ಕುಂದಾಪುರ (ಜು,23): ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಸಹಯೋಗದಲ್ಲಿ ಆಯೋಜಿಸಲಾದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಸಾಹಿತಿ ಜಗದೀಶ್ ದೇವಾಡಿಗ ಉಪ್ಪುಂದ ಅವರಿಗೆ ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ ಗುಡಸಿ ಅವರು ಕಣವಿ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರೋ.ನಿಜಲಿಂಗಪ್ಪ ಮಟ್ಟಿಹಾಳ , ಧಾರವಾಡದ ಕನಕ ಅಧ್ಯಯನ ಪೀಠದ ಕ.ವಿ.ವಿ ಮುಖ್ಯಸ್ಥ ಡಾ.ಆರ್.ಸಿ.ಹಿರೇಮಠ,ಗದಗ ಡಾ.ವಿ.ಬಿ.ಪ್ರತಿಷ್ಠಾನ ಅಧ್ಯಕ್ಷ ಡಾ.ವಿ.ವಿ.ಹಿರೇಮಠ ,ಹಿರಿಯ ಸಾಹಿತಿ ಸುರೇಶ್ ಕೋರಕೊಪ್ಪ ಬೆಳಗಾವಿ,ಧಾರವಾಡದ […]
Tag: jaggu devadiga
ಹಕ್ಕಿ & ಪುಟಾಣಿಗಳು
ನಭದಿ ಹಾರುವ ಹಕ್ಕಿಗಳೆ ನಮ್ಮಯ ಕೂಗನು ಆಲಿಸಿ ಹಾರುವ ಆಸೆಯು ಮನದಲಿ ಹುಟ್ಟಿದೆ ನಮಗೂ ಹಾರಲು ಕಲಿಸುವಿರಾ..? ಅಷ್ಟು ಎತ್ತರ ಹೇಗೆ ಏರಿದಿರಿ ನಮಗೂ ಸ್ವಲ್ಪ ತಿಳಿಸುವಿರಾ? ಗಾಳಿಯ ಪಟದಂತೆ ಮೇಲೆ ಕೆಳಗೆ ತೇಲುತಾ ಆಡುತಾ ಮೆರೆಯುವಿರಿ ಸಾಲುಸಾಲಾಗಿ ಹಾರುವ ಹಕ್ಕಿಗಳೆ ನಮಗೂ ಶಿಸ್ತನು ಕಲಿಸಿದಿರಿ ಭೂಮಿಯ ತುಂಬಾ ಚಿಣ್ಣರ ದಂಡು ಕೇಕೆಯ ಹಾಕುತಾ ನಲಿಯುತಿದೆ ಬೇಗನೆ ಬನ್ನಿರಿ ನಮ್ಮೊಡನೆ ಸರ್ರನೆ ಇಳಿಯುತ ಭೂಮಿಯ ಕಡೆ ಜೊತೆ ಜೊತೆಯಾಗಿ ನಲಿಯುವ […]
“ದೇಗುಲವೀ ದೇಹ”
ಹೃದಯವು ಬಲೂನಲ್ಲ ….ಆದರೂ ಗಾಳಿ ತುಂಬಿಸಿಕೊಳ್ಳುತ್ತೆರಕ್ತವು ನೀರಲ್ಲ …ಆದರೂ ದೇಹದೊಳಗೆ ಹರಿಯುತ್ತಿರುತ್ತೆಹೊಟ್ಟೆಯು ಚೀಲವಲ್ಲ…ಆದರೂ ಆಹಾರ ತುಂಬಿಸಿಕೊಳ್ಳುತ್ತೆಕೈಕಾಲುಗಳು ಯಂತ್ರವಲ್ಲ…ಆದರೂ ಪ್ರತಿಕ್ಷಣವೂ ಚಲನೆಯಲ್ಲಿರುತ್ತೆ ಎಲುಬುಗಳು ಕಬ್ಬಿಣವಲ್ಲ …ಆದರೂ ದೇಹಕ್ಕೆ ರಕ್ಷಣೆ ನೀಡುತ್ತೆಕೈ-ಬೆರಳುಗಳು ಅಳತೆಯ ಕೋಲಲ್ಲ…ಆದರೂ ಅಳತೆಗೆ ಉಪಯೋಗವಾಗುತ್ತೆಚರ್ಮ ಕಂಬಳಿಯಲ್ಲ…..ಆದರೂ ಬಿಸಿಲು ಮಳೆ ಚಳಿಗೆ ಕವಚವಾಗುತ್ತೆಕಣ್ಗಳೆರಡು ಸಮುದ್ರವಲ್ಲ….ಆದರೂ ದುಃಖದಿ ಉಕ್ಕಿ ಹರಿಯುತ್ತೆಮೆದುಳು ಸಾಧನವಲ್ಲ… ಆದರೂ ದೇಹದಾಂಗವ ಶೋಧಿಸುತ್ತಿರುತ್ತೆ… ಕವನ : ಜಗದೀಶ್ ಮೇಲ್ಮನೆ ಉಪ್ಪುಂದ
ಯುವ ಸಾಹಿತಿ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರಿಗೆ ಸನ್ಮಾನ
ಉಪ್ಪುಂದ(ಡಿ.28): ಯುವ ಸಾಹಿತಿ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೇಶಪಾಂಡೆ ಪ್ರತಿಷ್ಠಾನ ಮತ್ತು ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ಇವರು ನೀಡಿರುವ 2020ನೇ ಸಾಲಿನ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ “ಕಾವ್ಯ ಭೂಷಣ ಪ್ರಶಸ್ತಿ” ಪಡೆದಿರುವ ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ರವರ ಸಾಹಿತ್ಯ ಕ್ಷೇತ್ರದಲ್ಲಿನ ರಾಜ್ಯಮಟ್ಟದ ಸಾಧನೆಯನ್ನು ಗುರುತಿಸಿ ಡಿ.23 ರಂದು ಶ್ರೀ ಕೃಷ್ಣಲಲಿತ ಕಲಾಮಂದಿರ […]
ಬದುಕು ನೀಡಿದ ದೇವರು
ಬದುಕಿನ ಪಯಣದಲ್ಲಿ ತಾಯಿಯಷ್ಟೇ ತಂದೆ ಎನ್ನುವ ದೇವರ ಮಾರ್ಗದರ್ಶನ ಅತ್ಯವಶ್ಯಕ. ನನ್ನ ಜೀವನದ ಯಶಸ್ಸಿನ ಹಾದಿ ನನ್ನ ತಂದೆ. ಅಪ್ಪ ನಡೆದ ದಾರಿ,ಅಪ್ಪನ ಅನುಭವದ ಬದುಕು,ಸ್ವಾಭಿಮಾನ ಶಿಸ್ತಿನ ಜೀವನ ನಡೆಸಿ ಕಷ್ಟದ ಬದುಕ ಸರಿದೂಗಿಸಲು ಪಟ್ಟಿರುವ ಪಣ ನನ್ನ ಬದುಕಿನ ಬಹು ದೊಡ್ಡ ಪಾಠ. ಅಪ್ಪನ ಕಷ್ಟದ ಜೀವನವೇ ನನಗೆ ಶಿಸ್ತಿನ ಪಾಠವನ್ನು ಕಲಿಸಿದೆ ಎಂದರೆ ಅತಶಯೋಕ್ತಿಯಾಗದು.ಅಪ್ಪನ ನೇರ ನುಡಿ,ಸರಳ ಸ್ವಭಾವದ ವ್ಯಕ್ತಿತ್ವ, ತಿದ್ದಿ ಹೇಳುವ ಪರಿಯು ನನ್ನ ಸಾಧನೆಗೆಸ್ಪೂರ್ತಿಯಾಗಿದೆ. […]
ಸಂಬಂಧ
ಮಾನವ ಸಂಬಂಧಗಳ ನಿರ್ವಹಣೆ ಇದು ಅತ್ಯಂತ ಕಷ್ಟಕರ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ. ಏಕೆಂದರೆ ಆಧುನಿಕತೆಯ ಬದುಕಿನಲ್ಲಿ ಸಂಬಂಧಗಳು ವಿಮುಖ ಗೊಳ್ಳುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಜಾಗತೀಕರಣದ ನಾಗಾಲೋಟಕ್ಕೆ ಸಿಲುಕಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮೆಲ್ಲರನ್ನು ಕಾಡತೊಡಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಮಾನವ ಸಂಬಂಧಗಳ ಮೌಲ್ಯತೆಗೆ ಮತ್ತು ಪಾವಿತ್ರ್ಯತೆಗೆ ಇದ್ದ ಬೆಲೆ ಇವತ್ತು ಪಾಶ್ಚಾತೀಕರಣ ಜೀವನ ಶೈಲಿಯಿಂದಾಗಿ ಪ್ರವಾಹದ ಹರಿದು ಹೋಗುತ್ತಿರುವ ಕೊಳಕು ನೀರಿನಂತಾಗಿದೆ. ವಾಸ್ತವವಾಗಿ ಇಂದಿನ ದಿನಗಳಲ್ಲಿ ನೆನಪಿಗೆ […]