ಹೆಮ್ಮಾಡಿ(ಡಿ,12): ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ “ಜನತಾ ಆವಿಷ್ಕಾರ್ 2022” ವಿಭಿನ್ನ ಕಾರ್ಯಕ್ರಮವನ್ನು ಡಿ.14 ರಂದು ಕಾಲೇಜಿನಲ್ಲಿ ಆಯೋಜನೆ ಮಾಡಿರುತ್ತಾರೆ. ಪ್ರಮುಖವಾಗಿ Business day (ವ್ಯವಹಾರ ದಿನ)ಇದರೊಂದಿಗೆ ಕುಂದಾಪುರ ಹಾಗೂ ಬೈಂದೂರು ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿರುವ ಗೌರವಾನ್ವಿತ ಶ್ರೀ ಕುರ್ಮಾರಾವ್, ಅರೇಕಾ ಚಹಾದ ಮೂಲಕ ಪ್ರಸಿದ್ಧಿ ಪಡೆದಿರುವ ಉದ್ಯಮಿ ನಿವೇದನ ನೆಂಪೆ,ಮಾಜಿ ಶಾಸಕರಾದ ಶ್ರೀ ಕೆ.ಗೋಪಾಲ ಪೂಜಾರಿ,ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿಯ ಉಪನಿರ್ದೇಶಕರಾದ ಶ್ರೀ ಮಾರುತಿ, ಹಾಗೂ ಇನ್ನಿತರ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ Business dayಯಲ್ಲಿ ಬಂದಂತಹ ಲಾಭಾಂಶದ ಹಣವನ್ನು ಬೈಂದೂರು ಹಾಗೂ ಕುಂದಾಪುರ ವಲಯದ ಪ್ರೌಢಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.