ಕುಂದಾಪುರ (ಆ,15:) ದೇಶದ ಅಭಿವೃದ್ಧಿ ಕೇವಲ ಒಬ್ಬ ಪ್ರಧಾನಿ ಅಥವಾ ಸೇನೆಯಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಜೆ ಹಾಗೂ ವಿದ್ಯಾರ್ಥಿಗಳು ದೇಶದ ಪ್ರಗತಿಯ ಕಡೆಗೆ ಚಿಂತನೆ ಮಾಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲರಾದ ಶ್ರೀ ಮಂಜುನಾಥ್ ಹೇಳಿದರು. ಅವರು ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣಗೈದು ಮಾತನಾಡಿದರು. ಇನೋರ್ವ ಮುಖ್ಯ […]
Tag: hmm vkr
ಚೆಸ್ ಸ್ಪರ್ಧೆ : ಎಚ್. ಎಮ್. ಎಮ್. & ವಿ. ಕೆ. ಆರ್. ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ಕುಂದಾಪುರ (ಆ .05) : ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಚ್. ಎಮ್. ಎಮ್. ಆಂಗ್ಲ ಪ್ರಾಥಮಿಕ ಶಾಲೆಯ 7ನೇ ತರಗತಿಯ ಶ್ರೀಲತಾ, ವಿ.ಕೆ.ಆರ್. ಪ್ರೌಢ ಶಾಲೆಯ […]
ಕುಂದಾಪುರ : ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ:ಟೀಚರ್ ಟ್ರೈನಿಂಗ್ ವಿಭಾಗದ ಉದ್ಘಾಟನಾ ಸಮಾರಂಭ
ಕುಂದಾಪುರ(ಜು,24): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಹಾಗೂ ವಿ.ಕೆ.ಆರ್ ಶಾಲೆಗಳಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಟೀಚರ್ ಟ್ರೈನಿಂಗ್ ವಿಭಾಗದ ಉದ್ಘಾಟನೆ ಜುಲೈ 22 ರಂದು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಚಿಂತನಾ ರಾಜೇಶ್ ರವರ ಮಾರ್ಗದರ್ಶನದಲ್ಲಿ ನೆರವೇರಿತು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ. ಜಿ ಭಟ್ ರವರು ಮುಖ್ಯ ಅತಿಥಿಗಳಾಗಿ ಶಿಕ್ಷಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡುವ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆ : ಕೃಷಿ ಭೂಮಿಯಲ್ಲಿ ಒಂದು ದಿನ
ಕುಂದಾಪುರ (ಜು15): ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಟ್ಟಿ ಮಾಡಿದ ಮಕ್ಕಳ ಆಸಕ್ತಿ ಮತ್ತು ಉತ್ಸಾಹ ನಮಗೆ ಸಂತಸವನ್ನು ನೀಡಿದೆ ಎಂದು ಕುಂದಾಪುರದ ಕೃಷಿಕರಾದ ಕೋಟ್ಯಾನ್ ಮನೆಯವರು ಹೇಳಿದರು. ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳಲ್ಲಿ ನೋಡುತ್ತ ತಿಳಿ ಮಾಡುತ್ತ ಕಲಿ ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ನಮ್ಮ ನಡೆ ಕೃಷಿ ಭೂಮಿ ಕಡೆ ಎನ್ನುವ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಕುರಿತು ಅವರು […]
ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ : ವಿದ್ಯಾರ್ಥಿನಿ ಅನ್ವಿತಾ ಎನ್.ಸಿ.ಸಿ. ಗ್ರೂಪಿಂಗ್ ಫೈಯರ್ನಲ್ಲಿ ಪ್ರಥಮ ಸ್ಥಾನ
ಕುಂದಾಪುರ( ಜು,02): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ಎನ್ಸಿಸಿ ಕೆಡೆಟ್ ಅನ್ವಿತಾ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಟಿಎಸ್ಸಿ-2 ಕ್ಯಾಂಪ್ನ ಗ್ರೂಪಿಂಗ್ ಫೈಯರ್ನಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ಉಡುಪಿ ಜಿಲ್ಲೆಯ ಏಕಮಾತ್ರ ಜೂನಿಯರ್ ಕೆಡೆಟ್ ಆಗಿದ್ದಾರೆ. ಇವರು ಬಳ್ಕೂರಿನ ಅಮಿತ್ ಕುಮಾರ್ ಮತ್ತು ಶರಾವತಿ ದಂಪತಿಯ ಪುತ್ರಿ.
ವಿ. ಕೆ. ಅರ್ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ: ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ
ಕುಂದಾಪುರ (ಜು,28): ವಿದ್ಯಾರ್ಥಿಗಳ ಸಾಧನೆಯು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಛಲವು ಸಾಧನೆಯ ಶಿಖರವನ್ನೇರಿಸಿದೆ. ಮುಂದೆಯೂ ಕೂಡ ಹೆಚ್ಚು ಹೆಚ್ಚು ಸಾಧಿಸುವ ಸಾಧಕರು ನೀವಾಗಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.)ಯ ಸಂಚಾಲಕರು, ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು ಮಾತನಾಡಿದರು. ಅವರು ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಸಂಸ್ಥೆಗಳು 2024-25ನೇ ಸಾಲಿನಲ್ಲಿ ಆಯೋಜಿಸಿದ ಮೊದಲ ಶಿಕ್ಷಕ […]
ಕುಂದಾಪುರದ ಎಚ್. ಎಮ್. ಎಮ್ ಶಾಲೆಯಲ್ಲಿ ಟೀಚರ್ ಟ್ರೈನಿಂಗ್ ವಿಭಾಗ ಆರಂಭ
ಕುಂದಾಪುರ (ಜು .22) : ಇಲ್ಲಿನ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀಚರ್ ಎಜ್ಯುಕೇಶನ್ ವಿಭಾಗವನ್ನು ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಪ್ರೈಮರಿ ಟೀಚರ್ ಟ್ರೈನಿಂಗ್, ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್, ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್, ಕಮ್ಯುನಿಕೇಶನ್ ಸ್ಕಿಲ್ಸ್ ಅಂಡ್ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಕೌನ್ಸ್ ಲಿಂಗ್ & ಗೈಡೆನ್ಸ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯವಿದೆ. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ […]
ಎಚ್.ಎಂ.ಎಂ & ವಿ.ಕೆ.ಆರ್ ಶಾಲೆ ಕುಂದಾಪುರ: ಪರಿಸರ ದಿನಾಚಣೆ
ಕುಂದಾಪುರ(ಜು,7): ಇಲ್ಲಿನ ಎಚ್. ಎಂ. ಎಂ ಮತ್ತು ವಿ. ಕೆ. ಆರ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳು ಪರಿಸರ ದಿನಾಚಣೆಯನ್ನು ಜೂನ್ 05 ರಂದು ಆಚರಿಸಿದರು. ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಹಾಗು ಜನರಿಗೆ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ರವರ ಮಾರ್ಗದರ್ಶನದಲ್ಲಿ ಸ್ಕೌಟ್ ಮಾಸ್ಟರ್ ವೀರೇಂದ್ರ ನಾಯಕ್ ಗೈಡ್ಸ್ ಕ್ಯಾಪ್ಟನ್ ರೇಖಾ […]
ವಿ.ಕೆ.ಆರ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ
ಕುಂದಾಪುರ(ಮೇ,10): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಅಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಎಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಹಾಜರಾದ 106 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ಮತ್ತು 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎo. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಭೋಧಕ […]
ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಗಳಲ್ಲಿ ಮಕ್ಕಳ ಸಂತೆ
ಕುಂದಾಪುರ (ಎ. 14) : ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ವ್ಯವಹಾರ ಜ್ಞಾನ ಅತಿ ಮುಖ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕಾದರೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಮಾತಿನ ಕೌಶಲ್ಯ, ಲೆಕ್ಕಾಚಾರದ ವಿಚಾರ ತಿಳಿದಿರಬೇಕೆಂದು ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಸಂಸ್ಥೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 10ನೇ ದಿನದಲ್ಲಿ ಶಾಲಾ ವಠಾರದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಯುತ […]