ಉಡುಪಿ(ಎ,06): ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಎಪ್ರಿಲ್ 06 ರ ಗುರುವಾರ ಅಪರಾಹ್ನ ನೆಡೆದ ವಿದ್ಯಾರ್ಥಿ ದರ್ಬಾರ್ ಕಾರ್ಯಕ್ರಮದಲ್ಲಿ ಕೇರಳದಲ್ಲಿ 19 ನೇ ಶತಮಾನದ ಸಂದರ್ಭದಲ್ಲಿ ಇದ್ದ ನಂಗೆಲಿಯ ಎನ್ನುವ ಮಹಿಳೆಯ ಮೂಲಕ ಮೊಲೆ ತೆರಿಗೆ ಕಾನೂನು ನಿಂತು ಹೋದ ಬಗ್ಗೆ ಕಾಲೇಜ್ ನ ಪ್ರಾಂಗಣದಲ್ಲಿ ದಲ್ಲಿ ಉಡುಪಿಯ ರೋಬೋ ಸಾಫ್ಟ್ ಉದ್ಯೋಗಿ ಬಿ. ಇ ಪದವೀಧರೆ ಹೊನ್ನಾವರದ ಚಿಕ್ಕನಕೊಡಿಯ ಕುಮಾರಿ ಪವಿತ್ರ ರೂಪಕದ ಮೂಲಕ ವಿದ್ಯಾರ್ಥಿಗಳಿಗೆ ಅಭಿನಯ ಮಾಡಿ ತೋರಿಸಿದರು.
ಕಾಲೇಜುನ ಪ್ರಾಂಶುಪಾಲ ರಾದ ಡಾ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಕೊ ಆರ್ಡಿನೇಟರ್ ಡಾ. ಜಯರಾಮ್ ಶೆಟ್ಟಿಗಾರ್, ವಿದ್ಯಾರ್ಥಿ ದರ್ಬಾರ್ ನ ಸಂಚಾಲಕ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಕಾಲೇಜ್ ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಎ ವಿದ್ಯಾರ್ಥಿನಿ ಕುಮಾರಿ ಧನ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.