Views: 375
ಶಂಕರನಾರಾಯಣ (ಜು, 11): ಕುಂದಾಪುರ ತಾಲೂಕಿನ ಶಂಕರನಾರಾಯಣದ ಕುಪ್ಪಾರು ಪ್ರದೇಶದಲ್ಲಿ ಯುವಾಬ್ರಿಗೇಡ್ ಶಂಕರನಾರಾಯಣದ ವತಿಯಿಂದ “ಉಸಿರು ಹಂಚೋಣ” ಶೀರ್ಷಿಕೆಯಡಿಯಲ್ಲಿ ಮನೆ-ಮನೆಗೆ ಸಂಪರ್ಕ ಮಾಡಿ ವಿವಿಧ ರೀತಿಯ ಗಿಡಗಳನ್ನು ವಿತರಿಸಿ ,ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಘಟಕದ ಪ್ರಮೋದ್ ಶಂಕರನಾರಾಯಣ, ವಿಜಯ್ ಯಡಮಕ್ಕಿ, ಕಿರಣ್ ಉಳ್ಳೂರು-74, ನಂದನ ಶಂಕರನಾರಾಯಣ, ನಿತೀಶ್ ಶಂಕರನಾರಾಯಣ, ಶ್ರೀಶ ಶಂಕರನಾರಾಯಣ, ಚೇತನ್ ಶಂಕರನಾರಾಯಣ ಪಾಲ್ಗೊಂಡಿದ್ದರು.