ಕುಂದಾಪುರ (ಸೆ, 6) : ಮೊಬೈಲ್, ಟಿ.ವಿ. ಯಂತಹ ಯಾವುದೇ ತಾಂತ್ರಿಕ ಉಪಕರಣಗಳಿಲ್ಲದ ಪ್ರಾಚೀನ ಕಾಲದಿಂದಲೂ ಗುರುವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದರು. ಇಂದಿಗೂ ವಿದ್ಯಾರ್ಥಿ- ಶಿಕ್ಷಕ ಸಂಬಂಧ ನಾಜೂಕತೆಯಿಂದ ಕೂಡಿದ್ದಾಗಿದೆ. ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಗಮನಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರೂ ಎಲ್ಲ ಆಯಾಮಗಳಿಂದಲೂ ಆದರ್ಶರಾಗಿರಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪಾಧ್ಯಾಪಕರಾದ ಪ್ರೊ. ಬಾಲಕೃಷ್ಣ ಭಟ್ ರವರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರುಶಿಕ್ಷಕರು ತರಗತಿಯ ಒಳಗೂ- ಹೊರಗೂ ವಿದ್ಯಾರ್ಥಿಗಳ ಜೀವನವನ್ನು ಉತ್ತಮವಾಗಿ ರೂಪಿಸುವ ವಿಧಾನಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಯವರಾದ ಶ್ರೀ ಬಾಲಕೃಷ್ಣ ಭಟ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರಿಮತಿ ಅರುಣಾ ಐತಾಳ್ ಧನ್ಯವಾದ ಸಲ್ಲಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನಾ ರವರು ಕಾರ್ಯಕ್ರಮ ನಿರೂಪಿಸಿದರು.
Tag: rns pu
ಲಯನ್ಸ್ ಕ್ಲಬ್ ಕುಂದಾಪುರ ವತಿಯಿಂದ ರಾಷ್ಟ್ರ ಧ್ವಜ ವಿತರಣೆ
ಕುಂದಾಪುರದ (ಆ.12)ಇಲ್ಲಿನಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ಆಝಾದಿ ಕಾ ಅಮೃತ್ ಮಹೋತ್ಸವ್ ‘ ಆಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್, ಕುಂದಾಪುರ ಇದರ ವತಿಯಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳಿಗೆ ರಾಷ್ಟ್ರ ಧ್ವಜ ವಿತರಣೆ ಮಾಡಲಾಯಿತು. ಲಯನ್ಸ್ ಕ್ಲಬ್, ಕುಂದಾಪುರ ಇದರ ಅಧ್ಯಕ್ಷರೂ, ಕಾಲೇಜಿನ ಪ್ರಾಂಶುಪಾಲರೂ ಆದ ಶ್ರೀ ನವೀನ್ ಕುಮಾರ ಶೆಟ್ಟಿಯವರು ರಾಷ್ಟ್ರ ಧ್ವಜಕ್ಕೆ ನೀಡಬೇಕಾದ ಗೌರವಸೂಚಕ ನಡಾವಳಿಗಳನ್ನು ವಿವರಿಸಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರಿಗೆ ಮತ್ತು ಕಛೇರಿ ಸಿಬ್ಬಂಧಿಯವರಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು.
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಉಪನ್ಯಾಸ
ಕುಂದಾಪುರ(ಜು,23):ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸಕ್ತ ಮಣಿಪಾಲದ ಎಮ್. ಐ. ಟಿ ಯಲ್ಲಿ ಎರೋನಾಟಿಕಲ್ಸ್ ನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿರುವ ಶ್ರೀ ಫ್ಲೆಕ್ಸನ್ ನಝ್ರತ್ ಇವರು ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ವಿಷಯದಲ್ಲಿ ಸರಳ ನೈಪುಣ್ಯತೆಯನ್ನು ಪಡೆದು ಸೂಕ್ತವಾದ ಔದ್ಯೋಗಿಕ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಲಭ್ಯವಿರುವ ವಿವಿಧ ಅವಕಾಶಗಳ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ದ್ವಿತೀಯ ಪಿ.ಯು. ಸಿ ವಿಜ್ಞಾನ ವಿಭಾಗದ ವೈಷ್ಣವಿ ಭಂಡಾರಿಯವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪರಸ್ಪರ ಸಹಕಾರದಿಂದ ಸೇವೆ: ಲ. ಪ್ರಕಾಶ ಟಿ. ಸೋನ್ಸ್
ಕುಂದಾಪುರ(ಜು,15):ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಪ್ರಕಾಶ ಟಿ. ಸೋನ್ಸ್ ಲಯನ್ ಕ್ಲಬ್ ಕುಂದಾಪುರದ […]
ಆರ್. ಎನ್. ಶೆಟ್ಟಿ ಪಿ. ಯು ಕಾಲೇಜು: ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಕೋಚಿಂಗ್ ತರಬೇತಿಗಳ ಉದ್ಘಾಟನೆ
ಕುಂದಾಪುರ(ಜು,2): ಪೃಕೃತಿಯ ಮೂಲಭೂತ ಸಂಗತಿಗಳನ್ನು ತಿಳಿಸುವ ಮೂಲಕ ಹೊಸ ಚಿಂತನೆಗೆ ದಾರಿ ಮಾಡಿಕೊಡುವ ವಿಜ್ಞಾನ ವಿಭಾಗದ ವಿಷಯಗಳ ಆಳದ ವಿಚಾರಗಳನ್ನು ಕಲಿಯುವಲ್ಲಿ ಸಿ.ಇ.ಟಿ, ಜೆ. ಇ. ಇ, ನೀಟ್ ಕೋಚಿಂಗ್ ಸಹಕಾರಿಯಾಗಿದೆ. ಇಂಥ ಕೋಚಿಂಗ್ ಪಡೆದ ಪರಿಣಿತರಿಗೆ ಉನ್ನತ ವ್ಯಾಸಂಗಕ್ಕೆ ಸಂಬಂಧ ಪಟ್ಟ ಸಂಶೋಧನಾ ಕೇಂದ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ ” ಎಂದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. […]
ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ: ಪಿ.ಯು. ಪರೀಕ್ಷೆಯಲ್ಲಿ ಉತ್ಕ್ರಷ್ಟ ಸಾಧನೆ
ಕುoದಾಪುರ(ಜೂ, 23):ಇಲ್ಲಿನ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 94.58% ರ ಫಲಿತಾಂಶವನ್ನು ಸಾಧಿಸಿದೆ. 388 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ,ಅದರಲ್ಲಿ 179 ಮಂದಿ ವಿಶೇಷ ಶ್ರೇಣಿ ಹಾಗೂ 155ಮಂದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಕಿಣಿ 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ಸ್ಥಾನ ಗಳಿಸಿದರೆ, ಪ್ರಗತಿ ಪೂಜಾರಿ 590 ಅಂಕ ಪಡೆದು 9ನೇ ಸ್ಥಾನಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಗುರುರಾಜ್ […]