್ ಎಮ್ ಎಮ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದು ,ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ […]
ಕಲ್ ತೋಡ್ಮಿ ಮನೆ ಕುಟುಂಬದವರ ಮೂಲ ನಾಗಬನದ ಚತುಃಪವಿತ್ರ ನಾಗಮಂಡಲೋತ್ಸವ ಸಂಪನ್ನ
ಕುಂದಾಪುರ(ಡಿ.31): ತಾಲೂಕು ಅಂಪಾರು ಗ್ರಾಮದ ಬಲಾಡಿ ಕಲ್ ತೋಡ್ಮಿ ಮನೆಯ ಕುಟುಂಬದವರ ಮೂಲ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ಡಿಸೆಂಬರ್ 26 ರಂದು ವಿಜೃಂಭಣೆಯಿಂದ ನಡೆಯಿತು. ಶ್ರೀ ದೇವರಿಗೆ ಬೆಳಿಗ್ಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಸಮಾರಾಧನೆ, ಕೃಚ್ಚಾಚರಣೆ, ಮಹಾಸಂಕಲ್ಪ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ್ತ ಅಯುತ ಸಂಖ್ಯಾತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ತತ್ವ ಕಲಶ ಸ್ಥಾಪನೆ, ತತ್ವಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, […]
ಸೋಮಶೇಖರ್ ಖಾರ್ವಿಯವರಿಗೆ ಬೆಸ್ಟ್ ಪೋಸರ್ ಪ್ರಶಸ್ತಿ
ಕುಂದಾಪುರ (ಅ. 15): ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸೋಮಶೇಖರ್ ಖಾರ್ವಿ ಕಂಚುಗೋಡುರವರು ಬೆಸ್ಟ್ ಪೊಸರ್ ಪ್ರಶಸ್ತಿ ಪಡೆದಿದ್ದಾರೆ. ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸೋಮಶೇಖರ ಖಾರ್ವಿ ಯವರು ಮಿಸ್ಟರ್ ಇಂಡಿಯಾ ಆಗುವ ಕನಸನ್ನು ಹೊಂದಿದ್ದಾರೆ.










