ಬೈಂದೂರು(ಅ,4): ಉಡುಪಿ ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಕಡಲ ತೀರದಲ್ಲಿ ಒಂದಾದ ಅಳ್ವೆಗದ್ದೆ ಬೀಚ್ ನಲ್ಲಿ ಇಂದು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ, ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬೀಚ್ ಅಭಿವೃದ್ಧಿಯ ದೃಷ್ಟಿಯಿಂದ ‘ಕಡಲ ಕಿನಾರೆಯಲ್ಲಿ ಉದ್ಯಾನವನ’ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಪ್ರವಾಸಿಗರಿಗೆ ನೆರಳು ನೀಡುವ ಹಾಗೂ ಮರಳನ್ನು ಸಂರಕ್ಷಿಸುವ […]
Tag: mogaveera society
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ : ತಲ್ಲೂರಿನ ನಾರಾಯಣ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ನಾಡೋಜ ಡಾ.ಜಿ.ಶಂಕರ್ ರವರ 67 ನೇ ಹುಟ್ಟು ಹಬ್ಬ ಆಚರಣೆ
ತಲ್ಲೂರು(ಆ.05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 67 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಅ .05 ರಂದು ಆಚರಿಸಲಾಯಿತು. ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಜೊತೆಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು.ಮೊಗವೀರ […]
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದಿಂದ ಸಮುದ್ರ ಪೂಜೆ
ಕೋಟೇಶ್ವರ( ಆ,12): ಬೀಜಾಡಿ ಕಡಲತೀರದಲ್ಲಿ ಮೊಗವೀರ ಯುವ ಸಂಘಟನೆ(ರಿ),ಉಡುಪಿ ಇದರ ಕೋಟೇಶ್ವರ ಘಟಕ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು. ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ಚಿಕ್ಕುಅಮ್ಮ ದೇವರಿಗೆ ಪೂಜೆ ಸಲ್ಲಿಸಿ ಸುಮಾರು 250 ಜನ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಸಮುದ್ರ ತೀರಕ್ಕೆ ತೆರಳಿ ಸಮುದ್ರ ದೇವನಿಗೆ ಪೂಜೆಸಲ್ಲಿಸಿ ಬಾಗೀನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಗುರಿಕಾರರುಗಳು, ಭಾಗದ ಮೀನುಗಾರರು ಉಪಸ್ತಿತರಿದ್ದರು. […]
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ: ರಕ್ತದಾನ ಶಿಬಿರ
ಹೆಮ್ಮಾಡಿ (ಜೂ,12): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ,ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇದರ “ಮತ್ಸ ಜ್ಯೋತಿ” ಸಭಾಂಗಣದಲ್ಲಿ ಜೂನ್,12 ರಂದು ನಡೆಯಿತು. ಮೊಗವೀರ ಮಹಾಜನ ಸೇವಾ ಸಂಘ (ರಿ.) ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಅಧ್ಯಕ್ಷರಾದ […]
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು: ಸಾಧಕರಿಗೆ ಸನ್ಮಾನ
ಕೋಟೇಶ್ವರ(ಏ.29): ಕೋಟೇಶ್ವರದ ಮಾರ್ಕೊಡಿನ ನಾಗಯಕ್ಷಿ ದೇವಸ್ಥಾನ ದ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ನಾಗಯಕ್ಷಿ ಯಕ್ಷಕೂಟ ಇದರ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಏ.23ರಂದು ಜರುಗಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಹಾಗೂ ಬಡಗು ತಿಟ್ಟಿನ ಪ್ರಸಿದ್ದ ಭಾಗವತರಾದ ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ
ಬ್ರಹ್ಮಾವರ( ಏ.28): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ, ಮೊಗವೀರ ಯುವಸಂಘಟನೆ (ರಿ.),ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿಮೇ 4 ರಂದು ನಡೆಯಲಿರುವ 13ನೇ ವರ್ಷದ ಉಚಿತ ಸಾಮೂಹಿಕ ಸರಳ ವಿವಾಹದ ಪೂರ್ವಭಾವಿ ವೀಳ್ಯಶಾಸ್ತ್ರ ಕಾರ್ಯಕ್ರಮ ಏ.27 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆಯಿತು. .ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಹಾಗೂ ಅವರ ಪತ್ನಿ ಶಾಲಿನಿ ಜಿ. ಶಂಕರ್, ಮಗಳು […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ
ಬ್ರಹ್ಮಾವರ( ಏ,23): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ,ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ.) ,ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಮೊಗವೀರ ಸಮುದಾಯದ 13 ನೇ ವರ್ಷದ ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ ಏ.23ರಂದು ಬ್ರಹ್ಮಾವರದ ಶಾಮಿಲಿ ಶನಾಯ ಸಭಾಭವನದಲ್ಲಿ ನಡೆಯಿತು. ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಇದರ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾಮೂಹ ವಿವಾಹ ಕಾರ್ಯಕ್ರಮದ […]
ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ: ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಕೋಟೇಶ್ವರ:( ಏ,17): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ ವತಿಯಿಂದ ಮೂವರು ಮಕ್ಕಳನ್ನು ಕಳೆದುಕೊಂಡು , ದುಡಿಮೆಯ ವಯಸ್ಸು ಮೀರಿದ ಅಸಹಾಯಕ ಕುಟುಂಬಕ್ಕೆ ಸಂಘಟನೆಯ ವತಿಯಿಂದ ನಿರ್ಮಿಸಿ ಕೊಟ್ಟ ಮನೆ “ಶ್ರೀ ಕೃಷ್ಣ” ಇದರ ಗ್ರಹ ಪ್ರವೇಶ ಏ.16 ರಂದು ಜರುಗಿತು. ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಜಗದೀಶ್ ಮಾರ್ಕೋಡು ರವರು ಉದ್ಘಾಟನೆಗೊಳಿಸಿ, ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಕೋಟೇಶ್ವರ ಘಟಕದ ಅಧ್ಯಕ್ಷ […]
ಎ.16ಕ್ಕೆ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ರಥೋತ್ಸವ
ಹೆಮ್ಮಾಡಿ (ಏ,7): ಕುಂದಾಪುರ ತಾಲೂಕಿನ ಪ್ರಮಖ ದೇವಾಲಯಗಳಲ್ಲಿ ಒಂದಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಇದೇ ಎಪ್ರಿಲ್ 16 ರ ಶನಿವಾರ ದಂದು ನಡೆಯಲಿದೆ. ರಥೋತ್ಸವದ ಪ್ರಯುಕ್ತ ಎ.14ರಿಂದ 18ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ: ಕುಂದಾಪುರ ಘಟಕದ ಪದಪ್ರದಾನ ಸಮಾರಂಭ
ಕುಂದಾಪುರ(ಮಾ.28): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಮಾ.27 ರಂದು ಕುಂದಾಪುರದ ಕುಂಭಾಶಿ ರಾಧಾಬಾಯಿ ವೆಂಕಟ್ರಮಣ ಪ್ರಭು ರಂಗಮಂದಿರ (ಕೊಯಾಕುಟ್ಟಿ) ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ […]










