ಕುಂದಾಪುರ (ಜ.27): ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆದ ಸ್ಕೌಟ್ ಹಾಗೂ ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತ್ರಾಡಿ-ವಂಡ್ಸೆಯ ವಿಜಯ ಮಕ್ಕಳಕೂಟ ಶಾಲೆಯ ವಿದ್ಯಾರ್ಥಿನಿ ಸಿಂಚನ ಕ್ರಷ್ಣ ಮೊಗವೀರ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. ಇಕೆ ಕುಂದಾಪುರದ ಬಾಳಿಕೆರೆ ನಿವಾಸಿ ಶ್ರೀಮತಿ ಶ್ಯಾಮಲಾ ಹಾಗೂ ಶ್ರೀ ಕ್ರಷ್ಣ ಮೊಗವೀರ ರವರ ಪುತ್ರಿ.
Tag: mogaveera society
ಜೆ ಸಿ ಐ ಬೈಂದೂರು ಸಿಟಿ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕಕ್ಕೆ ಯುವ ಪ್ರೇರಣಾ ಪ್ರಶಸ್ತಿ ಪ್ರದಾನ
ಹೆಮ್ಮಾಡಿ(ಜ.30): ಜೆ.ಸಿ. ಐ ಬೈಂದೂರು ಸಿಟಿ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ಪ್ರತಿಷ್ಠಿತ ಘಟಕವಾದ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಗಳನ್ನು ಗುರುತಿಸಿ ಯುವ ಪ್ರೇರಣಾ ಪ್ರಶಸ್ತಿ ನೀಡಿ ಗುರುತಿಸುವ ಕಾರ್ಯಕ್ರಮವನ್ನು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ.30 ರಂದು ಹಮ್ಮಿಕೊಳ್ಳಲಾಯಿತು. ಜೆ.ಸಿ. ಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆ.ಸಿ.ಎಚ್.ಜಿ.ಎಫ್ ಅನಿತಾ ಆರ್. ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದರು. ಸನ್ಮಾನವನ್ನು ಸ್ವೀಕರಿಸಿ […]
ಮೊಗವೀರ ಯುವ ಸಂಘಟನೆ- ಹೆಮ್ಮಾಡಿ ಘಟಕದ ನೂತನ ಅಧ್ಯಕ್ಷರಾಗಿ ದಿನೇಶ್ ಕಾಂಚನ್ ಬಾಳಿಕೆರೆ ಆಯ್ಕೆ
ಹೆಮ್ಮಾಡಿ (ಜ.20): ಮೊಗವೀರ ಯುವ ಸಂಘಟನೆ(ರಿ),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇದರ 2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ಕಾಂಚನ್ ಬಾಳಿಕೆರೆ, ಕಾರ್ಯದರ್ಶಿಯಾಗಿ ಜಗದೀಶ ನೆಂಪು ಹಾಗೂ ಕೋಶಾಧಿಕಾರಿಯಾಗಿ ವಿಜಯ ಕಾಂಚನ್ ನಾಡ ಆಯ್ಕೆಯಾಗಿದ್ದಾರೆ. ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ಸಭಾ ಭವನ ದಲ್ಲಿ ಜನವರಿ 20 ರಂದು ನಡೆದ 2022- 24ನೇ ಸಾಲಿನ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹೆಮ್ಮಾಡಿ ಘಟಕದ ಹಾಲಿ ಅಧ್ಯಕ್ಷರಾದ ಲೋಹಿತಾಶ್ವ ಆರ್.ಕುಂದರ್ ಕಾರ್ಯಕ್ರಮದ […]
ಮೊಗವೀರ ಯುವ ಸಂಘಟನೆ- ಹೆಮ್ಮಾಡಿ ಘಟಕ: ಬಗ್ವಾಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ
ಹೆಮ್ಮಾಡಿ (ಜ.20): ಮೊಗವೀರ ಯುವ ಸಂಘಟನೆ(ರಿ),ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ವಠಾರದಲ್ಲಿ ಜನವರಿ 19 ರಂದು ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಮೊಗವೀರ ಯುವ ಸಂಘಟನೆ(ರಿ.), ಉಡಯಪಿ ಜಿಲ್ಲೆ ಇದರ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡ್ಕ ಅವರು ಆಗಮಿಸಿ ಹೆಮ್ಮಾಡಿ ಘಟಕದ ಸೇವೆಯನ್ನು ಶ್ಲಾಘಿಸಿದರು. ಈ ಸಂರ್ಭದಲ್ಲಿ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್.ಕುಂದರ್ ಹಾಗೂ ಸಂಘಟನೆಯ ಪದಾಧಿಕಾರಿಗಳು, ಘಟಕದ ಮಾಜಿ […]
ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಾವಣೆ ಅವಧಿ ಜನವರಿ 25 ರ ತನಕ ವಿಸ್ತರಣೆ
ಉಡುಪಿ (ಜ .19): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ-ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆರೋಗ್ಯ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನೋಂದಾವಣೆ ಅಭಿಯಾನದ ಅವಧಿಯನ್ನು ಜನವರಿ 25 ರ ತನಕ ವಿಸ್ತರಿಸಲಾಗಿದೆ. ಹೆಮ್ಮಾಡಿ ಭಾಗದ ಸಾರ್ವಜನಿಕರು ಈ ಆರೋಗ್ಯ ಕಾರ್ಡನ್ನು ಹೆಮ್ಮಾಡಿ ಬಸ್ ನಿಲ್ದಾಣ ದ ಸಮೀಪದ […]
ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ ತಗ್ಗರ್ಸೆ: ಜ.19, 20 ರಂದು ವಾರ್ಷಿಕ ಮಹೋತ್ಸವ
ಬೈಂದೂರು (ಜ.12): ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ, ಮೊಗವೀರ ಗರಡಿ ತಗ್ಗರ್ಸೆ ಇದರ ಸಪರಿವಾರ ದೇವರ ಕಲಾಭಿವೃದ್ಧಿ ಹೋಮ, ಶ್ರೀ ನಾಗದೇವರಿಗೆ ನವಕಾಧಿವಾಸ ಹಾಗೂ ವಾರ್ಷಿಕ ಮಹೋತ್ಸವ ಇದೇ ಜನವರಿ 19 ಮತ್ತು 20ರಂದು ನಡೆಯಲಿದೆ. ವಾರ್ಷಿಕ ಗಂಡಸೇವೆ ಹಾಲು ಹಬ್ಬ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಜ.14 ಮತ್ತು 15 ರಂದು ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜನವರಿ 14 ಮತ್ತು 15 ರಂದು ನಡೆಯಲಿದೆ. ಜಾತ್ರಾ ಪ್ರಯುಕ್ತ ಧಾರ್ಮಿಕ ಸಭಾಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿರುವುದೆಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಹೆಮ್ಮಾಡಿ : ಜಿ.ಶಂಕರ್ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭ
ಹೆಮ್ಮಾಡಿ ( ಡಿ,06): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ [ರಿ.] ಅಂಬಲಪಾಡಿ, ಉಡುಪಿ ಮತ್ತು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಮಾಹೆ-ಮಣಿಪಾಲ ಇವರ ಸಹಯೋಗದೊಂದಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಆಕರ್ಷಕ ಯೋಜನೆಯಾದ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಅಭಿಯಾನ ಡಿಸೆಂಬರ್ 05 ರಿಂದ ಡಿಸೆಂಬರ್ 25 ರ ತನಕ ಹೆಮ್ಮಾಡಿಯ ಬಸ್ ನಿಲ್ದಾಣ ದ ಸಮೀಪದ […]
ಮೊಗವೀರ ಯುವ ಸಂಘಟನೆ -ಸಾಂಸ್ಕೃತಿಕ ಸ್ಪರ್ಧೆ: ಹೆಮ್ಮಾಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ
ಕುಂದಾಪುರ (ನ.27): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಸಹಯೋಗದಲ್ಲಿ ಕುಂದಾಪುರ ಘಟಕದ ಆತಿಥ್ಯದಲ್ಲಿ ಕುಂದಾಪುರದ ಮೊಗವೀರ ಭವನದಲ್ಲಿ ನವೆಂಬರ್ 26 ರಂದು ನಡೆದ ಜಿಲ್ಲಾ ವ್ಯಾಪ್ತಿಯ ಅಂತರ್ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ-ಸಂಗಮ ದಲ್ಲಿ ಹೆಮ್ಮಾಡಿ ಘಟಕವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿಮ್ಮ ಆಯ್ಕೆ ವಿಭಾಗದಲ್ಲಿ ಪ್ರಥಮ ಸ್ಥಾನ, ಸಿನಿಮಾ ನ್ರತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಪ್ರಹಸನ ವಿಭಾಗದಲ್ಲಿ ದ್ವೀತಿಯ ಸ್ಥಾನವನ್ನು […]
ಮೊಗವಿರ್ಸ್ ಬಹ್ರೈನ್ ನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಉಚ್ಚಿಲ(ಆ,30): ಮೊಗವೀರ್ಸ್ ಬಹ್ರೈನ್ ನ ವತಿಯಿಂದ ಮಂಗಳೂರು, ಬಾರ್ಕೂರು ಹಾಗೂ ಬಗ್ವಾಡಿ ಹೋಬಳಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿಶೇಷ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಕ್ಟೋಬರ್ 30 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ಅನ್ನ ಛತ್ರ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಉಚ್ಚಿಲದ ಗೌರವ ಸಲಹೆಗಾರ […]










