ಗಂಗೊಳ್ಳಿ( ಸೆ,14): ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ರೇಯಾ ಮೇಸ್ತ ಇವರು ಕುಂದಾಪುರ ತಾಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ತ್ರೋಬಾಲ್ ತಂಡವನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಈಕೆ ನಾಗರಾಜ ಮೇಸ್ತ ಮತ್ತು ನಯನ ದಂಪತಿಯ ಪುತ್ರಿ.
Tag: narendra gangolli
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನರೇಂದ್ರ ಎಸ್ ಗಂಗೊಳ್ಳಿಗೆ ಸನ್ಮಾನ
ಕುಂದಾಪುರ(ಸೆ.14): ತಮ್ಮ ಒಳಗಡೆ ಎಷ್ಟೇ ನೋವುಗಳಿದ್ದರೂ ಅದನ್ನು ತೋರಿಸಿಕೊಳ್ಳದೆ ಸದಾ ಜನರಲ್ಲಿ ನಗು ತುಂಬುವ ಛಾಯಾಚಿತ್ರಗ್ರಾಹಕರು ನಿಜವಾದ ಬದುಕಿನ ಸಾರ್ಥಕತೆಯ ಸಂದೇಶವನ್ನು ಜಗತ್ತಿಗೆ ತಿಳಿಸುವಂಥವರು. ಈ ಸ್ಪರ್ಧಾತ್ಮಕ ಯುಗದಲ್ಲಿಯೂ ಪರಿಣತಿ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಗ್ರಾಹಕರ ಮನ ಗೆಲ್ಲುವ ಮೂಲಕ ಅಡೆತಡೆಗಳನ್ನು ಮೀರಿ ಬೆಳೆದು ನಿಲ್ಲುವ ಸಾಮರ್ಥ್ಯವನ್ನು ತೋರಿರುವ ಛಾಯಾಗ್ರಾಹಕರ ನಡೆ ಅಭಿನಂದನೀಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು ಯುವ ಬರಹಗಾರ […]
ತ್ರೋಬಾಲ್ ಪಂದ್ಯಾಟದಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ
ಕುಂದಾಪುರ(ಸೆ.10):ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ) ಮತ್ತು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನವನ್ನು ಗಳಿಸಿದೆ. ಸರಸ್ವತಿ ವಿದ್ಯಾಲಯದ ನವೀನ್, ಧರ್ಮೇಶ್,ಆರ್ಯನ್ ಚರಣ್, ಶರತ್, ಯತೀಶ್, ಸುಜನ್ ವೀರೇಶ್, ಶಮಿತ್ ,ನಾಗರಾಜ್, ಆದಿತ್ಯ ಮತ್ತು ಯುವರಾಜ್ ತಂಡದಲ್ಲಿ ಭಾಗವಹಿಸಿದ್ದರು. ಈ ತಂಡದ […]
ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಎಂ.ರಾಘವೇಂದ್ರ ಭಟ್ ಆಯ್ಕೆ
ಗಂಗೊಳ್ಳಿ(ಸೆ,03): ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ .ಎಂ.ರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ಎಸ್.ಎಮ್.ಎಸ್.ಪ.ಪೂ.ಕಾಲೇಜು. ಬ್ರಹ್ಮಾವರ ಜೊತೆ ಕಾರ್ಯದರ್ಶಿಗಳಾಗಿ ಬಲರಾಮ ವೈದ್ಯ ಸರ್ಕಾರಿ ಪ.ಪೂ.ಕಾಲೇಜು ಹೆಬ್ರಿ ಮತ್ತು ಹೇಮಲತಾ. ಸರ್ಕಾರಿ ಪ.ಪೂ.ಕಾಲೇಜು ಮಲ್ಪೆ ಹಾಗೂ ಕೋಶಾಧಿಕಾರಿಯಾಗಿ ಪ್ರಮೀಳಾ.ಡಿ.ಅಂಚನ್ ಸ. ಪ. ಪೂ. ಕಾಲೇಜು ತೆಂಕನಿಡಿಯೂರು ಇವರು ಆಯ್ಕೆಯಾದರು.
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ : ನಾರಾಯಣ ಗುರುಗಳ ಜನ್ಮ ದಿನಾಚರಣೆ
ಗಂಗೊಳ್ಳಿ (ಸೆ,03): ಗಂಗೊಳ್ಳಿಯ ಬಿಲ್ಲವರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು. ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಮಾತನಾಡಿ ನಾರಾಯಣ ಗುರುಗಳು ಪ್ರತಿಪಾದಿಸಿದ ಸಿದ್ದಾಂತ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಟ್ಟು ಸಮಾಜದ ಹಿತರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ:ಉಪನ್ಯಾಸಕ ಕೃಷ್ಣ ಗುಜ್ಜಾಡಿಯವರಿಗೆ ಬೀಳ್ಕೊಡುಗೆ
ಗಂಗೊಳ್ಳಿ(ಸೆ,03): ವಿದ್ಯಾರ್ಥಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾನು ಕೂಡ ಬೆಳೆಯುವುದು ಓರ್ವ ನಿಜವಾದ ಶಿಕ್ಷಕನ ಸಾಮರ್ಥ್ಯವಾಗಿರುತ್ತದೆ. ಬದುಕಿನಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಜಿ. ಎಸ್ ವಿ. ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ10 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಇದೀಗ ಸರಕಾರಿ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಬೇರೆಡೆಗೆ ತೆರಳುತ್ತಿರುವ ಭೌತಶಾಸ್ತ್ರ ಉಪನ್ಯಾಸಕ ಕೃಷ್ಣ ಗುಜ್ಜಾಡಿ […]
ಗಂಗೊಳ್ಳಿ :ಸರಸ್ವತಿ ವಿದ್ಯಾಲಯ ಪಿ ಯು ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ರಾಜಿಕ್ ರಾಜ್ಯಮಟ್ಟಕ್ಕೆ ಆಯ್ಕೆ
ಗಂಗೊಳ್ಳಿ(ಆ,31): ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ಯಾಮಿಲಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕರಾಟೆ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಬ್ದುಲ್ ರಾಜಿಕ್ ಎಪ್ಪತ್ತು ಕೆ.ಜಿ ಕೆಳಗಿನ ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಉಡುಪಿ ಜಿಲ್ಲೆಯಿಂದ ಆಯ್ಕೆ ಆಗಿರುತ್ತಾರೆ . ಸರಸ್ವತಿ […]
ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ ಗಂಗೊಳ್ಳಿ: 77ನೇ ಸ್ವಾತಂತ್ರ್ಯೋತ್ಸವ
ಗಂಗೊಳ್ಳಿ(ಆ,18): ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಯಿತು. ಗಂಗೊಳ್ಳಿಯ ಜಿ ಎಫ್ ಸಿ ಎಸ್ ಉದ್ಯೋಗಿ ನಾಗರಾಜ ಖಾರ್ವಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ. ಕೆ.ವೆಂಕಟೇಶ್ ಕೊಡೇರಿ ಮನೆ, ಗಂಗಾಧರ ಪೈ, ಬಿಲ್ಲವ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ, ವಿಜಯ ಖಾರ್ವಿ, ಭಾಸ್ಕರ ಖಾರ್ವಿ, ಲಕ್ಷ್ಮಣ ಬಿಲ್ಲವ, ಭಾಸ್ಕರ, […]
ಗಂಗೊಳ್ಳಿ : ಸರಸ್ವತಿ ವಿದ್ಯಾಲಯದಲ್ಲಿ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಗಂಗೊಳ್ಳಿ(ಆ,11):ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಹೆಚ್ಚು ಕ್ರಿಯಾಶೀಲವಾಗಿಡುವಲ್ಲಿ ಸಹಕಾರ ನೀಡುತ್ತವೆ. ಉತ್ತಮ ಬದುಕಿಗೆ ಬೇಕಾದ ಆತ್ಮವಿಶ್ವಾಸವನ್ನು ನೀಡುತ್ತವೆ ಎಂದು ಗಂಗೊಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ಎಂ ನಾಗೇಂದ್ರ ಪೈ ಹೇಳಿದರು. ಅವರು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಸೇವಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವೈಶಾಲಿ ಜಿ […]
ನಾವುಂದ ಕಾಲೇಜಿನ ಅಗ್ರಸ್ಥಾನಿ ರಾಹುಲ್ ಗೆ ನಗದು ಬಹುಮಾನ
ನಾವುಂದ (ಜು,20): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದದ್ದು ಮಾತ್ರವಲ್ಲದೆ ಬೈಂದೂರು ತಾಲೂಕಿಗೂ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ರಾಹುಲ್ ಅವರಿಗೆ 1995 -96ನೇ ಸಾಲಿನ ಕಾಲೇಜಿನ ವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳು ನೀಡಿದ 15000 ರೂಪಾಯಿ ಪ್ರೋತ್ಸಾಹ ಧನವನ್ನು ಕಾಲೇಜಿನಲ್ಲಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಪರವಾಗಿ ಮಣಿಪಾಲದ ನವಿತಾಸ್ ಲೈಫ್ ಸೈನ್ಸ್ ನಲ್ಲಿ […]