ಕುಂದಾಪುರ (ಜುಲೈ 04): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತಕಲಾ ಸಂಘ ಹಾಗೂ ಕನ್ನಡ ಸಂಘದ ಸಂಯೋಜಕತ್ವದಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರಕ್ಕೆ ವಿದ್ಯಾರ್ಥಿಗಳಿಂದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮವನ್ನು ಜುಲೈ 04ರಂದು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಯುವವಾಣಿ ಕಾರ್ಯಕ್ರಮಕ್ಕೆ ವಿವಿಧ ಕಾರ್ಯಕ್ರಮ ನೀಡಿದರು. ಈ ಸಂದರ್ಭ ಆಕಾಶವಾಣಿ ಮಂಗಳೂರಿನ ಕಾರ್ಯಕ್ರಮ ಅಧಿಕಾರಿ ದೇವು ಹನೆಹಳ್ಳಿ, ಕಾಲೇಜಿನ ಕನ್ನಡ ಸಂಘದ ಸಂಘದ ಸಂಯೋಜಕಿ ಶ್ರೀಮತಿ ರೇಷ್ಮಾ ಶೆಟ್ಟಿ, ಲಲಿತಕಲಾ […]
Day: July 7, 2023
ಹೆಚ್.ಎಂ.ಎಂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ: ಶಿಕ್ಷಕ – ಪೋಷಕರ ಸಭೆ
ಕುಂದಾಪುರ(ಜು,7): ಕುಂದಾಪುರ ಎಜುಕೇಶನ್ ಸೊಸೈಟಿ ಯ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಜು .06 ರ ಗುರುವಾರದಂದು ಶಿಕ್ಷಕ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ. ಭಟ್ ಪೋಷಕರಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು. ಸಹಾಯಕ ಮುಖ್ಯ ಶಿಕ್ಷಕಿ ಆರತಿ ಶೆಟ್ಟಿ ಶೈಕ್ಷಣಿಕ ವರ್ಷದ ಸಂಪೂರ್ಣ ಮಾಹಿತಿಯನ್ನು ಪೋಷಕರಿಗೆ ನೀಡಿದರು. ಶೈಕ್ಷಣಿಕ ಸಂಯೋಜಕರಾದ ವಿಲ್ಮಾ ಡಿ ಸಿಲ್ವಾರವರು ಪೂರ್ವ […]
ಐ ಎಂ ಜೆ ಐ ಎಸ್ ಸಿ ಕಾಲೇಜು ಮೂಡ್ಲಕಟ್ಟೆ :ಶಿಕ್ಷಕ-ರಕ್ಷಕ ಸಭೆ
ಕುಂದಾಪುರ ( ಜು:4): ಐ ಎಂ ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕುಂದಾಪುರ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆಯ “ಸಂವಾದ” ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಶೈಕ್ಷಣಿಕ ವರ್ಷದ ಎಲ್ಲಾ ಕಾರ್ಯಚಟುವಟಿಕೆಗಳನ್ನು ತಿಳಿಸಿ ಪೋಷಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರೊಂದಿಗೆ, ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್ ರವರು, ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ| ಅಹಮದ್ ಖಲೀಲ್ ರವರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಸುಮನರವರು ಕಾರ್ಯಕ್ರಮವನ್ನು ನಿರೂಪಿಸಿದರು.










