2 ಅಕ್ಟೋಬರ್ 1869 ರಂದು ನಮ್ಮ ಭಾರತಾಂಬೆಯ ಪುಣ್ಯಗರ್ಭದಲ್ಲಿ ಜನಿಸಿ, ಭಾರತಾಂಬೆಯ ಕೀರ್ತಿಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿ. ಗಾಂಧಿ ಎಂದರೆ ಯಾರೊಬ್ಬರೂ ಮರೆಯಲಾಗದ ಭಾವ. ಜಗತ್ತಿಗೆಲ್ಲಾ ಶಾಂತಿ ಪಾಠಮಾಡಿದ ಶಾಂತಿ ದೂತ. ಆಧುನಿಕ ತಂತ್ರಜ್ಞಾನ ಯುಗದಲ್ಲೂ ಸದಾ ಕಾಡುವ ಶಕ್ತಿ. ದೇಶಕಾಲಗಳನ್ನು ಮೀರಿದ ವ್ಯಕ್ತಿ, ಇವರು ವ್ಯಕ್ತಿಯಷ್ಟೇ ಅಲ್ಲ ಚಿಂತನೆಗಳ ಜಾಲವಾಗಿದ್ದಾರೆ. ಆದರೆ ನಮ್ಮ ದುರ್ದೈವವೆಂದರೆ ಅಂದಿನಿoದ ಇಂದಿನವರೆಗೂ ಅಂತಹ ಮತ್ತೊಬ್ಬ ಮಹಾನ್ ಚೇತನ ಭಾರತಾಂಬೆಯ […]
Tag: j R Krishnamurthy
ಸಂವಿಧಾನ ಓದು – ಒಂದು ಚಿಂತನೆ
ಪ್ರಜಾಪ್ರಭುತ್ವವನ್ನು ಬಲಪಡಿಸಿ ಅದರ ಮೌಲ್ಯ ಮತ್ತು ತತ್ವಗಳನ್ನು ಎತ್ತಿಹಿಡಿಯಲು ವಿಶ್ವಸಂಸ್ಥೆಯ ಸಾಮಾನ್ಯಸಭೆಯು 2007 ರಲ್ಲಿ ಸೆಪ್ಟಂಬರ್ 15 ಅನ್ನು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಎಂದು ಅಂಗೀಕರಿಸಿದೆ. ಹಾಗಾಗಿ ನಮ್ಮ ಕರ್ನಾಟಕ ಸರ್ಕಾರವು ವಿಧಾನಸೌಧದಲ್ಲಿ ಸೆಪ್ಟಂಬರ್ 15 ರಂದು 10 ಲಕ್ಷ ಮಕ್ಕಳೊಂದಿಗೆ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದೆ. 2023 ರ ಜೂನ್ 30 ರಂದು ಕರ್ನಾಟಕ ಸರ್ಕಾರವು ಶಾಲಾ-ಕಾಲೇಜು ಅಸೆಂಬ್ಲಿಗಳಲ್ಲಿ ಈ ಸಂವಿಧಾನ […]
ದಾಸಶ್ರೇಷ್ಟ ಕನಕದಾಸರು
ಕರ್ನಾಟಕದ ಹರಿದಾಸಭಕ್ತ ಶ್ರೇಷ್ಟರಲ್ಲಿ ಒಬ್ಬರಾಗಿದ್ದ ಕನಕದಾಸರು ರಣರಂಗದಕಲಿ, ಜನಪ್ರಿಯದೊರೆ, ಸಮರ್ಥ ಆಡಳಿತಗಾರ, ಕವಿ, ಸಂತ, ಕೀರ್ತನಾಕಾರ, ಸಂಗೀತಗಾರ, ವಿಚಾರವಂತ ಮತ್ತು ಸಮಾಜ ಸುಧಾರಕರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರೆಂಬುದು ನಿಜಕ್ಕೂ ಹೆಗ್ಗಳಿಕೆಯೇ. ಇವರು ಪುರಂದರದಾಸರ ಸಮಕಾಲೀನರು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಕಾಗಿನೆಲೆಯ ಸಮೀಪದ ‘ಬಾಡ’ ಎಂಬ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆಸಿಗ್ಗಾವಿ ತಾಲ್ಲೂಕಿನ ಬಾಡ) ಬೀರಪ್ಪನಾಯಕ ಮತ್ತು ಬಚ್ಚಮ್ಮ ಕುರುಬ ದಂಪತಿಗಳ […]