ಬ್ರಹ್ಮಾವರ( ನ.01): ಬೆಳಕು ಎನ್ನುವುದು ಅಂಧಕಾರವನ್ನು ಕಳೆದು ಬೆಳಕಿನೆಡೆಗೆ ಸಾಗುವ ದಿವ್ಯಮಾರ್ಗ. ಸಂಸ್ಕೃತಿ, ಸಂಪ್ರದಾಯ, ಆಚರಣೆಯ ಕುರಿತು ಅಭಿಮಾನವನ್ನು ಹೊಂದಿರುವ ಹಿನ್ನೆಲೆಯಲ್ಲಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ಸಲುವಾಗಿ ರಂಗೋಲಿ ಸ್ಪರ್ಧೆ, ಗೂಡುದೀಪ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ, ಉಪಪ್ರಾಂಶುಪಾಲರಾದಶ್ರೀಮತಿ ಸುಜಾತ ಹಾಗೂ ಎಲ್ಲಾ ಉಪನ್ಯಾಸಕರು […]
Tag: vidyalakshmi
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ
ಬ್ರಹ್ಮಾವರ(ಸೆ.15): :ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ “ಪೋಸ್ಟರ್ ಮೇಕಿಂಗ್” ಸ್ಪರ್ಧೆ ಇತ್ತೀಚೆಗೆ ನಡೆಸಲಾಯಿತು. ವಿದ್ಯಾರ್ಥಿಗಳು “ಮಾನವೀಯತೆ” ಎಂಬ ವಿಷಯದ ಕುರಿತು ಪೋಸ್ಟರ್ ಗಳನ್ನು ವಿಭಿನ್ನವಾಗಿ ತಯಾರಿಸಿದರು . ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ. ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ ಸಂಸ್ಥೆಯ ಎಲ್ಲಾ ಉಪನ್ಯಾಸಕರು, ಉಪನ್ಯಾಸಕ್ಕೇತರರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ: ಸಂಭ್ರಮದ ಸಾಂಪ್ರದಾಯಿಕ ದಿನಾಚರಣೆ
ಬ್ರಹ್ಮಾವರ (ಮೇ02): ಇಲ್ಲಿನ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ “ಸಾಂಪ್ರದಾಯಿಕ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಸದಾಕಾಲ ಶಿಸ್ತಿನಿಂದ ಸಮವಸ್ತ್ರವನ್ನು ಧರಿಸುತ್ತಿದ್ದ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನದಂದು ವಿವಿಧ ಬಗೆಯ ಉಡುಗೆಗಳಿಂದ ಕಂಗೊಳಿಸಿದರು. ವಿದ್ಯಾರ್ಥಿನಿಯರು ಸೀರೆ, ಲಂಗ ದಾವಣಿ ತೊಟ್ಟಿದ್ದರೆ ವಿದ್ಯಾರ್ಥಿಗಳು ಬಿಳಿ ಪಂಚೆ, ಶರ್ಟು ,ಕುರ್ತಾ ಹೆಗಲ ಮೇಲೊಂದು ಶಾಲು ಧರಿಸಿ ಸಂಭ್ರಮದಿಂದ ಓಡಾಡುತ್ತಾ ಗಮನ ಸೆಳೆದರು . ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ತರಗತಿಯನ್ನು ವಿವಿಧ ಆಚರಣೆಯನ್ನು ಪ್ರತಿನಿಧಿಸುವ […]
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ: ವಾರ್ಷಿಕ ಕ್ರೀಡೋತ್ಸವ
ಬ್ರಹ್ಮಾವರ(ಜು,03): ಕ್ರೀಡೆಯಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ,ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು ಎಂಬ ಉದ್ದೇಶ ಹೊಂದಿರುವ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಬ್ರಹ್ಮಾವರದ ಸರಕಾರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಇತ್ತೀಚೆಗೆ ಜರುಗಿತು. ಅತಿಥಿಗಳಾಗಿ ಶ್ರೀ ಮೊಹಮ್ಮದ್ ಆಸಿಫ್ ಜನರಲ್ ಮ್ಯಾನೇಜರ್ ಟವೆಲ್ ಪ್ರಾಜೆಕ್ಟ್ಕಕಂಪೆನಿ ಮಸ್ಕತ್, ಶ್ರೀಮತಿ ಫಾಝಿಯ ಹಾಗೂ ಬಿ ಟಿ ನಾಯಕ್ ನಿವೃತ್ತ ಉಪಪ್ರಾಂಶುಪಾಲರು ಸರಕಾರಿ ಬೋರ್ಡ್ […]