ಕುಂದಾಪುರ, (ಮೇ 13): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಅಂತಿಮ ವರ್ಷದ ಬಿ.ಕಾಂ ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಹೂಡಿಕೆದಾರರ ಅರಿವು ಕಾರ್ಯಾಗಾರವನ್ನು ನಡೆಸಲಾಯಿತು.
ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಶುಭಹಾರೈಸಿದರು.
ಕಾರ್ಯಕ್ರಮವು ಮೂರು ಆವೃತ್ತಿಯಲ್ಲಿ ನಡೆಯಿತು. ಒಂದನೇ ಆವೃತ್ತಿಯಲ್ಲಿ ಶ್ರೀ ನವೀನ್ ರೇಗೋ, ಸೆಬಿ ರಿಜಿಸ್ರ್ಡ್, ಸಿಇಪಿ, ಎರಡನೇ ಆವೃತ್ತಿಯಲ್ಲಿ ಶ್ರೀ ಲಿಯೋ ಅಮಲ್, ಫ್ರಾಂಕ್ಲಿನ್ ಟೆಂಪ್ಲಿಟಾನ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ನ ಹಿರಿಯ ಶಾಖೆಯ ವ್ಯವಸ್ಥಾಪಕ, ಮೂರನೇ ಆವೃತ್ತಿಯಲ್ಲಿ ಸ್ವಪ್ನ ಶೆಣೈ ಎಮ್., ಇನ್ವೆಸ್ಟ್ಮೆಂಟ್ ಸರ್ವಿಸ್ ಪ್ರೊಫೆಶನಲ್ ಇವರು ನಿರ್ವಹಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ವಿನಯಾ ವಿ. ಶೆಟ್ಟಿ ಮತ್ತು ಅವಿತಾ ಕೊರೆಯಾ ಅತಿಥಿಗಳನ್ನು ಪರಿಚಯಿಸಿದರು. ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ವಂದಿಸಿದರು. ವಿದ್ಯಾರ್ಥಿನಿ ಪೂರ್ಣಿಮಾ ನಿರೂಪಿಸಿದರು.