ಕುಂದಾಪುರ (ಜೂ,4) 2022-23 ನೇ ಸಾಲಿಗೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು : ಕೆ.ಎಸ್ .ಸಿ .ಎಸ್. ಟಿ ಅನುದಾನವನ್ನು ಪಡೆದಿವೆ. ಎಲೆಕ್ಟ್ರಾನಿಕ್ಸ್ ವಿಭಾಗದ ಸುಮನ್ ಕಾನ್ ಆರ್ ಬಾಗೇವಾಡಿ, ಪ್ರಥಮ ರಾಜೇಶ್ ರಾಯ್ಕರ್, ವೀರೇಂದ್ರ ಪಿ ಗೌಡರ್, ರಘು ಬಿ ನಾಯ್ಕರ್ “ಐಒಟಿ ಬಳಸಿ ಟ್ರಾನ್ಸ್ ಫಾರಮರ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್” ಎಂಬ ತಮ್ಮ ಯೋಜನೆಯ […]
Tag: mitk
ಎಂಐಟಿಕೆ ಮೂಡ್ಲಕಟ್ಟೆ ಕಾಲೇಜು : ವಾರ್ಷಿಕೋತ್ಸವ
ಮೂಡ್ಲಕಟ್ಟೆ (ಮೇ,29): ಇಲ್ಲಿನ ಎಂಐಟಿಕೆ ಕಾಲೇಜಿನ ವಾರ್ಷಿಕೋತ್ಸವವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಚಿಪ್ಸಿ ಐ.ಟಿ ಸೆಲೂಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಾಂಭವಿ ಭಂಡಾರ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯಗಳ ಜೊತೆಗೆ ಉತ್ತಮ ಅಂಕ ತೆಗೆಯುವುದು ಮುಖ್ಯ ಎಂದರು. ಸಂಸ್ಥೆಯ ಧ್ಯೇಯ ವಾಕ್ಯವಾದ “ಸತ್ಯಂವದ ಧರ್ಮಂ ಚರ” ಬಹಳ ಅರ್ಥಪೂರ್ಣವಾಗಿದೆ […]
ಐ ಎಮ್ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ: ಮಂಗಳೂರು ವಿ.ವಿ ಥ್ರೋಬಾಲ್ ಪಂದ್ಯಾವಳಿ- ಆಳ್ವಾಸ್ ಮೂಡುಬಿದಿರೆ ಚಾಂಪಿಯನ್
ಮೂಡ್ಲಕಟ್ಟೆ (ಮೇ,21): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ ಕುಂದಾಪುರ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರಿಗಾಗಿ ನಡೆದ ಅಂತರ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಮೂಡುಬಿದಿರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್ ಪಟ್ಟ ಅಲಂಕರಿಸಿತು . ಈ ಅಂತರ ವಲಯ ಪಂದ್ಯಾವಳಿಗೂ ಮುನ್ನ ಇದೇ […]
ಕುಂದಾಪುರ: ಎಂಐಟಿಕೆ ಸ್ಕಿಲ್-ಎ-ಥೈನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ
ಕುಂದಾಪುರ (ಮೇ,08): ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ವಿದ್ಯಾರ್ಥಿಗಳ ತಂಡವು ಯು ಐ ಪಾಥ್ ರವರು ನಡೆಸಿದ ಸ್ಕಿಲ್-ಎ-ಥೋನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ಆರನೇಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯು ‘ರೊಬೋಟಿಕ್ ಯಾಂತ್ರೀಕರಣ ಪ್ರಕ್ರೀಯೆ ಪೌರತ್ವದಲ್ಲಿ ದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳನ್ನು ಗುರುತಿಸುವ ಗುರಿಹೊಂದಿದೆ. ಎಂಐಟಿ ಕುಂದಾಪುರ ತಂಡ 200 ಬಾಟ್ಗಳನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಜಯಗಳಿಸಿದೆ. ಸ್ಕಿಲ್-ಎ-ಥಾನ್ 2022 ಸ್ಪರ್ಧೆಯು ನಾಗರಿಕ ಡೆವೆಲಪರ್ರನ್ನು […]
ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆ: ಪದ್ಮಶ್ರೀ ಡಾ. ಕಿರಣ್ ಸೇತ್ರವರೊಂದಿಗೆ ಸಂವಾದ
ಮೂಡ್ಲಕಟ್ಟೆ( ಎ,24): ಇಲ್ಲಿನ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದೆಹಲಿ ಐಐಟಿಯ ಪೂರ್ವ ಪ್ರಾಧ್ಯಾಪಕರಾದ ಹಾಗೂ ಸ್ಪಿಕ್ಮಕೆ ಸಂಸ್ಥೆಯು ಸ್ಥಾಪಕರಾದ ಪದ್ಮಶ್ರೀ ಡಾ. ಕಿರಣ್ ಸೇತ್ರವರೊಂದಿಗೆ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮನಸ್ಸನ್ನು ಬೇಕಾದಕಡೆ ಕೇಂದ್ರಿಕರಿಸುವುದು ಹೇಗೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ದಿಸೆಯಲ್ಲಿ ಯೋಗ ಹಾಗೂ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅವರು ಯಾವ ತರಬೇತಿ ಇಲ್ಲದೇ ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಉದಾಹರಣೆಯನ್ನು ನೀಡಿ […]
ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ :ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ:(ಏ:18): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀಯುತ ಜಯಕರ್ ಶೆಟ್ಟಿಯವರು ನೆರವೇರಿಸಿ, ಪ್ರತಿಯೊಂದು ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕಗಳು ಪ್ರಾರಂಭಗೊಳ್ಳಬೇಕು ಎಂದರು . ಮಾನವೀಯತೆಯ ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹದ್ದು, “ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಯಾರು ಕಷ್ಟದಲ್ಲಿ ಇರುತ್ತಾರೆಯೋ ಅಂತವರಿಗೆ ಸಹಾಯ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಯುವ ರೆಡ್ ಕ್ರಾಸ್ ಕುಂದಾಪುರ ಇದರ ಸಂಯೋಜಕರಾದ ಶ್ರೀಯುತ ಸತ್ಯನಾರಾಯಣ್ ಪುರಾಣಿಕ್ ಇವರು ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಹಾಗೆಯೇ […]
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ಡೇ ಸಂಭ್ರಮ
ಕುಂದಾಪುರ(ಎ:06): ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿಕೊಂಡರು. ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಜೆನಿಫರ್ ಫ್ರೀಡಾ ಮಿನೇಜೆಸ್ ಹಾಗೂ ಐ.ಎಂ.ಜೆ. ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ದೋಮ ಚಂದ್ರಶೇಖರ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಮತ್ತು […]
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ವಿಶ್ವ ಜಲ ದಿನಾಚರಣೆ
ಕುಂದಾಪುರ(ಮಾ,29): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಇಕೋ ಕ್ಲಬ್ ಇದರ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಇವರು ಆಗಮಿಸಿ ನೀರಿನ ಮಹತ್ವ ಮತ್ತು ಸಂರಕ್ಷಣೆ ವಿಷಯದ ಕುರಿತು ವಿಚಾರ ವಿನಿಮಯ ಮಾಡಿದರು. ನೀರನ್ನು ಜೀವ ಜಲ ಎಂದು ಕರೆಯುತ್ತಾರೆ. ಇತ್ತೀಚಿನ […]
ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆ:ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ ವಿಷಯದ ಕುರಿತು ಕಾರ್ಯಗಾರ
ಕುಂದಾಪುರ(ಮಾ 27): ಇಲ್ಲಿನ ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆಯಲ್ಲಿ ‘ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ’ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐ. ಎಂ. ಜೆ. ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೊIದೋಮ ಚಂದ್ರಶೇಖರ್ ಅವರು ವಿಷಯದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. “ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚಕ್ಕೆ ವಿದ್ಯಾರ್ಥಿಗಳು ಅಣಿಯಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಳ್ಳಬಹುದಾದ ವಿಷಯದ ಕುರಿತು ಮಾತನಾಡುತ್ತಾ, […]
ಮೂಡ್ಲಕಟ್ಟೆ:ವಿದ್ಯಾ ಅಕಾಡೆಮಿ ಸ್ಕೂಲ್ ವಾರ್ಷಿಕೋತ್ಸವ
ಮೂಡ್ಲಕಟ್ಟೆ(ಮಾ.27): ಇಲ್ಲಿನ ವಿದ್ಯಾ ಅಕಾಡೆಮಿ ಸ್ಕೂಲಿನ ವಾರ್ಷಿಕೋತ್ಸವವು ಇತ್ತಿಚಿಗೆ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕುಂದಾಪುರದ ಹೆಮ್ಮಾಡಿಯ ಲಕ್ಷ್ಯ ಕ್ಲಿನಿಕ್ ವೈದ್ಯರಾಗಿರುವ ಅಮ್ಮಾಜಿ ಪಿ ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಶಾಲಾ ವಾರ್ಷಿಕೋತ್ಸವವು ಎಳೆಯರಿಗೆ ಜೀವನ ಪರ್ಯಂತ ಸ್ಮರಣೀಯ ಕ್ಷಣಗಳನ್ನು ನೀಡುವ ಅತ್ಯಂತ ಮಹತ್ವದ ದಿನ,ಶಾಲೆಯು ಮಕ್ಕಳಿಗೆ ಮನೆಯ ವಾತಾವರಣದ ಹೊರತಾಗಿ ಹೊರಗಿನ ವಾತಾವರಣವನ್ನು ಅರಿತುಕೋಳ್ಳಲು ಬಹಳ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಉನ್ನತಿಯನ್ನೆ ಧೈರ್ಯವಾಗಿಟ್ಟುಕೊಂಡು ಶಾಲೆಯು ಮುನ್ನಡೆಯುತ್ತಿರುವುದು ಪ್ರಶಂಸನೀಯ […]