ಗಂಗೊಳ್ಳಿ(ಜೂ,4 ): ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಇವರ ವತಿಯಿಂದ ಗಂಗೊಳ್ಳಿಯ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗಾಗಿ ಉಚಿತ ನೋಟ್ ಬುಕ್ ವಿತರಣಾ ಸಮಾರಂಭವು ಜೂನ್ 10ರಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ.
ಗೋಪಾಲ ಪೂಜಾರಿಯವರು ಅಧ್ಯಕ್ಷತೆ ವಹಿಸಲಿದ್ದು, ಬಿ. ಎಸ್ ಎನ್ ಎಲ್ ನಿವೃತ್ತ ಇಂಜಿನಿಯರ್ ಅಣ್ಣಪ್ಪ ಬಿಲ್ಲವ, ಉದ್ಯಮಿಗಳಾದ ಲಕ್ಷ್ಮಣ ಬಿಲ್ಲವ ಮತ್ತು ದಿನೇಶ್ ಬಿಲ್ಲವ, ವಿಶ್ವನಾಥ್ ಭಟ್, ಜಿ.ಕೆ ವೆಂಕಟೇಶ, ಜಿ ಎ ಆರ್ ಲಕ್ಷ್ಮಣ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.