ಉಡುಪಿ (ಜ.26): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ರಾಜೇಂದ್ರ ಸುವರ್ಣ ಹಿರಿಯಡ್ಕ ಆಯ್ಕೆಯಾಗಿದ್ದಾರೆ. ಜನವರಿ26 ರಂದು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಂಘಟನೆಯ16 ನೇ ವಾರ್ಷಿಕ ಸಭೆಯಲ್ಲಿ 2022-24 ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಾಡೋಜ ಡಾ. ಜಿ ಶಂಕರ್ ಯವರ ಉಪಸ್ಥಿತಿಯಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಶ್ರೀಮತಿ ಗುಲಾಬಿ ,ಪ್ರಧಾನ ಕಾರ್ಯದರ್ಶಿಯಾಗಿ ರವೀಶ ತೆಕ್ಕೆಟ್ಟೆ, ಕೋಶಾಧಿಕಾರಿಯಾಗಿ ರವಿರಾಜ ಕಳವಾಡಿ ಆಯ್ಕೆಯಾಗಿದ್ದಾರೆ.ಈ […]
Tag: mogaveera society
ವಿಶಿಷ್ಟ ಚೇತನರೊಂದಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರವಿರಾಜ ಕಳವಾಡಿ
ಅಂಪಾರು (ಡಿ,22) :ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ,ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಹಾಗೂ ಬೈಂದೂರು – ಶಿರೂರು ಘಟಕದ ಸಹಕಾರದೊಂದಿಗೆ ,ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಯವರು ತಮ್ಮ ಹುಟ್ಟುಹಬ್ಬವನ್ನು ಡಿ,20 ರಂದು ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ವಿಶಿಷ್ಟ ಚೇತನ ಮಕ್ಕಳೊಂದಿಗೆ ಬೆರೆತು ಅವರ ಜೊತೆ ಸಹಭೋಜನ ಹಾಗೂ ಸಿಹಿತಿಂಡಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಮೊಗವೀರ ಯುವಸಂಘಟನೆ ಉಡುಪಿ […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ದ 2021 – 23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲೋಹಿತಾಶ್ವ ಆರ್. ಬಾಳಿಕೆರೆ ಆಯ್ಕೆ
ಹೆಮ್ಮಾಡಿ (ಅ, 03) : ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ದ 2021 – 23 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಟೋಬರ್,03 ರಂದು ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ “ಮತ್ಯಜ್ಯೋತಿ” ಸಭಾಂಗಣದಲ್ಲಿ ಆಯೋಜಿಸಿದ ಹೆಮ್ಮಾಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ಸದಸ್ಯತ ಅಭಿಯಾನ ಚಾಲನೆ 2020-21 ಕಾರ್ಯಕ್ರಮದಲ್ಲಿ ನಡೆಯಿತು. ಅಧ್ಯಕ್ಷರಾಗಿ ಲೋಹಿತಾಶ್ವ ಆರ್. ಕುಂದರ್ ಬಾಳಿಕೆರೆ, ಉಪಾಧ್ಯಕ್ಷರಾಗಿ ಚಂದ್ರಶೇಖರ […]
ಮೊಗವೀರ ಯುವ ಸಂಘಟನೆ, ಬೈಂದೂರು- ಶಿರೂರು ಘಟಕ: ಸದಸ್ಯತ್ವ ನವೀಕರಣ ಹಾಗೂ ಸದಸ್ಯತ್ವ ನೋಂದಾವಣಿ ಅಭಿಯಾನ
ಬೈಂದೂರು (ಸೆ,30): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ,ಬೈಂದೂರು- ಶಿರೂರು ಘಟಕದ ಸದಸ್ಯತ್ವ ನವೀಕರಣ ಹಾಗೂ ನೂತನ ಸದಸ್ಯತ್ವ ನೋಂದಾವಣಾ ಅಭಿಯಾನಕ್ಕೆ ಸಪ್ಟೆಂಬರ್,26. ರಂದು ಸಂಘಟನೆಯ ಆಡಳಿತ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವರಾಮ್ ಕೆ. ಎಂ. ಅವರು ಅಧ್ಯಕ್ಷತೆ ವಹಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ಸ್ವರ್ಣಕಲಶ ಸಮರ್ಪಣೆಯ ಬೈಂದೂರು ವಲಯ ಸಮಿತಿಯನ್ನು ರಚಿಸಲಾಯಿತು. ಸ್ವರ್ಣಕಲಶ ಸಮಿತಿಯ ಕುಂದಾಪುರ […]
ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ :ಪದಪ್ರದಾನ ಸಮಾರಂಭ
ಕೋಟೇಶ್ವರ(ಸೆ,21): ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಇದರ ಹದಿನಾರನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟೇಶ್ವರ ಘಟಕದ ನಿಕಟಪೂರ್ವ ಅಧ್ಯಕ್ಷರಾದ ರವೀಶ್ ಎಸ್. ಕೊರವಡಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೊಗವೀರ ಸಂಘಟನೆ (ರಿ) ಉಡುಪಿ ಇದರ ಜಿಲ್ಲಾಧ್ಯಕ್ಷರಾದ ಶಿವರಾಮ ಕೆ.ಎಂ ರವರು ಮುಂದಿನ ಎರಡು ವರ್ಷಗಳ ಸಾಲಿಗೆ ಆಯ್ಕೆಯಾದ […]
ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ :ಸ್ವರ್ಣ ಕಳಶ ಸಮಿತಿ ಕುಂದಾಪುರ ವಲಯದ ಸಭೆ
ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು. ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, […]
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ : ಕೊರೋನ ಲಸಿಕಾ ಅಭಿಯಾನ
ಕೋಟೇಶ್ವರ(ಸೆ.6): ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಕೋಟೇಶ್ವರ ಘಟಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರದ ಸಹಭಾಗಿತ್ವದಲ್ಲಿ ಸೆಪ್ಟೆಂಬರ್,4 ರಂದು ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಉಚಿತ ಕೊರೋನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.217 ಡೋಸ್ ಲಸಿಕೆ ಹಾಕುವ ಮೂಲಕ ಅಭಿಯಾನ ಯಶಸ್ವಿಯಾಯಿತು. ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ಡಾ. ಜಿ. ಶಂಕರ್ ರವರು ಕರೋನ ಸಮಯದಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಸ್ಪಂದಿಸಿದ ರೀತಿ ಮತ್ತು ಕೋಟೇಶ್ವರ ಸಂಘಟನೆಯ […]
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಕೋಟೇಶ್ವರ (ಸೆ. 01) : ಮೊಗವೀರ ಯುವ ಸಂಘಟನೆ (.ರಿ) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ವತಿಯಿಂದ ಇತಿಹಾಸ ಪ್ರಸಿದ್ದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಸ್ವಚ್ಚಗೊಳಿಸುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕೋಟೇಶ್ವರ ಘಟಕದ ನಿಯೊಜಿತ ಅಧ್ಯಕ್ಷರಾದ ಸುನೀಲ್ ಜಿ ನಾಯ್ಕ್, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಕೋಶಾಧಿಕಾರಿ ಪ್ರದೀಪ್ ಮೊಗವೀರ, ಮಹಿಳಾ ಸಂಘಟನೆಯ ಅಧ್ಯಕ್ಷರಾದ ಅನುಸೂಯ ಕೆದೂರು ಇವರ ನೇತ್ರತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಘಟಕದ ಸ್ಥಾಪಕಾಧ್ಯಕ್ಷರಾದ […]
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ- ಬೈಂದೂರು-ಶಿರೂರು ಘಟಕ : ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮ
ಬೈಂದೂರು (ಆ, 15) : ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು-ಶಿರೂರು ಘಟಕದ ಸ್ವತಂತ್ರ ದಿನದ ಅಮೃತೋತ್ಸವದ ಸಂಭ್ರಮವು ಸಂಘಟನೆಯ ಆಡಳಿತ ಕಛೇರಿಯಲ್ಲಿ ಆಗಸ್ಟ್ 15, ರಂದು ಜರುಗಿತು. ಕಾರ್ಯಕ್ರಮದ ಅಂಗವಾಗಿ ಧ್ವಜವಂದನೆ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಧ್ವಜಾರೋಹಣ ವನ್ನು ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಕುಂದರ್ ನೆರವೇರಿಸಿದರು. ಅರಣ್ಯ ಇಲಾಖೆಯು ಪ್ರಾಯೋಜಿಸಿದ ಸಸಿಗಳನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ […]