ಕೋಟೇಶ್ವರ ( ನ .19): ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ ಕುಂದಾಪುರ ಇಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇಲ್ಲಿನ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಮ್ ದೇವಾಡಿಗ ಇವನು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಸ್ಯಾಕ್ಸೋಫೋನ್ ವಾದಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿಯ […]
Tag: narendra gangolli
ಬೈಂದೂರು ಉತ್ಸವದಲ್ಲಿ ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ
ಬೈಂದೂರು( ನ.19): ಬೈಂದೂರು ಉತ್ಸವ- 2024 ರಲ್ಲಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇಲ್ಲಿಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಇವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಿತು. ತವಿಲ್ ನಲ್ಲಿ ನಿತ್ಯಾನಂದ ದೇವಾಡಿಗ, ತಾಳದಲ್ಲಿ ಮಾಧವ ದೇವಾಡಿಗ, ಗೆಜ್ಜೆಯಲ್ಲಿ ಹರ್ಷವರ್ಧನ ಖಾರ್ವಿ ಸಹಕರಿಸಿದರು.
ಸರಸ್ವತಿ ವಿದ್ಯಾಲಯದಲ್ಲಿ ಆಡುಂಬೊಲ ಕಾರ್ಯಕ್ರಮ
ಗಂಗೊಳ್ಳಿ(ನ,16) : ಗ್ರಾಮೀಣ ಕ್ರೀಡೆಗಳು ಮಕ್ಕಳಲ್ಲಿ ಆರೋಗ್ಯವನ್ನು ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಇಂತಹ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳುವಂತೆ ಅವಕಾಶಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಓ ರಾಜ ಖಾರ್ವಿ ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಜಿಎಸ್ವಿಎಸ್ ಅಸೋಸಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಗ್ರಾಮೀಣ ಆಟಗಳ ಕ್ರೀಡಾಕೂಟ ಆಡುಂಬೊಲವನ್ನು ಉದ್ಘಾಟಿಸಿ ಮಾತನಾಡಿದರು. ಸರಸ್ವತಿ […]
ನರೇಂದ್ರ ಎಸ್ ಗಂಗೊಳ್ಳಿ ಅವರ ಕೃತಿ ಬಿಡುಗಡೆ
ಗಂಗೊಳ್ಳಿ( ಆ,25): ನವೆಂಬರ್ 01 ರಂದು ಕನ್ನಡ ಸಂಘ ಕಾಂತಾವರ (ರಿ ) ವತಿಯಿಂದ ಕಾಂತಾವರದಲ್ಲಿ ನಡೆಯಲಿರುವ ಕಾಂತಾವರ ಉತ್ಸವ 2024ರಲ್ಲಿ ಕಾಂತಾವರ ಕನ್ನಡ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ ನಾ. ಮೊಗಸಾಲೆ ಅವರ ಗೌರವ ಸಂಪಾದಕತ್ವದಲ್ಲಿ ಮತ್ತು ಹಿರಿಯ ಸಾಹಿತಿ ಡಾ. ಬಿ ಜನಾರ್ದನ್ ಭಟ್ ಅವರ ಸಂಪಾದಕತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸುವ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಡಿ […]
ಗಂಗೊಳ್ಳಿಯಲ್ಲಿ ಗಮನ ಸೆಳೆದ ಅಯೋಧ್ಯಾ ರಾಮ ಮಂದಿರ
ಗಂಗೊಳ್ಳಿ (ಆ,19): ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವದ ಮೆರವಣಿಗೆಯಲ್ಲಿ ಗಂಗೊಳ್ಳಿಯ ಟೀಮ್ ವಿಶ್ವಸಾಗರ ಪ್ರದರ್ಶಿಸಿದ ಅಯೋಧ್ಯ ರಾಮ ಮಂದಿರದ ಟ್ಯಾಬ್ಲೋ ತನ್ನ ಸೌಂದರ್ಯದಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಧನುರ್ಧಾರಿ ರಾಮನ ಪ್ರತಿಕೃತಿ ಮತ್ತು ರಾಮ ಸ್ಮರಣೆಯ ಮೌಲಿಕ ನುಡಿಗಳ ಜೊತೆಯಲ್ಲಿಯೇ ಇತ್ತೀಚೆಗಷ್ಟೇ ನಿಧನರಾದ ಪ್ರಮಾಣಿಕತೆ ಮತ್ತು ಯಶಸ್ಸಿನ ಪ್ರೇರಕ ಶಕ್ತಿಯಾಗಿ ದೇಶದ ಅಭಿವೃದ್ಧಿಗೆ ಅಪಾರವಾದ ಮಹೋನ್ನತ ಕೊಡುಗೆಯನ್ನು ನೀಡಿದ ಅಪ್ರತಿಮ ದೇಶಪ್ರೇಮಿ ಶ್ರೀ ರತನ್ ಟಾಟಾ ಅವರ […]
ಗಂಗೊಳ್ಳಿ: ಸ. ವಿ ಹಳೆ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ
ಗಂಗೊಳ್ಳಿ ( ಆ,08): ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಸ.ವಿ ಹಳೆ ವಿದ್ಯಾರ್ಥಿ ಸಂಘ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಪುರುಷ ಮತ್ತು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿರುವ ಭಾಸ್ಕರ್ ಎಚ್.ಜಿ ಉದ್ಘಾಟಿಸಿದರು. ಎಸ್.ವಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕವಿತಾ ಎಮ್. ಸಿ , ಸ. ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯರಾದ […]
ಎಸ್ ವಿ ವಿದ್ಯಾಲಯ ಸಮೂಹ ಸಂಸ್ಥೆ ಗಂಗೊಳ್ಳಿ : ಗಾಂಧೀಜಿ ಮತ್ತು ಶಾಸ್ತ್ರಿ ಜಯಂತಿ ಆಚರಣೆ
ಗಂಗೊಳ್ಳಿ (ಆ, 02): ಇಲ್ಲಿನ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಅಕ್ಟೋಬರ್ 2 ರಂದು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಡಾ .ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಯವರು ಮಾತನಾಡಿ ಗಾಂಧೀಜಿ ಮತ್ತು ಶಾಸ್ತ್ರಿಜಿ ಒಂದೇ ನಾಣ್ಯದ ಎರಡು […]
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಶಮಿತ್ ಖಾರ್ವಿ ರಾಜ್ಯ ಮಟ್ಟಕ್ಕೆ ಆಯ್ಕೆ
ಗಂಗೊಳ್ಳಿ ( ಆ ,01): ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಹಿಂದೂ ಪದವಿ ಪೂರ್ವ ಕಾಲೇಜು, ಶಿರ್ವ ಇವರ ಜಂಟಿ ಆಶ್ರಯದಲ್ಲಿ ಶಿರ್ವದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಥ್ರೋಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಮಿತ್ ಖಾರ್ವಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮಂಜುನಾಥ ಖಾರ್ವಿ ಮತ್ತು ರೇಖಾ […]
ಜಿಲ್ಲಾ ಮಟ್ಟದ ಟೆನ್ನಿಕಾಯ್ಟ್ ನಲ್ಲಿ ಸರಸ್ವತಿ ವಿದ್ಯಾಲಯ ಪ್ರಥಮ
ಗಂಗೊಳ್ಳಿ( ಸೆ,27): ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದಿದೆ. ಸಹನಾ ಖಾರ್ವಿ,ಮಾನ್ಯ ಖಾರ್ವಿ, ಭೂಮಿಕಾ ಖಾರ್ವಿ, ಮತ್ತು ಅಮೂಲ್ಯ ಖಾರ್ವಿ ತಂಡವನ್ನು ಪ್ರತಿನಿಧಿಸಿದ್ದರು. ಸಹನಾ ಖಾರ್ವಿ ಬೆಸ್ಟ್ […]
ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಶ್ರೀ ಆನಂದ್ ಸಿ.ಕುಂದರ್ ಆಯ್ಕೆ
ಕೋಟ(ಸೆ.27): ಗೀತಾನಂದ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ಕೊಡುಗೈದಾನಿ ಶ್ರೀ ಆನಂದ್ ಸಿ.ಕುಂದರ ರವರು ಸರಕಾರಿ ಶಾಲಾ ಎಸ್ .ಡಿ .ಎಂ .ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ ನೀಡುವ 2024 -25 ಸಾಲಿನ ಉಡುಪಿ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ .29ರಂದು ಬೆಳಗ್ಗೆ 10ಕ್ಕೆ ಆನೆಗುಡ್ಡೆ ಶ್ರೀ ವಿನಾಯಕ ಸಭಾಭವನ […]