ಕುಂದಾಪುರ (ಡಿ,1): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು, ಮೂಡ್ಲಕಟ್ಟೆ, ಕುಂದಾಪುರ ಇದರ ಕಾಮರ್ಸ್ ಅಸೋಸಿಯೇಷನ್ ವೇದಿಕೆಯ ಅಡಿಯಲ್ಲಿ ಸ್ಟೂಡೆಂಟ್ ರೆಕಾಗ್ನಿಷನ್ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು. ನವೆಂಬರ್ ತಿಂಗಳಲ್ಲಿ ನೆಡೆದ CSEET ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಹೊಂದಿದ ಹನ ಶೇಕ್ ದ್ವಿತೀಯ ಬಿ ಕಾಂಮ್ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಶ್ಲಾಗಿಸಲಾಯಿತು . ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ರಾಮಕೃಷ್ಣ ಹೆಗಡೆ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರು, ಐಎಂಜೆ ಇನ್ಸ್ಟಿಟ್ಯೂಷನ್ಸ್, […]
Tag: mitk
ಎಂಐಟಿ ಕುಂದಾಪುರ: ವಿಶೇಷ ಸಂವಾದ ಕಾರ್ಯಕ್ರಮ
ಕುಂದಾಪುರ(ಸೆ,28): ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24 ರ ಅಂಗವಾಗಿ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ನ ಪ್ರಧಾನ ತಂತ್ರಜ್ಞಾನ ಮಾರ್ಗದರ್ಶಕ ಶ್ರೀ ಶ್ರೀಪಾದ ಹೆಬ್ಬಾರ್ ಅವರಿಂದ ಕಾರ್ಪೊರೇಟ್ ಜಗತ್ತಿನಲ್ಲಿ ತಂತ್ರಜ್ಞಾನವನ್ನು ನಿಯಂತ್ರಿಸುವುದು- ಪ್ರವೃತ್ತಿಗಳು, ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಯಿತು. ಕಾರ್ಪೊರೇಟ್ ದೈತ್ಯರ ಉದಾಹರಣೆಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಶ್ರೀ ಶ್ರೀಪಾದ ಹೆಬ್ಬಾರ್ ಸಲಹೆ ನೀಡಿದರು. ವಿಷಯಗಳ ಮೂಲಭೂತ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮೂಲ ಲೇಖಕರು […]
ಎಂಐಟಿ ಕುಂದಾಪುರ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ
ಕುಂದಾಪುರ(ಸೆ.21): ಇಲ್ಲಿನ ಎಂಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24ರ ಅಂಗವಾಗಿ, ಎನ್ಐಟಿಕೆ ಸುರತ್ಕಲ್ನ ಸಿಎಸ್ಇ ವಿಭಾಗದ ಪ್ರಾಧ್ಯಾಪಕ ಡಾ. ಮೋಹಿತ್ ತಹಿಲಿಯಾನಿ ಅವರಿಂದ ವೃತ್ತಿಪರ ಬೆಳವಣಿಗೆಯಲ್ಲಿ ಸಂಘದ ಸದಸ್ಯತ್ವದ ಪಾತ್ರ*ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ಅವರು ವಿದ್ಯಾರ್ಥಿಗಳಿಗೆ ಅದರ ಪ್ರಾಮುಖ್ಯತೆ, ಅನುಕೂಲಗಳು, ಸ್ಕಾಲರ್ಶಿಪ್ಗಳು ಮತ್ತು ವಿದ್ಯಾರ್ಥಿಗಳು ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿದ್ದರೆ ಅವರಿಗೆ ಇರುವ ಜಾಗತಿಕ ಅವಕಾಶಗಳನ್ನು ಐಇಇಇ ಯ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸದಸ್ಯತ್ವ ಶುಲ್ಕವನ್ನು ಪಾವತಿಸಿ […]
ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆ: 77ನೇ ಸ್ವಾತಂತ್ರ್ಯ ದಿನಾಚರಣೆ
ಮೂಡ್ಲಕಟ್ಟೆ(ಆ,17): ಇಲ್ಲಿನ ಐಎಂಜೆ ಸಮೂಹ ಸಂಸ್ಥೆಗಳು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಅವರು ಮೂಡ್ಲಕಟ್ಟೆನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜೆನ್ನಿಫರ್ ಫ್ರೀಡಾ ಮಿನೇಜಸ್ ಮತ್ತು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ ಪಟೇಲ್ ಉಪಸ್ಥಿತಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬ್ರಾಂಡ್ ಬಿಲ್ಡಿಂಗ್ ನಿದೇರ್ಶಕರಾದ ಡಾ.ರಾಮಕೃಷ್ಣ ಹೆಗಡೆ ಉಪ ಪ್ರಾಂಶುಪಾಲರುಗಳಾದ ಪ್ರೊ. ಮೆಲ್ವಿನ್ ಡಿ ಸೋಜಾ, ಶ್ರೀ […]
ಐಐಟಿ ವಿದ್ಯಾರ್ಥಿಯಾಗಿ ಪ್ರಣಮ್ಯ ಜಿ.ಎಚ್. ಆಯ್ಕೆ
ಕುಂದಾಪುರ (ಜು,29): ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್ಪುರ ಪಶ್ಚಿಮ ಬಂಗಾಳದ ವಿದ್ಯಾಸಂಸ್ಥೆಗೆ 2023-24 ನೇ ಸಾಲಿನ ಬಾಹ್ಯಾಕಾಶ ಸಂಶೋಧನಾ ಶಿಕ್ಷಣದ ವಿಭಾಗದ ಎಂಜಿನಿಯರಿಂಗ್ ಪದವಿ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆಯಿಂದ ಪ್ರಣಮ್ಯ ಜಿ.ಎಚ್. ಆಯ್ಕೆಯಾಗಿದ್ದಾರೆ. ಇವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಕುಂದಾಪುರ ವೆಂಕಟರಮಣ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ ರಾಜ್ಯಕ್ಕೆ 7 ನೆ ರ್ಯಾಂಕ್ ಪಡೆದಿದ್ದಾರೆ.
ಮೂಡ್ಲಕಟ್ಟೆ ಎಂ ಐ ಟಿ: ವನಮಹೋತ್ಸವ ಕಾರ್ಯಕ್ರಮ
ಕುಂದಾಪುರ(ಜು.09): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಅಬ್ದುಲ್ ಕರೀಮ್ ಅವರು ಮಾತನಾಡಿ ಉತ್ತಮವಾದ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಹೇಳಿ , ಅದರ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ತದನಂತರ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ವನಮಹೋತ್ಸ ಆಚರಣೆಗೆ ಚಾಲನೆ ನೀಡಿದರು. 2000ಕ್ಕೂ […]
ಐ ಎಂ ಜೆ ಐ ಎಸ್ ಸಿ ಕಾಲೇಜು ಮೂಡ್ಲಕಟ್ಟೆ :ಶಿಕ್ಷಕ-ರಕ್ಷಕ ಸಭೆ
ಕುಂದಾಪುರ ( ಜು:4): ಐ ಎಂ ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕುಂದಾಪುರ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆಯ “ಸಂವಾದ” ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಶೈಕ್ಷಣಿಕ ವರ್ಷದ ಎಲ್ಲಾ ಕಾರ್ಯಚಟುವಟಿಕೆಗಳನ್ನು ತಿಳಿಸಿ ಪೋಷಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರೊಂದಿಗೆ, ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್ ರವರು, ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ| ಅಹಮದ್ ಖಲೀಲ್ ರವರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಸುಮನರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಐ ಎಂ ಜೆ ಐ ಎಸ್ ಸಿ ಕಾಲೇಜು ಮೂಡ್ಲಕಟ್ಟೆ – ಕಾಲೇಜು ವಾರ್ಷಿಕೋತ್ಸವ
ಕುಂದಾಪುರ (ಜು,4): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಇತ್ತೀಚೆಗೆ ಗಿ ನೆರವೇರಿತು. ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು. ಮುಖ್ಯ […]
ಎಂ ಐ ಟಿ ಮೂಡ್ಲಕಟ್ಟೆ: ಹೊಸ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ಕುಂದಾಪುರ(ಜೂ,15): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹೊಸ ಇಂಜಿನಿಯರಿಂಗ್ ಕೋರ್ಸ್ ಇನ್ಫರ್ಮೇಷನ್ ಸೈನ್ಸ್ & ಇಂಜಿನಿಯರಿಂಗ್ ಅನ್ನು ಆರಂಭಿಸಲು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಇಂದ ಅನುಮೋದನೆ ದೊರೆತಿದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಕೋರ್ಸ್ ನ್ನು ಆಯ್ಕೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟು ಬೇಡಿಕೆ ಹೆಚ್ಚಿದ್ದರಿಂದ ಈ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಅರಂಭಿಸುತ್ತಿದ್ದೇವೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಾಲೇಜಿನ […]
ಎಂಐಟಿಕೆ ಮೂಡ್ಲಕಟ್ಟೆ : ವಿದ್ಯಾರ್ಥಿ ಚಂದನ್ ಕುಮಾರ್ ರವರ ಸಮಾಜಮುಖಿ ಕಾರ್ಯ ಪ್ರಶಂಸನೀಯ
ಕುಂದಾಪುರ ( ಜೂ,10): ಇಲ್ಲಿನ ಎಂಐಟಿ ಕಾಲೇಜಿನ ಇ ಎಂಡ್ ಸಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಚಂದನ್ ಕುಮಾರ್ ಸಿ.ಎನ್ ಓರ್ವ ಸಮಾಜಮುಖಿ ವಿದ್ಯಾರ್ಥಿಯಾಗಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಕಲಿಕೆಯಲ್ಲಿ ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವ ಇವರ ಸಾಮಾಜಿಕ ಕಳಕಳಿ ಪ್ರಶಂಸನೀಯ. ಅವರು ಬಿಡುವಿನ ಸಮಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಫಲಾಪೇಕ್ಷೆಯಿಲ್ಲದೆ ತರಗತಿಗಳನ್ನು ನಡೆಸಿದ್ದರು ಮತ್ತು ಆ ಮಕ್ಕಳಿಗೆ ಉತ್ತಮ ಅಂಕ ಬಂದಿರುತ್ತದೆ. ಹಳ್ಳಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ತಿಳುವಳಿಯ […]