ಯಪ್ಪಾ..ಬರೋಬ್ಬರಿ 16.50 ಎಕ್ರೆ ಜಾಗ…ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಕೋಟಿ – ಕೋಟಿ ಬೆಲೆ ಬಾಳುವ ಆಸ್ತಿ ಎಂದು ಹುಬ್ಬೆರಿಸಿ ಆಶ್ಚರ್ಯ ಚಿಕಿತರಾಗಿ ಅಕ್ಕ ಪಕ್ಕದವರ ಜೊತೆ ಮಾತನಾಡುವ ಜನರನ್ನು ಕಂಡು ಹೀಗೆ ಸುಮ್ಮನೆ ಆಲೋಚಿಸತೋಡಗಿದೆ. ಆಧುನಿಕ ಬದುಕಿನ ಈ ನಾಗಾಲೋಟದಲ್ಲಿ ತಾನು,ತನ್ನದು,ತನ್ನದಷ್ಟಕ್ಕೆ ಎನ್ನುವ ಸ್ವಾರ್ಥಪರತೆಗೆ ಒಳಗಾದ ಜನತೆ ಇಂದು ಪರರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತೀರುವುದು ವಾಸ್ತವ.ಈ ಸ್ವಾರ್ಥ ತುಂಬಿದ ಜಗತ್ತೀನಲ್ಲಿ ಒಂದಿಂಚು ಭೂಮಿಗೂ ಹೊಡೆದಾಡುವ ಮನುಷ್ಯರ […]
Tag: praveen gangolli
ಹಿಂದಿ ಭಾಷೆಯ ಮೇಲೆ ಯಾಕಿಷ್ಟು ದ್ವೇಷ ?ಒಂದು ವಿಮರ್ಶೆ
ವಂದೇ ಮಾತರಂ,ಜನಗನಮನ,ಮಾ ತುಜೆ ಸಲಾಮ್ ,ಯೇ ಮೆರೆ ವತನ್ ಕೆ ಲೋಗೊ,ಸಂದೇಸೆ ಆತೆ ಹೆ ಹಮೆ ತಡಪಾತೆ ಹೆ….ಈ ಹಾಡುಗಳನ್ನು ನಾವೆಲ್ಲರೂ ಒಮ್ಮೆಯಾದರೂ ಹಾಡಿದ್ದೆವೆ.ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಒಂದೆರಡು ಕಂಬನಿ ಕಣ್ಣಂಚಲಿ ಸುರಿಸಿದ್ದೆವೆ. ಈ ಹಾಡುಗಳನ್ನು ಕೇಳುವಾಗ ಅಥವಾ ಹಾಡುವಾಗ ಮೈ ಮನಗಳಲ್ಲಿ ರೋಮಾಂಚನ ಹಾಗೂ ರಾಷ್ಟ್ರಭಕ್ತಿ ಉದ್ದೀಪನಗೊಂಡ ಅನುಭವ ಪ್ರತಿಯೊಬ್ಬ ಭಾರತೀಯನಿಗೂ ಆಗಿರುತ್ತದೆ ಎನ್ನುವುದು ನನ್ನ ಅನಿಸಿಕೆ .ಯಾಕೆಂದರೆ ಈ ಹಾಡುಗಳಲ್ಲಿ ಸ್ವಾತಂತ್ರ್ಯ ಹೋರಾಟದ ಅದೆಷ್ಟೋ ಸಂಗತಿಗಳು ಅಡಗಿದೆ. […]
ಕಪಟ ಜ್ಯೋತಿಷಿ
ಜ್ಯೋತಿಷ್ಯದ ಕುರಿತಾದ ಹುಚ್ಚು ಕುತೂಹಲ ಯಾರಿಗಿಲ್ಲಾ ಹೇಳಿ.! ಕೆಲವರು ಅಪಾರವಾಗಿ ನಂಬಿದರೆ, ಇನ್ನೂ ಕೆಲವರು ಅದೊಂದು ಮೂಡನಂಬಿಕೆ ಅಂದುಕೊಂಡು ಸಮ್ಮನಾಗುತ್ತಾರೆ.ಇನ್ನೂ ಕೆಲವರು ಕುತೂಹಲಕ್ಕಾಗಿ ಆಗಾಗ ಜ್ಯೋತಿಷಿಯ ಬಳಿ ಹೋಗುವುದುಂಟು !. ಜ್ಯೋತಿಷ್ಯ ಶಾಸ್ತ್ರಕ್ಕೆ ನಮ್ಮ ದೇಶದಲ್ಲಿ ಅದರದ್ದೆ ಆದ ಪೌರಾಣಿಕ ಮಹತ್ವ ಇದೆ.ಆದರೆ ಜ್ಯೋತಿಷ್ಯವನ್ನೇ ಅಸ್ತ್ರವಾಗಿರಿಸಿಕೊಂಡು ಜನರನ್ನು ಮೋಸಮಾಡುವವರ ನಡುವೆ ಪ್ರಾಮಾಣಿಕತೆಯಿಂದ ಜ್ಯೋತಿಷ್ಯ ಹೇಳುವವರು ಮೂಲೆಗುಂಪಾಗಿರುವುದು ವಿಪರ್ಯಾಸವೇ ಸರಿ.ಅದೇನೇ ಇರಲಿ ! ಆ ನಾಲ್ಕು ಜನ ಯುವಕರು ಜ್ಯೋತಿಷ್ಯದ ಕುರಿತಾದ […]
ಕರೋನಾ ಸೋಂಕಿತರಿಗೆ ಪ್ರಾಣವಾಯು ಪೂರೈಸಲು ಮುಂದಾದ ಕರುನಾಡ ಕರ್ಣ ಡಾ. ಜಿ. ಶಂಕರ್
ಕರಾವಳಿ, ಮಲೆನಾಡು ,ಉತ್ತರ ಕರ್ನಾಟಕ ಹೀಗೆ ರಾಜ್ಯದ ಉದ್ದಗಲಕ್ಕೂ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಶಿಕ್ಷಣ, ಆರೋಗ್ಯ ಸುರಕ್ಷಾ, ರಕ್ತದಾನ ಶಿಬಿರ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರುನಾಡೋಜಾ ಡಾ.ಜಿ.ಶಂಕರ್. ಕಂಡುಕೇಳರಿಯದ ಕರೋನಾ ನಮ್ಮ ರಾಜ್ಯವನ್ನು ಪ್ರವೇಶಿಸಿದಾಗ ಅದರ ತೀವ್ರತೆಯನ್ನು ಗಮನಿಸಿದ ಡಾ.ಜಿ.ಶಂಕರ್ ರವರು ಯುವಕರ ತಂಡವನ್ನು […]
ಕುಂದಗನ್ನಡದ ಕಂಗ್ಲೀಷ್ ಪದಗಳು
ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ. ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ […]
ಆ ದಿನ ರಾತ್ರಿ
ಆ ದಿನ ರಾತ್ರಿ ಸಮಯ 10 ಗಂಟೆ… ಊಟ ಮಾಡಿ ಮನೆಯವರೆಲ್ಲರೂ ನಿದ್ದೆಗೆ ಜಾರುತ್ತಿದ್ದ ಸಮಯ… ನಿದ್ದೆಗೆ ಜಾರಿದ ಸ್ವಲ್ಪ ಹೊತ್ತಿನಲ್ಲಿ ದೇಹದ ಉಸಿರಾಟದಲ್ಲಿ ಏರಿಳಿತವಾದ ಅನುಭವವಾಯಿತು.. ಸ್ವಲ್ಪ ಹೊತ್ತು ಎದ್ದು ಕೂತು ಮತ್ತೆ ಮಲಗಿದೆ.ಆದರೂ ಉಸಿರಾಟ ಅಸಹಜವಾಗಿತ್ತು. ಇನ್ನೆನೂ ಉಸಿರೆ ನಿಂತಂತೆ ಭಾಸವಾಯಿತು.. ಅಯ್ಯೋ ದೇವರೆ .. ಇದೆಂತ ದುರ್ವಿಧಿ.. ನನಗೆನಾದರೂ ಕರೋನಾ ಸೋಂಕು ತಗುಲಿತೆ ಎಂದು ಭ್ರಮಿತನಾದೆ.ನನ್ನಿಂದಾಗಿ ಮನೆ ಮಂದಿಯೆಲ್ಲಾ ಸಂಕಷ್ಟಕ್ಕೆ ಸಿಲುಕಿದರೆಂಬ ಭಯ ಕಾಡತೊಡಗಿತು. ಭವಿತವ್ಯದ […]