ಕೋಟೇಶ್ವರ (ಮಾ.29): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 03 ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆ ಬಳಿ ಇರುವ ಮೊಗವೀರ ಭವನದಲ್ಲಿ ಏಪ್ರಿಲ್.05 ರoದು ನಡೆಯಲಿದೆ.
ಮಾ.28 ರಂದು ಕಾರ್ಯಕ್ರಮದ ಪೂರ್ವತಯಾರಿ ಕುರಿತು ನಡೆದ ಸಭೆಯಲ್ಲಿ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ರವರು ಮಾಹಿತಿ ನೀಡಿದರು.